...ಆರ್ಟ್ ಆಫ್ ಲಿವಿಂಗ್‌ ಆಶ್ರಯದಲ್ಲಿಇಂದಿನಿಂದ ಹ್ಯಾಪಿನೆಸ್ ಪ್ರೋಗ್ರಾಂ

KannadaprabhaNewsNetwork |  
Published : Jun 05, 2026, 01:45 AM IST
4ಕೆಜಿಎಫ್‌1 | Kannada Prabha

ಸಾರಾಂಶ

ಮಾನಸಿಕ ಒತ್ತಡ ನಿವಾರಣೆ, ಉತ್ತಮ ಆರೋಗ್ಯ ಹಾಗೂ ಸಂತೋಷ ಭರಿತ ಜೀವನಕ್ಕಾಗಿ ವಿಶ್ವದಾದ್ಯಂತ ಜನಪ್ರಿಯವಾಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹ್ಯಾಪಿನೆಸ್ ಪ್ರೋಗ್ರಾಂ ಅನ್ನು ಕೆಜಿಎಫ್‌ನಲ್ಲಿ ಜೂ. ೫ ರಿಂದ ೭ ರವರೆಗೆ ಬೆಳಿಗ್ಗೆ ೬ ರಿಂದ ೯ ಗಂಟೆ, ಸಂಜೆ ೬ ರಿಂದ ೯ ರವರೆಗೆ ಆಯೋಜಿಸಲಾಗಿದೆ

-ಕೆಜಿಎಫ್‌ನಲ್ಲಿ ಇಂದಿನಿಂದ ಬೆಳಿಗ್ಗೆ, ಸಂಜೆ ಕಾರ್ಯಕ್ರಮಕೆಜಿಎಫ್‌: ಮಾನಸಿಕ ಒತ್ತಡ ನಿವಾರಣೆ, ಉತ್ತಮ ಆರೋಗ್ಯ ಹಾಗೂ ಸಂತೋಷ ಭರಿತ ಜೀವನಕ್ಕಾಗಿ ವಿಶ್ವದಾದ್ಯಂತ ಜನಪ್ರಿಯವಾಗಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಹ್ಯಾಪಿನೆಸ್ ಪ್ರೋಗ್ರಾಂ ಅನ್ನು ಕೆಜಿಎಫ್‌ನಲ್ಲಿ ಜೂ. ೫ ರಿಂದ ೭ ರವರೆಗೆ ಬೆಳಿಗ್ಗೆ ೬ ರಿಂದ ೯ ಗಂಟೆ, ಸಂಜೆ ೬ ರಿಂದ ೯ ರವರೆಗೆ ಆಯೋಜಿಸಲಾಗಿದೆ ಎಂದು ಕೆಜಿಎಫ್ ವಲಯದ ಆರ್ಟ್ ಆಫ್ ಲಿವಿಂಗ್‌ನ ವಿ.ಕೆ. ಲೋಹಿತ್ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಸುದರ್ಶನ ಕ್ರಿಯೆಯು ವಿಶ್ವದ ೧೮೦ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಅಭ್ಯಾಸ ಮಾಡುತ್ತಿರುವ ವೈಜ್ಞಾನಿಕ ಉಸಿರಾಟ ವಿಧಾನವಾಗಿದೆ. ಈ ಕ್ರಿಯೆಯು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಮಟ್ಟದಲ್ಲಿ ಶುದ್ಧೀಕರಣ ಮತ್ತು ಪುನಶ್ಚೇತನವನ್ನು ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಒತ್ತಡ ನಿರ್ವಹಣೆ, ಮನಸ್ಸಿನ ಶಾಂತಿ, ಉತ್ತಮ ಏಕಾಗ್ರತೆ, ಆತ್ಮವಿಶ್ವಾಸ, ಆರೋಗ್ಯಕರ ಜೀವನಶೈಲಿ ಹಾಗೂ ಸಂತೋಷದ ಬದುಕಿಗೆ ಅಗತ್ಯವಾದ ಸರಳ ತಂತ್ರಗಳನ್ನು ಕಲಿಯಲಿದ್ದಾರೆ. ೧೮ ವರ್ಷದ ಮೇಲ್ಪಟ್ಟ ಎಲ್ಲಾ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಒತ್ತಡಮುಕ್ತ ಮತ್ತು ಸಂತೋಷ ಭರಿತ ಜೀವನದ ಅನುಭವ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.ಶ್ರೀ ರವಿಶಂಕರ್ ವಿದ್ಯಾ ಮಂದಿರ ಎಸ್‌ಎಸ್‌ಆರ್‌ವಿಎಂ ೪ನೇ ಕ್ರಾಸ್, ರಾಬರ್ಟ್ಸನ್‌ ಪೇಟೆ, ಕೆಜಿಎಫ್, ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ: ೯೮೮೬೪ ೨೮೧೨೧ / ೮೯೭೦೧ ೧೬೭೫೯ ಸಂಪರ್ಕಿಸಬೇಕೆಂದು ಕೋರಲಾಗಿದೆ.

೪ಕೆಜಿಎಫ್೧ರವಿಶಂಕರ್ ಗುರೂಜಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ