ಮತದಾರರ ಹಕ್ಕು ಕಸಿಯುವ ಬಿಜೆಪಿ ಯತ್ನಕ್ಕೆ ತಡೆ: ಎಂ.ಬಿ. ಪಾಟೀಲ

KannadaprabhaNewsNetwork |  
Published : Sep 27, 2026, 03:00 AM IST
ಮಾಹೆಯಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳ ಜೊತೆಗೆ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಯಿತು | Kannada Prabha

ಸಾರಾಂಶ

ಬಬಲೇಶ್ವರ ಮತಕ್ಷೇತ್ರದ ಮತದಾರರ ಹಕ್ಕಿನ ಮೇಲೆ ದಾಳಿ ನಡೆಸಲು ಮುಂದಾದ ಬಿಜೆಪಿಯವರ ಕೃತ್ಯಕ್ಕೆ ಕಡಿವಾಣ ಹಾಕಲಾಗಿದ್ದು, ಕೃತ್ಯಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ಮತದಾರರ ಹಕ್ಕಿನ ಮೇಲೆ ದಾಳಿ ನಡೆಸಲು ಮುಂದಾದ ಬಿಜೆಪಿಯವರ ಕೃತ್ಯಕ್ಕೆ ಕಡಿವಾಣ ಹಾಕಲಾಗಿದ್ದು, ಕೃತ್ಯಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದೇಶದ ಅನೇಕ ಕಡೆ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಕೈ ಬಿಡುತ್ತಿರುವುದು ವರದಿಯಾಗುತ್ತಲೇ ಇದೆ. ಇದೀಗ ನನ್ನ ಸ್ವಕ್ಷೇತ್ರ ಬಬಲೇಶ್ವರದಲ್ಲೂ ಇಂಥ ಗಂಭೀರ ಕೃತ್ಯ ನಡೆದಿರುವುದು ಬೆಳವಣಿಗೆ ಬೆಳಕಿಗೆ ಬಂದಿದೆ.

ಬಬಲೇಶ್ವರದಲ್ಲಿ ಕೇವಲ 7 ವ್ಯಕ್ತಿಗಳಿಂದ 1,564 ಅರ್ಜಿಗಳು ಸಲ್ಲಿಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರಲ್ಲಿ ಬಹುತೇಕ ಮುಸ್ಮಿಂ ಮತದಾರರ ಹೆಸರಿರುವುದು ಬಿಜೆಪಿಯವರ ಮತಗಳ್ಳತನ ಯತ್ನಕ್ಕೆ ಸಾಕ್ಷಿಯಾಗಿದೆ. ಇಷ್ಟೊಂದು ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆ ಹಾಗೂ ಅವುಗಳನ್ನು ಸ್ವೀಕರಿಸಿ ಅಪ್‌ಲೋಡ್ ಮಾಡಿರುವ ಪ್ರಕ್ರಿಯೆಯ ಕುರಿತು ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಕ್ರಮ ಸಾಬೀತಾದರೆ, ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕಿಗೂ ಧಕ್ಕೆ ಆಗಲು ನಾವು ಬಿಡುವುದಿಲ್ಲ. ಈ ಹಕ್ಕಿನ ರಕ್ಷಣೆಗೆ ಕಾನೂನುಬದ್ಧ ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ. ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನಕ್ಕೆ ಕರ್ನಾಟಕದಲ್ಲಾಗಲಿ, ದೇಶದ ಯಾವುದೇ ಭಾಗದಲ್ಲಾಗಲಿ ಅವಕಾಶ ನೀಡಬಾರದು. ಬಬಲೇಶ್ವರ ಮತಕ್ಷೇತ್ರದಲ್ಲಿ ಇಂಥ ಬೇಜವಾಬ್ದಾರಿ ಕೆಲಸ ಮಾಡಿರುವ ಬಿಜೆಪಿಯವರು ಮತಗಳ್ಳತನ ಯತ್ನ ತಮಗೆ ಮುಳುವಾಗಬಹುದು. ‌ಅಲ್ಲದೇ, ಕ್ರಿಮಿನಲ್ ಕಾನೂನು ಕ್ರಮ ಎದುರಿಸಿದಾಗ ಸತ್ಯ ಹೊರಬರುತ್ತದೆ ಎಂದು ಹೆದರಿ‌ ಈಗ ತಾವೇ ನೀಡಿದ್ದ ಅರ್ಜಿಯನ್ನು ಹಿಂಪಡೆದಿರುವುದು ಅವರ ಮತಗಳ್ಳತನಕ್ಕೆ ಸಾಕ್ಷಿಯಾಗಿದೆ.ಬಬಲೇಶ್ವರ ಮತಕ್ಷೇತ್ರದ ಮತದಾರರ ಹಿತ ಕಾಪಾಡಲು ತಾವು ಸದಾ‌ ಬದ್ಧರಾಗಿರುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌ಐವಿ–ಏಡ್ಸ್‌ ಕುರಿತು ಬೀದಿ ನಾಟಕ
ಹೊರಗಿನವರ ಸ್ಪರ್ಧೆಗೆ ಸ್ಥಳೀಯರ ವಿರೋಧ