ಸಿಎಂ ವಿರುದ್ಧದ ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಎಚ್. ವಿಶ್ವನಾಥ್ ಆಗ್ರಹ

KannadaprabhaNewsNetwork |  
Published : Oct 01, 2024, 01:15 AM IST
24 | Kannada Prabha

ಸಾರಾಂಶ

ಜಿಲ್ಲಾ ಮಂತ್ರಿ, ಸಿದ್ದರಾಮಯ್ಯನವರ ಜೊತೆ ಚಮಚ ತರ ಮಾತನಾಡುತ್ತೀರಾ? ಮಹದೇವಪ್ಪ ನೀವು ಏನಾದ್ರೂ ಜಡ್ಜಾ?

ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಹೋರಾಟದಿಂದ ಬಂದ ನಾಯಕ. ಯಾಕೆ ಹೀಗಾದರು? ಸಿದ್ದರಾಮಯ್ಯನವರೇ ಮತ್ತೆ ಮತ್ತೆ ಪ್ರಶ್ನೆ ಮಾಡಿಕೊಳ್ಳಿ. ಬಹಳ ದೊಡ್ಡ ಅಧಿಕಾರದಲ್ಲಿ ಇದ್ದೀರಿ. ನಾಡಿನ ಜನ ಅಶೀರ್ವಾದ ಮಾಡಿದ್ದಾರೆ. ಅವರ ಅಶೀರ್ವಾದಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ ಅನಿಸುತ್ತಿದೆ ಎಂದು ತಿಳಿಸಿದರು.ನಾನು ಮುಡಾ ಗೇಟ್ ನಲ್ಲಿ ಕೂತು ಮನವಿ ಮಾಡಿದ್ದೆ. ಅಪ್ತ ಸಹಾಯಕರಿಂದ ಏನೋ ನಡೆದಿದೆ. ಯಾರನ್ನೋ ಬಚಾವ್ ಮಾಡಲು ಮುಂದಾಗಿದ್ದೀರಾ. ನಿಮಗೆ ಇದರ ದರ್ದು ಇದಿಯಾ? ಕರ್ನಾಟಕ ಪೊಲೀಸರ ದಕ್ಷತೆ, ಪ್ರಾಮಾಣಿಕತೆ ದೇಶಕ್ಕೆ ಮಾದರಿ. ಯಾವುದೇ ಶಿಫಾರಸು, ಅಮಿಷಗಳಿಗೆ ಒಳಗಾಗದೆ ತನಿಖೆ ಮಾಡಿ ಎಂದು ಅವರು ಆಗ್ರಹಿಸಿದರು.ನಾಡ ದೊರೆ ತನ್ನ ಅಧೀನ ಅಧಿಕಾರಿಗಳ ಮುಂದೆ ಕೈ ಮುಗಿಯುವ ಸ್ಥಿತಿ ಶೋಚನೀಯ. ಪೊಲೀಸರ ಮೇಲಿನ ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳಿ. ನಮಗೆ ಸುಬ್ರಹ್ಮಣ್ಯೇಶ್ವರ ರಾವ್ ಮೇಲೆ ಯಾಕೋ ಡೌಟ್. ಇವರು ಕೆಂಪಯ್ಯನವರ ಶಿಷ್ಯ. ನಾನು ಒತ್ತಾಯ ಮಾಡುತ್ತೇನೆ ಲೋಕಾಯುಕ್ತ ಐಜಿ ಸ್ಥಾನದಿಂದ ತೆರವು ಮಾಡಿ. ಸಿದ್ದರಾಮಯ್ಯನವರೇ ನೀವು ಲಾಯರ್ ಆಗಿ ಕೆಲಸ ಮಾಡಿದ್ದೀರ. ನ್ಯಾಯಾಲಯದಲ್ಲಿ ನ್ಯಾಯಾಧೀಶರ ತೀರ್ಪಿನ ಮೇಲೆ ನಂಬಿಕೆ ಇಲ್ವಾ? ನೀವು ತೀರ್ಪಿನ ಕಾಪಿ ಓದಿಲ್ಲವೇ ಎಂದು ಅವರು ಪ್ರಶ್ನಿಸಿದರು.ಜಿಲ್ಲಾ ಮಂತ್ರಿ, ಸಿದ್ದರಾಮಯ್ಯನವರ ಜೊತೆ ಚಮಚ ತರ ಮಾತನಾಡುತ್ತೀರಾ? ಮಹದೇವಪ್ಪ ನೀವು ಏನಾದ್ರೂ ಜಡ್ಜಾ?ಈ ಪ್ರಕರಣದಲ್ಲಿ ಇರುವವರೆಲ್ಲ ನಿಮ್ಮವರೇ. ಹುಂಬ ಭೈರತಿ ಸುರೇಶ್ ಮಾತು ಕೇಳಿ ಸಿದ್ದರಾಮಯ್ಯ ಈ ಸ್ಥಿತಿಗೆ ಬಂದರು. ನಿಮ್ಮ ಲೀಗಲ್ ಅಡ್ವೈಸರ್ ಎಲ್ಲಾ ಸೇರಿ ದಿಕ್ಕು ತಪ್ಪಿಸಿದ್ದಾರೆ. ನೀವು ಏನು ಓದಿಲ್ಲ. ನೀವೊಬ್ಬ ಕೇರ್ ಲೆಸ್ ಚೀಫ್ ಮಿನಿಸ್ಟರ್ ಎಂದು ಅವರು ವಾಗ್ದಾಳಿ ನಡೆಸಿದರು.ದೆಹಲಿಯಿಂದ ಬಂದ ವಕೀಲರಿಗೆ ಹಣ ನೀಡಿದವರು ಯಾರು? ಸಿದ್ದರಾಮಯ್ಯ ನಿಮ್ಮ ಹಣ ನೀಡಿದ್ದಾರಾ? ಸರ್ಕಾರದ ಹಣ ನೀಡಿದ್ದಾರಾ? ಬಿಜೆಪಿಯಲ್ಲಿ ಸಿದ್ದರಾಮಯ್ಯ ಮೋರ್ಚಾ ಸೃಷ್ಠಿ ಆಗಿದೆ. ಯತ್ನಾಳ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಪರ ಇದ್ದಾರೆ. ನಿಮಗೆ ನಾಚಿಕೆ ಆಗೋದಿಲ್ವಾ? ಸಿದ್ದರಾಮಯ್ಯ ಪರ ಬೆಂಬಲ ನೀಡುತ್ತೇನೆ ಎಂದು ಹೇಳುತ್ತಿರಾ. ಪ್ರತಾಪ್ ಸಿಂಹ ನೀನೇ ಮಹಿಷಾಸುರ. ಮುಡಾದಲ್ಲಿ ಮಹಿಷಾಸುರರು ಇದ್ದಾರೆ. ಮೊದಲು ಅವರನ್ನು ನಿಲ್ಲಿಸು. ನಿಮಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ ನವರು ತಪ್ಪೇ ಮಾಡಿಲ್ಲ ಅಂತೀರಾ ಎಂದು ಅವರು ಪ್ರಶ್ನಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ