- ಹಕ್ಕೊತ್ತಾಯ ಸಲ್ಲಿಸಲು ಸಿಎಂ ಬಳಿಗೆ ನಿಯೋಗ ತೆರಳೋಣ: ಡಾ.ಬಸವಪ್ರಭು ಶ್ರೀ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿವರ್ಷ ಶರಣರು, ಮಹಾತ್ಮರು, ದಾರ್ಶನಿಕರ ಜಯಂತಿಯನ್ನು ನಮ್ಮ ಸರ್ಕಾರ ಆಚರಣೆ ಮಾಡುತ್ತಿದೆ. ಅದೇ ರೀತಿಯಾಗಿ ಕರ್ನಾಟಕದ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರಗಿ, ಪತ್ರಕರ್ತ, ಸರಳ ಜೀವನ ನಡೆಸಿದಂತಹ ಹರ್ಡೆಕರ್ ಮಂಜಪ್ಪ ಅವರ ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು ಎಂಬ ಹಕ್ಕೊತ್ತಾಯ ನಾವೆಲ್ಲರೂ ನಿಯೋಗದ ಮುಖಾಂತರ ಮುಖ್ಯಮಂತಿ ಅವರಿಗೆ ಮನವಿ ಮಾಡಿ ಇಡೀ ರಾಜ್ಯಾದ್ಯಂತ ಆಚರಣೆ ಮಾಡುವಂತಾಗಲು ಪ್ರಯತ್ನ ಮಾಡೋಣ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದರು.
ವಿಶ್ವಗುರು ಬಸವಣ್ಣನವರ ಹೆಸರು ಇಡೀ ಕರ್ನಾಟಕ, ಭಾರತಕ್ಕೆ ಅಲ್ಲ. ಇಡೀ ವಿಶ್ವಕ್ಕೇ ಮುಟ್ಟಿದೆ ಅದಕ್ಕೆ ಕಾರಣರೆಂದರೆ ಹರ್ಡೆಕರ್ ಮಂಜಪ್ಪ. ದಾವಣಗೆರೆಯ ವಿರಕ್ತ ಮಠದಲ್ಲಿ ಮೊಟ್ಟಮೊದಲ ಬಾರಿಗೆ ಬಸವ ಜಯಂತಿಯನ್ನು 1913ರಲ್ಲಿ ಪ್ರಾರಂಭ ಮಾಡಿದವರು. ಅಂದಿನಿಂದ ಪ್ರಾರಂಭವಾದ ಬಸವ ಜಯಂತಿ ಇಂದು ಇಡೀ ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ ಎಂದರು.
ಹರ್ಡೆಕರ್ ಮಂಜಪ್ಪನವರು ಬರೀ ದಾವಣಗೆರೆಗೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಸ್ವಾತಂತ್ರ್ಯ ಬರಬೇಕು ಎಂದು ದೊಡ್ಡ ಕ್ರಾಂತಿ ಮಾಡಿದವರು. ಶಿಕ್ಷಕ ವೃತ್ತಿ ತೊರೆದು ದೇಶ ಮೊದಲು, ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು ಎಂದು ದಾವಣಗೆರೆಗೆ ಬಂದು ಧನುರ್ದಾರಿ ಪತ್ರಿಕೆ ಆರಂಭಿಸಿದರು. ದಾವಣಗೆರೆ ಮಂಡಿಪೇಟೆಯ ಪಕ್ಕದ ರಸ್ತೆಗೆ ಅವರ ಹೆಸರು ಇದೆ. ಆದರೂ, ಇಂದು ಬೇರೆ ಹೆಸರಿನಿಂದಲೇ ಕರೆಯುತ್ತಿರುವುದು ಬೇಸರದ ಸಂಗತಿ ಎಂದರು.ಮಹಾನಗರ ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ ಮಾತನಾಡಿ, ಬಸವಣ್ಣನವರ ವಿಚಾರಗಳು, ಅವರು ನಡೆದು ಬಂದಂತಹ ದಾರಿಯನ್ನು ಬೆಳಕು ಚೆಲ್ಲುವಂತಹ ನಿಜವಾದ ಪ್ರಯತ್ನವನ್ನು ಹರ್ಡೆಕರ್ ಮಂಜಪ್ಪ ಮಾಡಿದ್ದಾರೆ. ಅವರು ನಮಗೆ ಸದಾ ಸ್ಮರಣೀಯರು ಎಂದರು.
- - -
- ಡಾ. ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ
-18ಕೆಡಿವಿಜಿ37, 38: