ದಾರ್ಶನಿಕರ ಆದರ್ಶ ಗುಣ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Apr 04, 2025, 12:45 AM IST
51 | Kannada Prabha

ಸಾರಾಂಶ

ಸಮಾಜ ಸುಧಾರಕರು ಮತ್ತು ಜಯಂತಿಗಳನ್ನು ವರ್ಷದಲ್ಲಿ ಒಂದು ದಿನಕ್ಕೆ ಸೀಮಿತ ಮಾಡದೆ ಅವರು ನಡೆದು ಬಂದ ಹಾದಿ ಹಾಗೂ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರು ಅರಿತು ನಿತ್ಯ ಅವರನ್ನು ನೆನೆಯಬೇಕೆಂದರು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಮಹನೀಯರು ದಾರ್ಶನಿಕರು ಹಾಗೂ ಗಣ್ಯರ ಆದರ್ಶ ಗುಣಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಹೇಳಿದರು.ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಾಂಗ ಸಂಘದ ವತಿಯಿಂದ ಆಯೋಜಿಸಿದ್ದ ದೇವರ ದಾಸಿಮಯ್ಯನವರ 1046ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾಜ ಸುಧಾರಕರು ಮತ್ತು ಜಯಂತಿಗಳನ್ನು ವರ್ಷದಲ್ಲಿ ಒಂದು ದಿನಕ್ಕೆ ಸೀಮಿತ ಮಾಡದೆ ಅವರು ನಡೆದು ಬಂದ ಹಾದಿ ಹಾಗೂ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರು ಅರಿತು ನಿತ್ಯ ಅವರನ್ನು ನೆನೆಯಬೇಕೆಂದರು.ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ ನಂತರ ದೇವರ ದಾಸಿಮಯ್ಯನವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಪೂರ್ಣ ಕುಂಭ ಕಳಸ ಹೊತ್ತು ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ದಾಸಿಮಯ್ಯನವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಗ್ರಾಮದ ಯಜಮಾನರಾದ ರಂಗಸ್ವಾಮಿ, ತಮ್ಮಯ್ಯಶೆಟ್ಟಿ, ಶಂಕರಶೆಟ್ಟಿ, ತಿಮ್ಮಶೆಟ್ಟಿ, ಗೋವಿಂದಶೆಟ್ಟಿ, ರಾಜಶೆಟ್ಟಿ, ಕೃಷ್ಣಶೆಟ್ಟಿ,ತಾಪಂ ಮಾಜಿ ಅಧ್ಯಕ್ಷ ಎಚ್.ಟಿ. ಮಂಜಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ ರಮೇಶ್, ಮಾಜಿ ಅಧ್ಯಕ್ಷರಾದ ತುಕಾರಾಂ, ಎಚ್.ಜೆ. ಗೋಪಾಲ, ದೀಪು, ನಂದಿನಿ ರಮೇಶ್, ಸದಸ್ಯರಾದ ಮಂಜುಳಾ ಚಂದ್ರ, ಜಯರಾಮ್, ಶೈಲಜಾ ಯೋಗೇಶ್, ಚೌಡೇಶ್ವರಿ ಸಂಘದ ಯುವಕರು, ಮಹಿಳೆಯರು, ದೇವಾಂಗ ಸಮಾಜದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ