ಜೆಡಿಎಸ್ ಕಾರ್ಯಕರ್ತರ ಸಭೆ
ಹೊಳೆನರಸೀಪುರ: ‘ಹಳ್ಳಿಮೈಸೂರಿನ ಜನತೆ ನನ್ನ ರಾಜಕೀಯ ಪ್ರಾರಂಭದ ದಿನಗಳಲ್ಲಿ ನನ್ನ ಜೊತೆಗೆ ನಿಂತು, ರಾಜಕೀಯವಾಗಿ ನಾನು ದೃಢವಾಗಿ ನಿಲ್ಲಲ್ಲು ಸಹಕರಿಸಿದ್ದಾರೆ. ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ, ಶಕ್ತಿ ನೀಡಿದ ಮತದಾರರನ್ನು ಸದಾಕಾಲ, ನನ್ನ ಕಡೆ ಉಸಿರು ಇರುವ ತನಕ ಮರೆಯುವುದಿಲ್ಲ. ಕಡೆಯವರೆಗೂ ಅವರ ಸೇವೆಗೆ ಶ್ರಮಿಸುತ್ತೇನೆ’ ಎಂದು ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ತಿಳಿಸಿದರು.ತಾಲೂಕಿನ ಹಳ್ಳಿಮೈಸೂರಿನಲ್ಲಿ ಆಯೋಜನೆ ಮಾಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ‘ಹಾಸನ ಜಿಲ್ಲೆಯ ಮತದಾರರು ಒಂದಲ್ಲ ಒಂದು ಚುನಾವಣೆಯಲ್ಲಿ ನಮ್ಮ ಕುಟುಂಬದ ಕೈ ಹಿಡಿದಿದ್ದಾರೆ. ನನ್ನ ರಾಜಕೀಯದ ಅನುಭವದಲ್ಲಿ ಜಿಲ್ಲೆಯ ಯಾವ ಭಾಗಕ್ಕೆ ಏನು ಕೆಲಸ ಆಗಬೇಕಿದೆ ಎಂದು ತಿಳಿದಿದ್ದೇನೆ, ಆ ಎಲ್ಲಾ ಕೆಲಸಗಳನ್ನು ಮಾಡಿ, ಜನರಿಗೆ ಅನುಕೂಲ ಕಲ್ಪಿಸುತ್ತೇನೆ, ರೇವಣ್ಣ ಹಾಗೂ ಪ್ರಜ್ವಲ್ ಕೂಡ ಹಗಲಿರುಳು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿರುತ್ತಾರೆ’ ಎಂದು ಹೇಳಿದರು.
ಶಾಸಕ ಎ.ಮಂಜು ಮಾತನಾಡಿ, ಶಾಸಕನಾಗಿ, ಸಚಿವನಾಗಿ ಈ ಹೋಬಳಿಗೆ ಅತಿಹೆಚ್ಚು ಕೆಲಸ ಮಾಡಿದ್ದೇನೆ, ಜೆಡಿಎಸ್ ಪಕ್ಷ ಈಗ ಬಿಜೆಪಿ ಜೊತೆಯಲ್ಲೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತಿದ್ದೇವೆ. ಪಕ್ಷದ ಅಭ್ಯರ್ಥಿ ಪ್ರಜ್ವಲ್‌ನನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ, ಗೌಡರ ಅಭಿಮಾನವನ್ನು ಹೆಚ್ಚಿಸಿ ಎಂದರು.ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ತಾಲೂಕಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ, ಶಾಲಾ, ಕಾಲೇಜು, ಆಸ್ಪತ್ರೆ, ರಸ್ತೆ, ಮನೆಗಳು ಎಲ್ಲವನ್ನೂ ನೀಡಿದ್ದೇನೆ, ಸದಾ ಕಾಲ ನಿಮ್ಮ ಜೊತೆಯಲ್ಲಿದ್ದು, ನಿಮಗೆ ಸ್ಪಂದಿಸಿದ್ದೇನೆ, ಪ್ರಜ್ವಲ್ ಕೂಡ ಸಂಸದನಾಗಿ ಕಳೆದ ಐದು ವರ್ಷದಲ್ಲಿ ಅತಿಹೆಚ್ಚು ಕೆಲಸ ಮಾಡಿದ್ದಾರೆ. ಮತ್ತೆ ಅವನನ್ನು ಸಂಸದನ್ನಾಗಿ ಮಾಡಿ, ನಿಮ್ಮ ಸೇವೆ ಮಾಡಲು ಸಹಕರಿಸಿ ಎಂದು ತಿಳಿಸಿದರು.
ತಾಲೂಕಿನ ಜೆಡಿಎಸ್ ಅಧ್ಯಕ್ಷ ಪುಟ್ಟಸೋಮಪ್ಪ, ಗ್ರಾಪಂ ಅಧ್ಯಕ್ಷ ವಿಶ್ವನಾಥ್, ಇತರರು ಸಭೆಯಲ್ಲಿ ಇದ್ದರು.ಹೊಳೆನರಸೀಪುರದ ಹಳ್ಳಿಮೈಸೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಸಕ ಎ.ಮಂಜು ಇದ್ದರು.