ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದರೆ ಕಠಿಣ ಕ್ರಮ

KannadaprabhaNewsNetwork |  
Published : Feb 01, 2025, 12:01 AM IST
ವಿಧ್ಯಾರ್ಥಿಗಳಿಗೆ ಲೈಂಗಿಕ ಕಿರಿಕುಳ ನೀಡಿದರೆ ಕಠಿಣ ಕ್ರಮ | Kannada Prabha

ಸಾರಾಂಶ

ವಿದ್ಯಾರ್ಥಿನಿ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊರಟಗೆರೆ ಸಿಪಿಐ ಅನಿಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ವಿದ್ಯಾರ್ಥಿನಿ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊರಟಗೆರೆ ಸಿಪಿಐ ಅನಿಲ್ ತಿಳಿಸಿದರು.ಪಟ್ಟಣದ ಯುವತಿಯರ ಮೆಟ್ರಿಕ್ ಪೂರ್ವ ಹಾಗೂ ವಿದ್ಯಾರ್ಥಿ ನಿಲಯದಲ್ಲಿ ಕಾನೂನು ಅರಿವು, ತಮ್ಮಗಳ ರಕ್ಷಣೆ ಕುರಿತು ಮಾತನಾಡಿದರು.ಶಾಲಾ ವಿದ್ಯಾರ್ಥಿನಿಯರಿಗೆ ಓದುವ ವಯಸ್ಸಿನಲ್ಲಿ ತಮ್ಮ ಗುರಿಯನ್ನ ಮುಟ್ಟುವ ಹಾದಿಯಲ್ಲಿ ಸಾಗಬೇಕು. ವಿದ್ಯಾರ್ಥಿನಿಯರ ರಕ್ಷಣೆಗಾಗಿ ಹಲವು ಕಾನೂನು ರೂಪಿಸಲಾಗಿದ್ದು ಇದರ ಅರಿವು ಅಗತ್ಯ. ಆಧುನಿಕ ಸೋಗಿನಲ್ಲಿ ವಿದ್ಯಾರ್ಥಿನಿಯರು ಮೊಬೈಲ್, ಸಿನಿಮಾ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮನೋರಂಜನೆ ಕಾರ್ಯಕ್ರಮಗಳಿಗೆ ಮಾರುಹೋಗಿ ಶಿಕ್ಷಣಕ್ಕಿಂತ ಭ್ರಮೆ ಲೋಕದಲ್ಲಿ ಅನಾವಶ್ಯಕ ಅಪ್ರಯೋಜಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಗ್ರಾಮೀಣ ಪ್ರದೇಶದ ಬಡತನದಲ್ಲಿರುವವರು ತಮ್ಮ ಮಕ್ಕಳ ಭವಿಷ್ಯವನ್ನ ಕಟ್ಟಿಗೊಳ್ಳಲು ಹಾಸ್ಟೆಲ್‌ಗಳಗೆ ಸೇರಿಸಲಾಗುತ್ತದೆ. ವಿದ್ಯಾರ್ಥಿ ನಿಮ್ಮ ಪೋಷಕರ ಮನಸ್ಸನ್ನು ನೋಯಿಸದೇ ಅವರ ಆಸೆಗಳನ್ನು ಈಡೇರಿಸುವಂತಾಗಬೇಕು ಎಂದರು.ಕೆಲವು ಕ್ಷುಲ್ಲಕ ಕಾರಣಕ್ಕೆ ಪುಂಡ ಪೋಕರಿಗಳ ಆಮಿಷಗಳಿಗೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವುದು ದುರಾದೃಷ್ಟಕರ, ಇಂತಹ ಯಾವುದೇ ಆಮಿಷಗಳಿಗೆ ಒಳಪಡದೆ ದೂರ ದೃಷ್ಟಿಕೋನವನ್ನು ಇಟ್ಕೊಂಡು ವಿದ್ಯಾರ್ಥಿನಿಯರು ವಿಧ್ಯಾಭ್ಯಾಸದಲ್ಲಿ ಸಾಧನೆಯತ್ತ ಮುಖ ಮಾಡಬೇಕು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.ಕೋಳಾಲ ಪಿಎಸ್‌ಐ ರೇಣುಕಾ ಯಾದವ್ ಮಾತನಾಡಿ, ವಿದ್ಯಾರ್ಥಿಗಳ ಮೇಲಿನ ಕಿರುಕುಳ ಮತ್ತು ದೌರ್ಜನ್ಯಗಳನ್ನು ತಡೆಯಲು ಅನೇಕ ಕಾನೂನುಗಳನ್ನು ತರಲಾಗಿದೆ. ಸರ್ಕಾರದ ಮಟ್ಟದಲ್ಲಿ ಇವುಗಳ ಅನುಷ್ಠಾನಕ್ಕೆ ಹಣವನ್ನು ಸಹ ಖರ್ಚು ಮಾಡಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆಯ ತರಬೇತಿ ನೀಡುವ ಅಗತ್ಯತೆ ಇದ್ದು ಆತ್ಮರಕ್ಷಣೆ ತರಬೇತಿ ನೀಡಿದರೆ ಎಂತಹ ಸಂದರ್ಭದಲ್ಲಿ ಅನಾಹುತದಿಂದ ಪಾರಾಗಿ ಬರಬಹುದು ಎಂದು ಅಭಿಪ್ರಾಯಪಟ್ಟರು.ಹಾಸ್ಟೆಲ್ ವಿದ್ಯಾರ್ಥಿನಿಯರು ತಮ್ಮ ಪೋಷಕರು ನಿಮ್ಮಗಳ ಮೇಲೆ ಇಟ್ಟಿರುವಂತ ನಂಬಿಕೆಗಳನ್ನು ಉಳಿಸಿಕೊಂಡು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಧ್ಯೇಯೋದ್ದೇಶ ಗುರಿಯೊಂದಿಗೆ ಸಾಗಬೇಕು, ಯಾವುದೇ ಆಮಿಷಗಳಿಗೆ ಬಲಿಯಾಗದೆ, ನಿಮ್ಮ ಶಿಕ್ಷಣದ ವಾತಾವರಣವನ್ನು ಕಲುಷಿತಗೊಳಿಸುವಂತ ಯಾವುದೇ ಒತ್ತಡ ಬಂದರು ಅದರ ವಿರುದ್ಧ ಸಿಡಿದೆದ್ದು ನಿಲ್ಲುವ ಮನಸ್ಥಿತಿ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು, ವಿದ್ಯಾರ್ಥಿನಿಯರ ಮೇಲೆ ನಡೆಯುವ ಸಣ್ಣಪುಟ್ಟ ದೌರ್ಜನ್ಯಗಳಿಗೊ ದೊಡ್ಡ ಮಟ್ಟದ ಪೋಕ್ಸೋ ಅಂತ ಕಠಿಣ ಕಾನೂನು ರಕ್ಷಣೆ ನೀಡುತ್ತಿದ್ದು, ಇಂತಹ ಯಾವುದೇ ವಾತಾವರಣ ನಿಮ್ಮ ಮುಂದೆ ಕಂಡರೂ ತತ್‌ಕ್ಷಣ ಪೊಲೀಸ್ ರಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮೇಲ್ವಿಚಾರಕಿಯಾದ ಜಯಮ್ಮ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಸುಮಾ, ಕೊರಟಗೆರೆ ಸಿಪಿಐ ಕಚೇರಿಯ ಡಬ್ಲ್ಯೂಪಿಸಿ ರಂಜಿತಾ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!