ವಿಶ್ವ ಮಟ್ಟದ ರಸಪ್ರಶ್ನೆಯ 4ನೇ ಆವೃತ್ತಿ ಗೆದ್ದ ಹಂಸಿಣಿ ಭಾಸ್ಕರ್

KannadaprabhaNewsNetwork |  
Published : Aug 29, 2025, 01:00 AM IST
ಸಿಟಿ | Kannada Prabha

ಸಾರಾಂಶ

ಚಿಕ್ಕಮಗಳೂರು: ದಿವಂಗತ ವಿ.ಜಿ ಸಿದ್ಧಾರ್ಥ ಅವರ ಸ್ಮರಣಾರ್ಥ ಅಂಬರ್ ವ್ಯಾಲಿ ಶಾಲೆ ಆಯೋಜಿಸಿದ್ದ ವಿಶ್ವ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಂಗಳೂರಿನ ಶಿಶುಗೃಹ ಶಾಲೆ ವಿದ್ಯಾರ್ಥಿನಿ ಹಂಸಿಣಿ ಭಾಸ್ಕರ್ ವಿಜೇತರಾಗಿದ್ದಾರೆ.

-ದಿವಂಗತ ವಿ.ಜಿ ಸಿದ್ಧಾರ್ಥ ಅವರ ಸ್ಮರಣಾರ್ಥ ಸ್ಪರ್ಧೆ

ಚಿಕ್ಕಮಗಳೂರು: ದಿವಂಗತ ವಿ.ಜಿ ಸಿದ್ಧಾರ್ಥ ಅವರ ಸ್ಮರಣಾರ್ಥ ಅಂಬರ್ ವ್ಯಾಲಿ ಶಾಲೆ ಆಯೋಜಿಸಿದ್ದ ವಿಶ್ವ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಂಗಳೂರಿನ ಶಿಶುಗೃಹ ಶಾಲೆ ವಿದ್ಯಾರ್ಥಿನಿ ಹಂಸಿಣಿ ಭಾಸ್ಕರ್ ವಿಜೇತರಾಗಿದ್ದಾರೆ.ಈ ಸ್ಪರ್ಧೆ ಆರಂಭಿಕ ಹಂತದಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಹಾಗೂ ದೇಶದ ಇತರೆ ರಾಜ್ಯಗಳ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯನ್ನು ಆ.23ರಂದು ಸಿದ್ಧಾರ್ಥ ಅವರ ಜನ್ಮದಿನ ದಂದು ನಡೆಸಲಾಯಿತು. ಈ ಅಂತಿಮ ಸುತ್ತಿನ ಸ್ಪರ್ಧೆ ಮುಖ್ಯ ಅತಿಥಿಯಾಗಿ ಪ್ರದ್ಮಶ್ರೀ ಪ್ರಶಸ್ತಿ ವಿಜೇತೆ ಅಂಜು ಬಾಬಿ ಜಾರ್ಜ್ ಆಗಮಿಸಿದ್ದರು.

ಈ ಅಂತಿಮ ಸುತ್ತಿನಲ್ಲಿ ಮಸ್ಕಟ್‌ನಿಂದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂಬರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಐಶ್ವರ್ಯಾ ಡಿಕೆಎಸ್ ಹೆಗಡೆ, ಅಂಜು ಬಾಬಿ ಜಾರ್ಜ್ ಹಾಗೂ ಪಿಕ್ ಬ್ರೈನ್ ಖ್ಯಾತಿಯ ಗಿರಿ ಬಾಲಸುಬ್ರಮಣ್ಯಂ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಿದರು.ಈ ರಸಪ್ರಶ್ನೆಯಲ್ಲಿ ಗೆದ್ದ ಹಂಸಿಣಿಗೆ ಒಂದು ಲಕ್ಷ ರು. ಶೈಕ್ಷಣಿಕ ಸ್ಕಾಲರ್ ಶಿಪ್ ಹಾಗೂ ಮೂವರು ರನ್ನರ್ ಅಪ್ ಗಳಿಗೆ ಐಪ್ಯಾಡ್ ನೀಡಲಾಯಿತು. ಐಶ್ವರ್ಯಾ ಡಿಕೆಎಸ್ ಹೆಗಡೆ ಮಾತನಾಡಿ ವಿದ್ಯೆ ಎಂಬುದು ಮಹಾ ಸಾಗರ ವಿದ್ದಂತೆ. ಇಲ್ಲಿ ಈಜುವ ಪ್ರತಿ ವಿದ್ಯಾರ್ಥಿಗಳಿಗೂ ಇಂತಹ ವೇದಿಕೆಗಳ ಮೂಲಕ ಸದಾವಕಾಶ ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಸಾಧನೆ ಹಾದಿಯಲ್ಲಿ ತಮ್ಮ ಯಶಸ್ಸಿನ ಹೆಜ್ಜೆ ಗುರುತು ಗಳನ್ನು ಮೂಡಿಸುತ್ತಾ ತಮ್ಮ ಶಾಲೆ, ಪೋಷಕರು ಹೆಮ್ಮೆಪಡುವಂತೆ ಮಾಡಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆಯಾಗಿದ್ದು, ಇವರಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಶುಭ ಕೋರಿದರು.

ಅಂಜು ಬಾಬಿ ಜಾರ್ಜ್ ಮಾತನಾಡಿ, ನಿಮ್ಮ ಕನಸುಗಳು ನನಸಾಗುವ ತನಕ ನೀವು ಕನಸು ಕಾಣುತ್ತಲೇ ಇರಬೇಕು. ಯಾರು ತಮ್ಮ ಕನಸುಗಳನ್ನು ನಂಬುತ್ತಾರೋ ಅವರಿಗೆ ಯಶಸ್ಸು ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

-

ಫೋಟೋ....

ದಿವಂಗತ ವಿ.ಜಿ ಸಿದ್ಧಾರ್ಥ ಅವರ ಸ್ಮರಣಾರ್ಥ ಅಂಬರ್ ವ್ಯಾಲಿ ಶಾಲೆ ಆಯೋಜಿಸಿದ್ದ ವಿಶ್ವ ಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಅಂಬರ್ ವ್ಯಾಲಿ ಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ಟ್ರಸ್ಟಿ ಐಶ್ವರ್ಯಾ ಡಿಕೆಎಸ್ ಹೆಗಡೆ, ಅಂಜು ಬಾಬಿ ಜಾರ್ಜ್ ಹಾಗೂ ಪಿಕ್ ಬ್ರೈನ್ ಖ್ಯಾತಿಯ ಗಿರಿ ಬಾಲಸುಬ್ರಮಣ್ಯಂ ಪ್ರಶಸ್ತಿ ವಿತರಿಸಿದರು.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ