ಗಂಗಾವತಿ:
ನಗರದ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಸೆ. 10ರಿಂದ ಕುಮಾರ ಶಿವಯೋಗಿಗಳ ಜೀವನದರ್ಶನ ಪ್ರವಚನ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ನಡೆಯಲಿದೆ. ಸೆ. 11ರಿಂದ ಸೆ. 19ರ ವರೆಗೆ ಪ್ರತಿ ದಿನ ಗಂಗಾವತಿಯ ವಿವಿಧ ವಾರ್ಡ್‌ನಲ್ಲಿ ಬೆಳಗ್ಗೆ 5.30ರಿಂದ 7ರ ವರೆಗೆ, ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 8.30ರಿಂದ 12.30ರ ವರೆಗೆ ಸದ್ಭಾವನಾ ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಮುದೇನೂರು ಮಾತನಾಡಿ, ಶಾಸಕ ಜನಾರ್ದನ ರೆಡ್ಡಿ ಸೇರಿ ಪ್ರಮುಖ ಗಣ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಈ ವೇಳೆ ಅಶೋಕಸ್ವಾಮಿ ಹೇರೂರು, ತಿಪ್ಪೇರುದ್ರಸ್ವಾಮಿ ವಕೀಲರು, ವಿರೂಪಾಕ್ಷಪ್ಪ ಸಿಂಗನಾಳ, ನಂದಿನಿ ಮುದಗಲ್, ಮನೋಹರಗೌಡ ಹೇರೂರು, ಜಿ. ಶ್ರೀಧರ, ಮಹಾಂತೇಶ ಶಾಸ್ತ್ರಿಮಠ, ಸಂಧ್ಯಾ ಹೇರೂರು, ಶಿಲ್ಪಾ ಶ್ರೀನಿವಾಸ, ಕವಿತಾ ಗುರುಮೂರ್ತಿ, ಮಹಾಂತಾ ಪಾಟೀಲ್, ಯುವ ಘಟಕದ ಅಧ್ಯಕ್ಷ ಶರಣಬಸವ ಹುಲಿಹೈದರ್, ಸಂಗಯ್ಯಸ್ವಾಮಿ ಸಂಶಿಮಠ, ಮಹಾಂತಗೌಡ, ಪತ್ರಕರ್ತ ಶರಣಬಸವರಾಜ ಹುಲಿಹೈದರ್ ಇದ್ದರು.