ಕನ್ನಡಪ್ರಭ ವಾರ್ತೆ ಮಡಿಕೇರಿ
2027ನೇ ಸಾಲಿನಲ್ಲಿ ನಡೆಯುವ ವಿಶ್ವವಿಖ್ಯಾತ ಅಜ್ಜಿಕುಟ್ಟಿರ ಕೊಡುವ ಹಾಕಿ ನಮ್ಮೆಯ ಆಥಿತ್ಯ ಹಕ್ಕುಪತ್ರವನ್ನು ಪವಿತ್ರ ಶ್ರೀಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷ ನರೇನ್ ಕಾರ್ಯಪ್ಪ ಹಾಗೂ ಶಾಸಕರು ಗೌರವಾಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮತ್ತು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ ಜೊತೆಗಿದ್ದರು.
ಶ್ರೀ ಪಾಡಿ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಯೋಜಕ ಹಕ್ಕು ಪತ್ರವನ್ನು ಕೊಡವ ಹಾಕಿ ಅಕಾಡೆಮಿ ವತಿಯಿಂದ ಅಜ್ಜಿಕುಟ್ಟಿರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.ಈ ಸಂದರ್ಭ ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಚೆಪ್ಪುಡೀರ ಪೂಣಚ್ಚ, ಕಾರ್ಯದರ್ಶಿ ಕುಲ್ಲೇಟಿರ ಬೇಬ, ನಿರ್ದೇಶಕ ಕಲಿಯಂಡ ಸಂಪನ್ ಅಯ್ಯಪ್ಪ, ಮುದ್ದಂಡ ರಿಷಿನ್ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಅಜ್ಜಿಕುಟ್ಟಿರ ಕುಟುಂಬದ ಸಜನ್, ಕಾರ್ಯದರ್ಶಿ ಪೂಣಚ್ಚ, ಸದಸ್ಯರಾದ ಗಿರೀಶ್, ಪೊನ್ನಪ್ಪ, ಪ್ರಖ್ಯಾತ್, ಮಧು, ಸುರೇಂದ್ರ, ಹ್ಯಾರಿ, ಬಾಚಮಾಂಡ ರಾಜ, ಲವ ಚಿಣ್ಣಪ್ಪ, ಬೋಳಂಡ ಗಿರೀಶ್, ಕೋಡಿರ ವಿನೋದ್ ನಾಣಯ್ಯ, ಐತ್ತಿತಂಡ ಪ್ರಕಾಶ್, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.