ರಾಷ್ಟ್ರಾಭಿಮಾನ ಜಾಗೃತಿಗೆ ಹರ್‌ಘರ್ ತಿರಂಗಾ: ಶೋಭಾ

KannadaprabhaNewsNetwork |  
Published : Aug 15, 2025, 02:18 AM IST
ಪೀಣ್ಯ ದಾಸರಹಳ್ಳಿ | Kannada Prabha

ಸಾರಾಂಶ

ಹರ್‌ಘರ್‌ ತಿರಂಗಾ ಅಂಗವಾಗಿ ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರದಲ್ಲಿ ಹಮ್ಮಿಕೊಂಡಿದ್ದ ಬೈಕ್‌ರ‍್ಯಾಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಶಾಸಕ ಎಸ್ .ಮುನಿರಾಜು, ಬಿಜೆಪಿ ಮುಖಂಡರು ಇದ್ದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಪ್ರಧಾನಿ ನರೇಂದ್ರ ಮೋದಿ ಅವರು 79ನೇ ಸ್ವಾತಂತ್ರೊತ್ರ್ಯೕತ್ಸವ ನಿಮಿತ್ತ ಹರ್‌ಘರ್‌ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಎಲ್ಲರೂ ದೇಶಭಕ್ತಿಯಿಂದ ತಿರಂಗಾ ಧ್ವಜ ಹಾರಿಸುವ ಮೂಲಕ ಪ್ರತಿ ಪ್ರಜೆಯಲ್ಲೂ ರಾಷ್ಟ್ರಾಭಿಮಾನ ಜಾಗೃತಗೊಳ್ಳುವಂತೆ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಬಿಜೆಪಿ ಯುವಮೋರ್ಚಾ ವತಿಯಿಂದ ಮಲ್ಲಸಂದ್ರದ ಆಂಜನೇಯ ದೇವಸ್ಥಾನದಿಂದ ಹಮ್ಮಿಕೊಂಡಿದ್ದ ಬೈಕ್‌ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಅದರ ನೆನಪಿಗಾಗಿ ಹರ್‌ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ. ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು. ಸ್ವಾತಂತ್ರ್ಯದ ಇತಿಹಾಸವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.

ಶಾಸಕ ಎಸ್ .ಮುನಿರಾಜು ಮಾತನಾಡಿ, ಹರ್‌ಘರ್‌ ತಿರಂಗಾ ಅಭಿಮಾನದ ಮೂಲಕ ಜನರದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರದ ಕುರಿತು ಹೆಮ್ಮೆಯ ಭಾವನೆ ಮೂಡಿಸುವ ಗುರಿ ಇದೆ. ಅಲ್ಲದೇ ರಾಷ್ಟ್ರ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರ ಕೊಡುಗೆಯನ್ನು ಸ್ಮರಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನವನ್ನು ಎಲ್ಲರೂ ಸಮರ್ಥವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.ಮನೆ ಮನೆಗಳಲ್ಲಿ ತಿರಂಗಾ:

ಚಿಕ್ಕಸಂದ್ರ ಅನಂದರೆಡ್ಡಿ ಮನೆ, ಬಾಗಲಗುಂಟೆಯ ಮುನಿಕೊಂಡಪ್ಪ ಲೇಔಟ್‌ನ ಅನಿತಾ ಪದ್ಮನಾಭ್ ಮನೆ , ಕೇಂಪೇಗೌಡನಗರದ ಮಂಜಮ್ಮನವರ ಮನೆ, ದಾಸರಹಳ್ಳಿ ಮಹೇಶ್ವರಮ್ಮ ದೇವಾಸ್ಥಾನದ ಮಂಜೇಶ್ ಅವರ ಮನೆ, ಮಲ್ಲಸಂದ್ರದ ಮಂಟಪ್ಪ ರಸ್ತೆಯ ಪಾಂಡುರಂಗರಾವ್ ಅವರ ಮನೆಗಳಿಗೆ ಭೇಟಿ ನೀಡಿ ಹರ್‌ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಯಿತು.

ಬೈಕ್‌ರ‍್ಯಾಲಿಯಲ್ಲಿ ತ್ರಿವಣ ಧ್ವಜಗಳು ರಾರಾಜಿಸಿದವು. ದಾರಿಯುದ್ದಕೂ ಭಾರತ ಮಾತಾ ಕೀ ಜೈ... ವಂದೇ ಮಾತರಂ... ಜಯ ಘೋಷಗಳು ಮೊಳಗಿದವು.

ಈ ವೇಳೆ ದಾಸರಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಮೇದರಹಳ್ಳಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಟಿ.ಶಿವಕುಮಾರ್, ಯುವ ಮೋರ್ಚಾ ಅಧ್ಯಕ್ಷ ಜೆ.ವಿ.ಎಸ್.ಸತೀಶ್, ಪ್ರಧಾನ ಕಾರ್ಯದರ್ಶಿ ಭರತ್ ಸೌಂದರ್ಯ, ವಿಜಯ್ ಕುಮಾರ್, ಸ್ಥಳೀಯ ಮುಖಂಡರಾದ ಕೃಷ್ಣಮೂರ್ತಿ, ಬಿ.ನಾರಾಯಣ, ನಾಗಣ್ಣ ಗುರುಪ್ರಸಾದ್, ಹಾವನೂರು ಬಡಾವಣೆ ಹನುಮಂತರಾಯಪ್ಪ, ಮುರುಳಿ, ಭಾಗ್ಯಮ್ಮ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ