ಕನ್ನಡಪ್ರಭ ವಾರ್ತೆ ಮೈಸೂರು
ಡಾ. ಸತೀಶ್ ದುರ್ಗೇಶ್ ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿನ ಜನರು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ವಿವಿಧ ಪರೀಕ್ಷೆಗಳನ್ನು ಮಾಡಿಸಿ ತಮ್ಮ ಆರೋಗ್ಯ ಸ್ಥಿತಿ ಉತ್ತಮಪಡಿಸಿಕೊಳ್ಳಬೇಕು ಹಾಗೂ ಸಮುದಾಯದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಆರೋಗ್ಯ ಶಿಬಿರದಲ್ಲಿ 156ಕ್ಕೂ ಹೆಚ್ಚು ಜನರು ಬಂದು ಉಚಿತವಾಗಿ ಚಿಕಿತ್ಸೆ ಪಡೆದರು. ಸಕ್ಕರೆ ಖಾಯಿಲೆಗೆ 156, ಎಚ್ಐವಿ 102, ಕ್ಯಾಸ್ಟ್ರೋ ಇಂಟ್ರಾಲಜಿ 22, ಮೂಳೆ ತಪಾಸಣೆ 60, ಸ್ತ್ರೀ ರೋಗ ತಪಾಸಣೆ 105 ಮಂದಿ ತಪಾಸಣೆಗೆ ಒಳಗಾದರು.ಈ ವೇಳೆ ಡಾ. ಮನು ಪ್ರಕಾಶ್, ಡಾ ಸತೀಶ್ದುರ್ಗೇಶ್, ಡಾ. ಮಮತಾ ಸತೀಶ್ ಇದ್ದು. ಆಪ್ತ ಸಮಾಲೋಚಕ ಗೋಪಾಲ್ನಿರೂಪಿಸಿದರು. ಹರೀಶ್ಅಮರನಾಥ್, ಸಿದ್ದೇಶ್ವರಪ್ಪ ಅಂಗನವಾಡಿಯ ಶಿಕ್ಷಕಿಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.