- ಅಭಿಯಾನಕ್ಕೆ ಚಾಲನೆ ನೀಡಿ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ - - - ಹರಿಹರ: ಹರ್ ಘರ್ ತಿರಂಗಾ-೨೦೨೪ ಅಭಿಯಾನವು ಸ್ವಾತಂತ್ರ‍್ಯ ಹೋರಾಟಗಾರರನ್ನು ನೆನೆಯುವ ಒಂದು ಉತ್ತಮ ಅವಕಾಶವಾಗಿದೆ ಎಂದು ಪೌರಾಯುಕ್ತ ಪಿ.ಸುಬ್ರಮಣ್ಯ ಶ್ರೇಷ್ಠಿ ಅಭಿಪ್ರಾಯಪಟ್ಟರು.
ನಗರದ ನಗರಸಭೆ ಆವರಣದಲ್ಲಿ ಹರ್ ಘರ್ ತಿರಂಗಾ-೨೦೨೪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನ ಮೂಡಿಸಲು ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ. ಎಲ್ಲರೂ ಸಮರ್ಥವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮನೆಗಳ ಮೇಲೆ ಸಂಜೆ ಸೂರ್ಯಾಸ್ತದವರೆಗೆ ನಿರಂತರವಾಗಿ ರಾಷ್ಟ್ರಧ್ವಜ ಹಾರಿಸಬೇಕು. ಜಿಲ್ಲಾದ್ಯಂತ ಸ್ವಾತಂತ್ರ‍್ಯ ಸಂಭ್ರಮ ವೈವಿಧ್ಯಮಯ ಮತ್ತು ವರ್ಣರಂಜಿತ ಆಚರಣೆ ಭಾಗವಾಗಿ ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ಆ.೧೩ರ ಇಂದಿನಿಂದ ೧೫ರವರೆಗೆ ಪ್ರತಿ ಮನೆ ಮೇಲೆ ರಾಷ್ಟ್ರಧ್ವಜ ಆರಿಸಿ, ದೇಶಭಕ್ತಿ ದೇಶಾಭಿಮಾನ ಬಿಂಬಿಸುವ ಮೂಲಕ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸುವ ನಿರ್ಣಯ ಕೈಗೊಳ್ಳೋಣ ಎಂದು ತಿಳಿಸಿದರು.
ನಗರಸಭೆ ಸದಸ್ಯ ದಾದಾ ಕಲಂದರ್ ಮಾತನಾಡಿ, ದೇಶದ ಸ್ವಾತಂತ್ರ‍್ಯದ ಇತಿಹಾಸದಲ್ಲಿ ಅನೇಕ ಮಹಾನುಭಾವರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಅವರ ನೆನಪು ಮಾಡಿಕೊಳ್ಳಲು ಭಾರತೀಯರಾದ ನಮಗೆಲ್ಲಾ ಒಂದು ಸುವರ್ಣ ಅವಕಾಶ. ಆದ್ದರಿಂದ ಎಲ್ಲರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸೋಣ ಎಂದರು.ಸದಸ್ಯ ಎಂ.ಎಸ್. ಬಾಬುಲಾಲ್ ಮಾತನಾಡಿ, ಭಾರತೀಯರಾದ ನಾವೆಲ್ಲ ದೇಶದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾದರೆ ಸ್ವಾತಂತ್ರ್ಯೋತ್ಸವ ಸುದಿನ ಸಂದರ್ಭದಲ್ಲಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶದ ಐಕ್ಯತೆಗೆ ಸಹಕಾರ ನೀಡೋಣ ಎಂದರು.
ಅಭಿಯಾನ ಆರಂಭಕ್ಕೂ ಮುನ್ನ ನಗರಸಭೆ ವ್ಯವಸ್ಥಾಪಕ ಕೆ.ಆರ್. ಶಿವಕುಮಾರ್, ಕಂದಾಯ ಇಲಾಖೆ ರಾಜ್ಯಸ್ವ ನಿರೀಕ್ಷಕ ಸಮೀರ್, ಗ್ರಾಮ ಅಭಿವೃದ್ಧಿ ಅಧಿಕಾರಿ ಎಚ್.ಜಿ.ಹೇಮಂತ್ ಕುಮಾರ್ ಸೇರಿದಂತೆ ಹಲವರು ಸ್ವಾತಂತ್ರ್ಯೋತ್ಸವ ಬಗ್ಗೆ ಹಾಗೂ ಅಭಿಯಾನ ಬಗ್ಗೆ ಮೆಚ್ಚುಗೆ ನುಡಿಗಳನ್ನಾಡಿದರು.ನಗರಸಭೆ ಕಂದಾಯ ಅಧಿಕಾರಿ ರಮೇಶ್, ಜಗದೀಶ್, ಕರಿಯಪ್ಪ, ರಮೇಶ್, ಅಣ್ಣಪ್ಪ, ರಾಮು, ರವಿಪ್ರಕಾಶ್, ಶಿವಮೂರ್ತಿ, ಜಗದೀಶ್ ಅಡ್ಡೆರ, ಆಮ್ಬ್ರಿನ್ ಖಾನ್, ಮಂಜುನಾಥ, ಬಸವರಾಜ್, ಸೌಜನ್ಯ, ಗಾಯತ್ರಿ, ಲಲಿತ, ವೀಣಾ, ಮಮತಾ, ಜಯಮ್ಮ, ಭಾಗ್ಯಮ್ಮ, ನಗರಸಭಾ ಸಿಬ್ಬಂದಿ ಅಭಿಯಾನದಲ್ಲಿ ಭಾಗಿಯಾಗಿದ್ದರು.