18ರಿಂದದ್ಯಾಮವ್ವ, ದುರ್ಗಮ್ಮ ದೇವತೆಯರ ಹರಿ ಜಾತ್ರೋತ್ಸವ

KannadaprabhaNewsNetwork |  
Published : Aug 11, 2026, 02:00 AM IST
ಸುದ್ದಿಗೋಷ್ಠಿಯಲ್ಲಿ ಹಿರಿಯರು ಮಾತನಾಡಿದರು.  | Kannada Prabha

ಸಾರಾಂಶ

ಆ. 18ರಂದು ಒಕ್ಕಲಿಗೇರಿ ಓಣಿಯಲ್ಲಿರುವ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯ ಮೂರ್ತಿಗಳ ಪ್ರತಿಷ್ಠಾಪನೆ ಜರುಗುವುದು. 25ರ ವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.

ಗದಗ: ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಐತಿಹಾಸಿಕ ಗದಗ- ಬೆಟಗೇರಿಯ ಗ್ರಾಮದೇವತೆಯರಾದ ದ್ಯಾಮವ್ವ, ದುರ್ಗಮ್ಮ ದೇವಿಯರ ಹರಿ ಜಾತ್ರೋತ್ಸವ ಆ. 18ರಿಂದ 28ರ ವರೆಗೆ ಜರುಗಲಿದೆ ಎಂದು ವೀರಭದ್ರೇಶ್ವರ ಮತ್ತು ದ್ಯಾಮವ್ವ, ದುರ್ಗಮ್ಮ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ಕಮಿಟಿಯ ಸದಸ್ಯ ಎಂ.ಎಂ. ಹಿರೇಮಠ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ. 18ರಂದು ಒಕ್ಕಲಿಗೇರಿ ಓಣಿಯಲ್ಲಿರುವ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯ ಮೂರ್ತಿಗಳ ಪ್ರತಿಷ್ಠಾಪನೆ ಜರುಗುವುದು. 25ರ ವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ ಎಂದರು.

ಆ. 24ರಂದು ಮಧ್ಯಾಹ್ನ 1ಕ್ಕೆ ಒಕ್ಕಲಗೇರಿ ಓಣಿಯಲ್ಲಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗುವುದು. 25ರಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನಗರದಲ್ಲಿರುವ ದೇವಸ್ಥಾನಗಳಿಗೆ ಉಡಿ ತುಂಬುವ ಹಾಗೂ ಕಾಯಿ ಒಡೆಸುವ ಕಾರ್ಯಕ್ರಮ ಜರುಗುವುದು. ಆ. 26ರಂದು ಬೆಳಗ್ಗೆ 11ಕ್ಕೆ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯನ್ನು ಸಕಲಮಂಗಲ ವಾದ್ಯ ವೈಭವಗಳೊಂದಿಗೆ ಒಕ್ಕಲಗೇರಿ ಓಣಿಯ ದ್ಯಾಮವ್ವ ದೇವಸ್ಥಾನದಿಂದ ಜೋಡು ಮಾರುತಿ ದೇವಸ್ಥಾನದ ಹತ್ತಿರದ ಕಿಲ್ಲಾ ಓಣಿಯಲ್ಲಿರುವ ದುರ್ಗಮ್ಮನ ಗುಡಿಯಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುವುದು.

ಆ. 27ರಂದು ಸನ್ಮಾನ ಕಾರ್ಯಕ್ರಮ ಜರುಗುವುದು. ಆ. 28ರಂದು ದ್ಯಾಮವ್ವ ಹಾಗೂ ದುರ್ಗಮ್ಮ ದೇವರ ಗುಡಿಯಲ್ಲಿ ಬೆಳಗ್ಗೆ 7ಕ್ಕೆ ಹೋಮ ಹವನ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗುವವು ಎಂದರು.

ಕಾರ್ಯಾಧ್ಯಕ್ಷರಾದ ಫಕೀರಪ್ಪ ಹೆಬಸೂರ, ಕೋಶಾಧ್ಯಕ್ಷ ವಿಜಯಕುಮಾರ ಗಡ್ಡಿ, ಸಂಘಟನ ಕಾರ್ಯದರ್ಶಿ ರಾಜು ಖಾನಪ್ಪನವರ, ಹರಿ ಜಾತ್ರೆಯ ಉಪಾಧ್ಯಕ್ಷ ಆನಂದ ಸರ್ವದೆ, ಸುಧೀರ ಕಾಟೀಗರ ಮುಂತಾದವರು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ನಿಂಗಪ್ಪ ಪಡಗದ, ರಾಮಣ್ಣ ಫಲದೊಡ್ಡಿ, ಮುರಿಗೆಪ್ಪ ನಾಲ್ವಾಡ, ಗಂಗಾಧರ ಮೇಲಗಿರಿ, ನರಸಪ್ಪ ತುಕ್ಕಪ್ಪನವರ, ಪ್ರಕಾಶ ಬಾಂಡಗೆ, ಸುರೇಶ ಮರಳಪ್ಪನವರ, ನಾಗರಾಜ ಮೆಣಸಗಿ, ಬಸವರಾಜ ಹಡಪದ, ಹೇಮಂತ ಗಿಡ್ಡಹನುಮಣ್ಣನವರ, ಮಹೇಶ ರೋಖಡೆ, ಸುರೇಶ ಹೆಬಸೂರ, ಕಿರಣ ಕಮತರ, ಶಿವಪ್ಪ ಮುಳ್ಯಾಳ, ವಿರುಪಾಕ್ಷಪ್ಪ ಅಕ್ಕಿ, ಲೋಕನಾಥಸಾ ಬದಿ, ನಂದು ಬೇವಿನಕಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘ ಹೋರಾಟಕ್ಕೆ ಇಲ್ಲ ನ್ಯಾಯ: ಮಂತ್ರಿ, ಶಾಸಕರನ್ನು ನಿಲ್ಲಿಸಿ ಕೇಳೋಣ
ಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಮಾಡಿ: ಸಿಐಟಿಯು ಪ್ರತಿಭಟನೆ