ಬಿರುವೆರ್ ಕುಡ್ಲದ ಫುಡ್‍ಫೆಸ್ಟ್ ಲಾಭಾಂಶದ 2.50 ಲ.ರು. ಚಿಕಿತ್ಸೆಗೆ ಹಸ್ತಾಂತರ

KannadaprabhaNewsNetwork |  
Published : Feb 01, 2024, 02:06 AM IST
ನೆರವು ಚೆಕ್‌ ಹಸ್ತಾಂತರಿಸುತ್ತಿರುವ ಸ್ಪೀಕರ್‌ ಯು.ಟಿ.ಖಾದರ್‌  | Kannada Prabha

ಸಾರಾಂಶ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಫ್ರೆಂಡ್ಸ್ ಬಳ್ಳಾಳ್ ಬಾಗ್‌, ಬಿರುವೆರ್ ಕುಡ್ಲ ಸಂಸ್ಥೆಯು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಸ್ಟ್ರೀಟ್ ಫುಡ್ ಉತ್ಸವದಲ್ಲಿ ಲಸ್ಸಿ ಸ್ಟಾಲ್ ಇರಿಸಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರುಉದಯ ಪೂಜಾರಿ ಬಳ್ಳಾಲ್ ಬಾಗ್ ನೇತೃತ್ವದಲ್ಲಿ ಫ್ರೆಂಡ್ಸ್ ಬಳ್ಳಾಲ್‍ಬಾಗ್, ಬಿರುವೆರ್ ಕುಡ್ಲದ ಯುವಕರ ಸಮೂಹ ಮಾಡುತ್ತಿರುವ ಸಮಾಜಮುಖಿ ಕೆಲಸ ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಉತ್ತಮ ನಿದರ್ಶನ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಫ್ರೆಂಡ್ಸ್ ಬಳ್ಳಾಳ್ ಬಾಗ್‌, ಬಿರುವೆರ್ ಕುಡ್ಲ ಸಂಸ್ಥೆಯು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಸ್ಟ್ರೀಟ್ ಫುಡ್ ಉತ್ಸವದಲ್ಲಿ ಲಸ್ಸಿ ಸ್ಟಾಲ್ ಇರಿಸಿತ್ತು. ಅದರಲ್ಲಿ ಬಂದ 2.50 ಲಕ್ಷ ರು. ಪೂರ್ಣ ಲಾಭಾಂಶವನ್ನು ಐದು ಕುಟುಂಬಗಳ ಚಿಕಿತ್ಸೆಗಾಗಿ ಧನ ಸಹಾಯ ಮೊತ್ತವನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ರಾಜ್ಯ ವಿಧಾನಸಭಾ ಸ್ಪೀಕರ್‌ ಯು.ಟಿ ಖಾದರ್ ಮಾತನಾಡಿ, ಯಾವುದೇ ಜಾತಿ ಮತ ನೋಡದೆ ಬಿರುವೆರ್ ಕುಡ್ಲ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡುತ್ತಾ ಬರುತ್ತಿರುವುದನ್ನು ಗಮನಿಸಿದ್ದೇನೆ. ಇಂತಹ ಸಂಘಟನೆಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ಬಡವರ್ಗಕ್ಕೆ ನೆರವು ಸಿಗುವಂತಾಗಬೇಕು ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಬಿರುವೆರ್ ಕುಡ್ಲ ಸಂಸ್ಥೆಗೆ ಸಮಾಜದಲ್ಲಿನ ಕಷ್ಟಗಳನ್ನು ನೀಗಿಸಲು ದೇವರು ಶಕ್ತಿ ನೀಡಲಿ. ಒಗ್ಗಟ್ಟಿನಿಂದ ಈ ಸಂಸ್ಥೆಯಿಂದ ಉತ್ತಮ ಸಮಾಜಮುಖಿ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್, ಮುಡಾ ಮಾಜಿ ಅಧ್ಯಕ್ಷ ರವಿ ಶಂಕರ್ ಮಿಜಾರ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಅಧ್ಯಕ್ಷ ಗಿರಿಧರ್ ಶೆಟ್ಟಿ, ರಣದೀಪ್ ಕಾಂಚನ್, ಜೋಸೆಫ್ ಕ್ರಾಸ್ತ ಮಾರ್ಟಿನ್‌, ರಾಧಾಕೃಷ್ಣ, ವಸಂತ ಪೂಜಾರಿ, ಉದಯ ಪೂಜಾರಿ ಬಳ್ಳಾಲ್‍ಬಾಗ್, ಜಿತೇಶ್ ಜೈನ್, ದರ್ಶನ್ ಜೈನ್, ಪ್ರಕಾಶ್ ಪಾಂಡೇಶ್ವರ, ಪ್ರಮೋದ್ ಬಳ್ಳಾಲ್ ಬಾಗ್‌ ಮತ್ತಿತರರಿದ್ದರು. ----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಸಿಯಾ ಘೋಷಣೆ ಕ್ರೈಸ್ತ ಬಂಧುಗಳಿಗೆ ವಿಶ್ವಾಸದ ಅಡಿಪಾಯ: ಬಿಷಪ್ ಜೆರಾಲ್ಡ್ ಲೋಬೊ
ಶರಣರ ತತ್ವಗಳು ಬದುಕಿಗೆ ಪ್ರೇರಣೆ: ಡಾ. ಸವಿತಾ ಸಿದ್ದನೂರ