ಮೊಬೈಲ್ ಗಳಿಗೆ ಟವರ್‌ ಇದ್ದಂತೆ, ದೇವಸ್ಥಾನಗಳಿಗೆ ಗೋಪುರಗಳು

KannadaprabhaNewsNetwork |  
Published : May 26, 2026, 02:30 AM IST
ಹರಪನಹಳ್ಳಿ ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಉಜ್ಜಿಯಿನಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಜರುಗಿತು. | Kannada Prabha

ಸಾರಾಂಶ

ದೇವಸ್ಥಾನ ಕಟ್ಟಿದ ಮೇಲೆ ಗೋಪುರ, ಕಳಸಾರೋಹಣ ಆದಾಗ ಮಾತ್ರ ಅಲ್ಲಿನ ದೇವರಿಗೆ ಶಕ್ತಿ ತುಂಬಿದಂತಾಗುತ್ತದೆ

ಹರಪನಹಳ್ಳಿ: ಮೊಬೈಲ್‌ಗಳಿಗೆ ಟವರ್ ಇದ್ದಂತೆ ದೇವಸ್ಥಾನಗಳಿಗೆ ಗೋಪುರಗಳೇ ಟವರ್. ಗೋಪುರಗಳು ದೇವಸ್ಥಾನದಲ್ಲಿರುವ ಮೂರ್ತಿಗೆ ಶಕ್ತಿ ತುಂಬುತ್ತವೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ತಿಳಿಸಿದರು.

ಅವರು ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಸೋಮವಾರ ಉಜ್ಜಯಿನಿ ಜಗದ್ಗುರು ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಬಸವೇಶ್ವರ ದೇವಸ್ಥಾನದ ನೂತನ ಗೋಪುರಕ್ಕೆ ಕಳಸಾರೋಹಣ ಮತ್ತು ಧರ್ಮಸಭೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಅಧಿಕ ಮಾಸ ಶ್ರೇಷ್ಠ ಮಾಸವಾಗಿದ್ದು, ಇಂತಹ ಸಂದರ್ಭದಲ್ಲಿ ನಂದಿಬಸವೇಶ್ವರ ದೇವಸ್ಥಾನದ ಕಳಸರೋಹಣ ಮಾಡಿರುವುದು ಉತ್ತಮ ಕಾರ್ಯವಾಗಿದೆ. ದೇವಸ್ಥಾನ ಕಟ್ಟಿದ ಮೇಲೆ ಗೋಪುರ, ಕಳಸಾರೋಹಣ ಆದಾಗ ಮಾತ್ರ ಅಲ್ಲಿನ ದೇವರಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದು ನುಡಿದರು.

ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ವಿದ್ಯಾ, ವಿನಯ, ಸಂಸ್ಕಾರದಂತಹ ಶಿಕ್ಷಣವನ್ನು ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಬೇಕು ಎಂದು ಸಲಹರೆ ನೀಡಿದರು.

ಯುವಜನತೆ ಮದ್ಯ ವ್ಯಸನದಿಂದ ಹೊರಗೆ ಬನ್ನಿ, ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ, ರೈತರು ಉತ್ತಮ ಬೆಳೆ ಬೆಳೆದು ಸಮೃದ್ಧವಾಗಿ ಬೆಳೆ ಬರಲಿ ಎಂದು ಆರ್ಶಿವಚನ ನೀಡಿದರು.

ಧರ್ಮಸಭೆಗೂ ಮುನ್ನ ಅಡವಿಹಳ್ಳಿ ಗ್ರಾಮದಲ್ಲಿ ವಿವಿಧ ಕಲಾ ವಾದ್ಯಗಳೊಂದಿಗೆ ಭಕ್ತರು ಶ್ರೀ ಮದ್‌ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಸಿದರು.

ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಅಡವಿಹಳ್ಳಿ ಹಾಲಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಚಿರಸ್ತಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಜಿ.ನಂಜನಗೌಡ್ರು, ಓಂಕಾರಗೌಡ, ಬಣಕಾರ ಮಲ್ಲಿಕಾರ್ಜುನ, ಪೂಜಾರ ದಕ್ಷಿಣ ಮೂರ್ತಿ, ಬೆಣ್ಣಿ ಪೂಜಾರ ಬಸಪ್ಪ, ಬಳ್ಳಾರಿ ನಾಗಪ್ಪ, ಎ.ಜಿ. ಮಂಜುನಾಥ, ಹಾವನೂರು ಹಾಲಪ್ಪ, ಗುಬ್ಬವ್ವರ ಪೂಜಾರ ಬಸವರಾಜ, ಬಿ.ಜಿ. ಶರಣಪ್ಪ, ನಿಂಬಳಗೇರಿ ಬಸವರಾಜ, ಎನ್.ಕೊಟ್ರಪ್ಪ, ಐ.ಎಂ. ಬಸವರಾಜಯ್ಯ, ಕೆ.ಅಂಜಿನಪ್ಪ, ಕೆ.ಕೊಟ್ರಪ್ಪ, ಪೂಜಾರ ಬಸವರಾಜ, ಎಂ.ಕರಿಯಪ್ಪ, ಉಪ್ಪಾರ ಬಸವರಾಜ, ಚಾಕರಿ ಮಂಜಪ್ಪ ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

(ರಾಜ್ಯಕ್ಕೂ ಮುಖ್ಯ) ಪ್ರಗತಿಪರ ಚಿಂತನೆ ಯತಿ ವಿಶ್ವೇಶ ತೀರ್ಥರು: ಈಶ್ವರ ಖಂಡ್ರೆ
2015ರ ನಂತರದ ಒತ್ತುವರಿ ತೆರವಿಗೆ ಖಂಡ್ರೆ ಸೂಚನೆ