ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಸಲಕರಣೆಗಳ ಹಸ್ತಾಂತರ

KannadaprabhaNewsNetwork |  
Published : Jun 08, 2026, 03:30 AM IST
ಕುಮಟಾ ತಾಲೂಕಿನ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಿದ ಪೋಡಿಯಂಗಳನ್ನು ಮುಖ್ಯಶಿಕ್ಷಕ ಪಾಂಡುರಂಗ ವಾಗ್ರೇಕರ ಸ್ವೀಕರಿಸಿದರು. ಎಸ್.ಎನ್. ಪ್ರಭು, ಕೃಷ್ಣದಾಸ್ ಪೈ, ರಮೇಶ ಉಪಾಧ್ಯಾಯ ಇತರರು ಇದ್ದರು. | Kannada Prabha

ಸಾರಾಂಶ

ಪಟ್ಟಣದ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯು ಸಂಸ್ಥಾಪನೆಗೊಂಡು ೬೦ ವರ್ಷ ಪೂರೈಸಿದ ಸ್ಮರಣೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿಕ್ಷಣಪ್ರೇಮಿಗಳು ಕೊಡುಗೆಯಾಗಿ ನೀಡಿದ ಸಲಕರಣೆಗಳ ಹಸ್ತಾಂತರಿಸಿಕೊಂಡು, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಚಿತ್ರಗಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕನ್ನಡಪ್ರಭ ವಾರ್ತೆ ಕುಮಟಾ

ಪಟ್ಟಣದ ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯು ಸಂಸ್ಥಾಪನೆಗೊಂಡು ೬೦ ವರ್ಷ ಪೂರೈಸಿದ ಸ್ಮರಣೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿಕ್ಷಣಪ್ರೇಮಿಗಳು ಕೊಡುಗೆಯಾಗಿ ನೀಡಿದ ಸಲಕರಣೆಗಳ ಹಸ್ತಾಂತರಿಸಿಕೊಂಡು, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ಕೆ.ಇ. ಸೊಸೈಟಿಯ ಉಪಾಧ್ಯಕ್ಷ ಮೋಹನ ಶಾನಭಾಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೊಸೈಟಿಯ ಕಾರ್ಯದರ್ಶಿಗಳಾದ ಎಸ್.ಎನ್. ಪ್ರಭು ಹಾಗೂ ಕೃಷ್ಣದಾಸ್ ಪೈ, ವಿದ್ವಾನ್ ರಮೇಶ ಉಪಾಧ್ಯಾಯ ಇನ್ನಿತರರು ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳಾದ ನಿವೇದಿತಾ ರವಿರಾಜ ಕಡ್ಲೆ, ಭೂಮಿಕಾ ನಾಗರಾಜ ನಾಯ್ಕ, ಜೀವನ ಮಂಜುನಾಥ ಆಚಾರಿ, ಹರ್ಷಿತಾ ಮಾದೇವ ಗುನಗಾ, ವರದಾ ಹನುಮಂತ ಪಟಗಾರ, ಸ್ಪಂದನಾ ರಾಜು ನಾಯಕ, ಎಚ್.ಪಿ. ಶ್ರೀರಕ್ಷಾ, ವಿನುತಾ ಮಂಜುನಾಥ ಪಟಗಾರ, ರಕ್ಷಾ ಅಣ್ಣಪ್ಪ ಗೌಡ, ಸೂರ್ಯ ಗಿರೀಶ ಅಂಬಿಗ, ರಂಜನ ಗಣೇಶ ನಾಯ್ಕ ಅವರನ್ನು ಪುರಸ್ಕರಿಸಲಾಯಿತು.

ಕಿರಾಣಿ ವ್ಯಾಪಾರಿ ರಾಜೇಶ್ ಪೈ, ಮಿಲಾಗ್ರೀಸ್ ಬ್ಯಾಂಕ್ ಅಧಿಕಾರಿ ಸಾವೀರ್ ಫರ್ನಾಂಡಿಸ್, ಜೀವವಿಮೆ ಅಧಿಕಾರಿ ಎಲ್.ವಿ. ಭಟ್, ನಿವೃತ್ತ ಶಿಕ್ಷಕ ಎಸ್.ಎಂ. ಭಟ್, ಶಿಕ್ಷಕ ಮಂಜುನಾಥ ಪಟಗಾರ, ಗಣಪಯ್ಯ ಪಟಗಾರ, ಮಾಜಿ ಸೈನಿಕ ಕೇಶವ ನಾಗಪ್ಪ ಪಟಗಾರ, ಉದ್ಯಮಿ ದೀಪಕ ಪ್ರಭು, ಉದ್ಯಮಿ ನಾರಾಯಣ ಜೋಗಿ ಗೌಡ, ಅಶೋಕ ಹರಿಕಾಂತ ಹಾಗೂ ಗೋವಿಂದ ಪಟಗಾರ ಇವರು ತಲಾ ಒಂದೊಂದರಂತೆ ನೀಡಿದ ಒಟ್ಟೂ ೧೦ ಕಂಪ್ಯೂಟರ್ ಸೆಟ್‌ನ್ನು ಮುಖ್ಯ ಶಿಕ್ಷಕ ಪಾಂಡುರಂಗ ವಾಗ್ರೇಕರ ಸ್ವೀಕರಿಸಿದರು.

ನಿವೃತ್ತ ಶಿಕ್ಷಕಿ ಗಿರಿಜಾ ಲಕ್ಕುಮನೆ, ಯಶೋದಾ ಹೊಸಕಟ್ಟಾ ಕುಟುಂಬದವರು, ನಿವೃತ್ತ ಬ್ಯಾಂಕ್‌ ಅಧಿಕಾರಿ ಎನ್.ಎಸ್. ಕಾಮತ್ ಇವರು ತಲಾ ಒಂದೊಂದರಂತೆ ನೀಡಿದ ಮೂರು ಗ್ರಂಥಾಲಯ ಕಪಾಟುಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ನಿವೃತ್ತ ಶಿಕ್ಷಕ ಲಕ್ಷ್ಮಿಕಾಂತ ಪಟಗಾರ, ವಿಜ್ಞಾನಿ ಪಿ.ಜೆ. ಭಟ್ ಬೆಂಗಳೂರು, ನಿವೃತ್ತ ಮುಖ್ಯಶಿಕ್ಷಕ ಪಾಂಡುರಂಗ ಹುಲಸ್ವಾರ್, ಬೆನಿಸ್ ಫರ್ನಾಂಡಿಸ್ ಚಿತ್ರಗಿ, ನಿವೃತ್ತ ಆರ್‌ಎಫ್‌ಒ ರಾಮಚಂದ್ರ ಆದ್ಲೇಮನೆ, ನಿವೃತ್ತ ಶಿಕ್ಷಕ ಉಮೇಶ ಭಟ್ ಇವರು ತಲಾ ಒಂದೊಂದರಂತೆ ಒಟ್ಟೂ ೬ ಫೋಡಿಯಂಗಳನ್ನು ಕೊಡುಗೆಯಾಗಿ ಶಾಲೆಗೆ ಹಸ್ತಾಂತರಿಸಿದರು. ವಿಶೇಷವಾಗಿ ಮುಖ್ಯ ಶಿಕ್ಷಕ ಪಾಂಡುರಂಗ ವಾಗ್ರೇಕರ ನೀಡಿದ ಜೆರಾಕ್ಸ್ ಮಶಿನ್ ಹಾಗೂ ಶಿಕ್ಷಕ ಕಿರಣ ಪ್ರಭು ನೀಡಿದ ಇನ್ವರ್ಟರ್ ಬ್ಯಾಟರಿ ವ್ಯವಸ್ಥೆಯನ್ನು ಸ್ವೀಕರಿಸಲಾಯಿತು. ಪ್ರತಿವರ್ಷದಂತೆ ಅನೇಕ ದಾನಿಗಳು ನೀಡುವ ಆಯ್ದ ಶಿಷ್ಯವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಲಕ್ಷ್ಮೀಬಾಯಿ ನಾಗಪ್ಪ ಶಾನಭಾಗ, ಅನಂತ ಶಂಕರ ಶಾನಭಾಗ ಸ್ಮರಣಾರ್ಥ ದತ್ತಿ ನಿಧಿ, ಸುಶೀಲಾ ಶಾನಭಾಗ ದತ್ತಿ ನಿಧಿ ಹಾಗೂ ನರಸಿಂಹ ಅರುಣ ಶಾನಭಾಗ ನೀಡಿದ ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎಲ್ಲ ಕೊಡುಗೆ ನೀಡಿದವರಿಗೆ ಶಾಲೆಗೆ ವರ್ಣಾಲಂಕಾರ, ಸಿಸಿ ಕ್ಯಾಮೆರಾಗಳ ದಾನಿಗಳಿಗೆ ಮುಖ್ಯ ಶಿಕ್ಷಕ ಪಾಂಡುರಂಗ ವಾಗ್ರೇಕರ ಧನ್ಯವಾದ ಅರ್ಪಿಸಿದರು.

ಶಿಕ್ಷಕ ಕಿರಣ ಪ್ರಭು ಶಾಲೆ ಸ್ಥಾಪನೆಗೊಂಡು ನಡೆದು ಬಂದ ದಾರಿಯನ್ನು ಸಾದರಪಡಿಸಿದರು. ಶಿಕ್ಷಕ ಅನಿಲ ರೋಡ್ರಿಗಿಸ್ ಸ್ವಾಗತಿಸಿ, ಎಸ್.ಎಸ್.ಎಲ್.ಸಿ. ಫಲಿತಾಂಶ ವಿಶ್ಲೇಷಿಸಿದರು. ಶಿಕ್ಷಕ ವಿಷ್ಣು ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ವೇತಾ ಪಟಗಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಘನತ್ಯಾಜ್ಯ 2026ರ ನಿಯಮ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ
ಆರೋಗ್ಯದ ಜೊತೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಿ: ಡಾ. ಆನಂದ ಮಸ್ತಿಹೋಳೆ