ನಾರಾಯಣ ಕುಂಬ್ರ ರಚನೆಯ ‘ಹನಿದನಿ’ ಕವನ ಸಂಕಲನ ಬಿಡುಗಡೆ

KannadaprabhaNewsNetwork |  
Published : Mar 13, 2025, 12:46 AM IST
ಫೋಟೋ: 12ಪಿಟಿಆರ್ ಸಾ ಹಿತ್ಯಪುತ್ತೂರು ಅನುರಾಗ ವಠಾರದಲ್ಲಿ ಹನಿದನಿ ಕವನ ಸಂಕಲನ ಬಿಡುಗಡೆ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಕಸಾಪ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕಸಾಪ ಪುತ್ತೂರು ಹೋಬಳಿ ಘಟಕ ಪುತ್ತೂರು, ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಮತ್ತು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ, ಪುತ್ತೂರಿನ ಅನುರಾಗ ವಠಾರದಲ್ಲಿ ಯುವಕವಿ ನಾರಾಯಣ ಕುಂಬ್ರ ಅವರ ಹನಿದನಿ ಕವನ ಸಂಕಲನ ಬಿಡುಗಡೆಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಸಾಹಿತ್ಯದ ಅಭಿರುಚಿಯೊಂದಿಗೆ ಶ್ರಮದ ಬೆಸುಗೆಯಿದ್ದಲ್ಲಿ ಮಾತ್ರ ಕಾವ್ಯಗಳು ಮೂಡಿ ಬರಲು ಸಾಧ್ಯವಿದೆ. ಓದುವುದರಿಂದ ಜ್ಞಾನದ ಮಟ್ಟ ಹೆಚ್ಚಳದ ಜೊತೆಗೆ ಲೋಕದ ಎಲ್ಲಾ ವಿಚಾರಗಳನ್ನೂ ತಿಳಿಯ ಬಹುದಾಗಿದೆ. ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಓದುವ ಮೂಲಕ ಬರೆಯುವ ಶಕ್ತಿಯು ಹೆಚ್ಚಾಗುತ್ತದೆ ಎಂದು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಹೇಳಿದ್ದಾರೆ.

ಅವರು ಕಸಾಪ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕಸಾಪ ಪುತ್ತೂರು ಹೋಬಳಿ ಘಟಕ ಪುತ್ತೂರು, ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು ಮತ್ತು ಪುತ್ತೂರು ಕರ್ನಾಟಕ ಸಂಘದ ಆಶ್ರಯದಲ್ಲಿ, ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ಯುವಕವಿ ನಾರಾಯಣ ಕುಂಬ್ರ ಅವರ ಹನಿದನಿ ಕವನ ಸಂಕಲನ ಬಿಡುಗಡೆ ಸಮಾರಂ ಉದ್ಘಾಟಿಸಿ ಮಾತನಾಡಿದರು.

ಕವನ ಸಂಕಲನ ಬಿಡುಗಡೆಗೊಳಿಸಿದ ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಮಾತನಾಡಿ, ನಾರಾಯಣ ಕುಂಬ್ರ ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುತ್ತಿದ್ದಾರೆ. ಅವರ ಬರಹದ ಪಯಣ ಇನ್ನಷ್ಟು ಎತ್ತರಕ್ಕೇರಲಿ ಎಂದರು.

ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆನರಾ ಕಾಲೇಜು ಉಪನ್ಯಾಸಕ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು.

ಕಸಾಪ ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ, ಕೊಣಾಲು ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಕನ್ನಡ ಉಪನ್ಯಾಸಕಿ ಸುಪ್ರೀತಾ ಚರಣ್ ಪಾಲಪ್ಪೆ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷೆ ಶ್ರೀಕಲಾ ಕಾರಂತ್ ಮಾತನಾಡಿದರು. ಕೃತಿಕಾರ ನಾರಾಯಣ ಕುಂಬ್ರ ವೇದಿಕೆಯಲ್ಲಿ ಇದ್ದರು.

ಹೊರನಾಡ ಕನ್ನಡಿಗ ಗ್ರಾಮ ಸಾಹಿತ್ಯ ಸಂಭ್ರಮ ಮಹಾ ಪೋಷಕರಾದ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ,ಕನ್ನಡ ಮತ್ತು ತುಳು ಸಾಹಿತಿ ರಘು ಇಡ್ಕಿದು, ಯುವ ಸಾಹಿತಿ ಸುಪ್ರೀತಾ ಚರಣ್ ಪಾಲಪ್ಪೆ ಕಡಬ, ಮಂಗಳೂರು ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್ ನಾಯಕ್, ಬಾಲ ಸಾಹಿತಿ ಧನ್ವಿತಾ ಕಾರಂತ್ ಅಳಿಕೆ ಮತ್ತು ಕು. ಶಿರ್ಷಿತಾ ಕಾರಂತ್ ಅಳಿಕೆ ಅವರನ್ನು ಗೌರವಿಸಲಾಯಿತು.

ಸಮಾರಂಭಕ್ಕೆ ಮೊದಲು ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆ ಕರ್ನಾಟಕ ಇದರ ಉಪಾಧ್ಯಕ್ಷ,ಯುವ ಸಾಹಿತಿ ವಿಂಧ್ಯಾ ಎಸ್ ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಿತು. ಕವಿಗೋಷ್ಠಿಯಲ್ಲಿ ಮಣಿ ಮುಂಡಾಜೆ, ಐಡಾ ಲೋಬೊ ಮಾಣಿ,ನ್ಯಾನ್ಸಿ ನೆಲ್ಯಾಡಿ ಹರೀಶ್ ಮಂಜೊಟ್ಟಿ, ದೇವಿಕಾ ಜೆ. ಜಿ. ಬನ್ನೂರು, ಪಾವನಿ, ಕವಿತಾ ಸತೀಶ್, ಯಶೋದ ಬಲ್ನಾಡ್, ಅಮೃತಾ, ಎ. ಆರ್. ಭಂಡಾರಿ ವಿಟ್ಲ, ಮೋಕ್ಷಿತ್, ಮನೀಶ್ ಕಲ್ಲಡ್ಕ, ಮಲ್ಲಿಕಾ ಐ ಹಿರೇಬಂಡಾಡಿ,ಆತ್ಮಿಕಾ, ಲಿಖಿತ ವಿಜಿತ್ ಕೋಟ್ಯಾನ್, ಲೇಖನ, ಗಿರೀಶ್ ಪೆರಿಯಡ್ಕ, ರಿಧಿಕಾ ಶೆಟ್ಟಿ, ಶಿಲ್ಪ. ಕೆ. ಎನ್, ಪ್ರಕೃತಿ, ಅಕ್ಷತಾ ನಾಗನಕಜೆ, ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ವೈಶಾಲಿ ಬೆಳ್ಳಿಪ್ಪಾಡಿ, ಮಾನಸ ವಿಜಯ ಕೈಂತಜೆ, ಅಶ್ವಿನಿ ಕುಲಾಲ್ ಕಡ್ತಲ, ಸುನೀತಾ ಶ್ರೀರಾಮ್ ಕೊಯಿಲ, ಉಷಾ ಮುರಳೀಧರ ಭಾಗವಹಿಸಿದ್ದರು.

ಆಶಾ ಮಯ್ಯ ಪುತ್ತೂರು ಸ್ವಾಗತಿಸಿದರು. ರಶ್ಮಿತಾ ಸುರೇಶ್ ಜೋಗಿಬೆಟ್ಟು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುನೀತಾ. ಎನ್, ಮತ್ತು ಗಿರೀಶ್ ಕೊಯಿಲ ನಿರೂಪಿಸಿದರು. ಸೌಮ್ಯರಾಮ್ ಕಲ್ಲಡ್ಕ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ