ಕನ್ನಡಪ್ರಭ ವಾರ್ತೆ ಮಾಗಡಿ
ನೂತನ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಶಾಸಕ ಬಾಲಕೃಷ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಶೋಕ್ ಹಾಗೂ ಧನಂಜಯ ಹಾಗೂ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಹಿರಿಯರ ಮಾರ್ಗದರ್ಶನದಲ್ಲಿ ರೈತ ಸ್ನೇಹಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ವಿಎಸ್ಎಸ್ಎನ್ ಹಾಲಿ ನಿರ್ದೇಶಕ ನಾರಾಯಣಪ್ಪ ಮಾತನಾಡಿ, ಸಂಘದಲ್ಲಿ ಸುಂಆರು ವರ್ಷಗಳಿಂದ ನಿರ್ದೇಶಕರ ಸಹಕಾರದಿಂದ ಅವಿರೋಧ ಆಯ್ಕೆ ಮಾಡುತ್ತಿರುವುದು ಕಲ್ಯಾ ಸಹಕಾರ ಸಂಘದ ವಿಶೇಷತೆ. ಸಂಘದ ಅಭಿವೃದ್ಧಿಗೆ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಹಾಗೂ ರೈತರು ಸಹಕರಿಸಿದ್ದಾರೆಂದರು.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ.ಕೆ.ಧನಂಜಯ, ತಾಪಂ ಮಾಜಿ ಅಧ್ಯಕ್ಷ ಶಿವರಾಜ್, ಕಾರ್ಯದರ್ಶಿ ವಿ.ಸ್ವಾಮಿ, ಸಂಘದ ಉಪಾಧ್ಯಕ್ಷ ರಾಮಣ್ಣ, ನಿರ್ದೇಶಕರಾದ ಪುಟ್ಟಹೊನ್ನಯ್ಯ, ಚಿಕ್ಕೇಗೌಡ, ಚಿಕ್ಕಣ್ಣ, ಗಂಗಾಧರಯ್ಯ, ವಿಶ್ವನಾಥ್, ಶಾರದಮ್ಮ, ಮುನಿನರಸಿಂಹಯ್ಯ, ಕೆ.ಸಿ.ಧನಂಜಯ ಮುಖಂಡರಾದ ವೆಂಕಟೇಶ್, ಜಯಶಂಕರ್, ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಫೋಟೋ:ಮಾಗಡಿ ತಾಲೂಕಿನ ಕಲ್ಯಾ ವಿಎಸ್ಎಸ್ಎನ್ ನೂತನ ಅಧ್ಯಕ್ಷರಾಗಿ ಕೆ.ಹನುಮಂತೇಗೌಡ ಅವಿರೋಧವಾಗಿ ಆಯ್ಕೆಯಾದರೂ ಬೆಂಬಲಿಗರು ಅಭಿನಂದಿಸಿದರು.