- ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ, ಕಂದಾಯ ಅಧಿಕಾರಿ ಯು.ರಮೇಶ ಆರೋಪಿಗಳು
- ಪೆಟ್ರೋಲ್ ಬಂಕ್ ಜಾಗದ ಮಾಲೀಕನಿಂದ ಲಂಚ ಪಡೆಯುವಾಗ ಪೊಲೀಸರ ದಾಳಿ - ಲಂಚ ನೀಡುವಂತೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ರಾಜು ಲಕ್ಷ್ಮಣ ಕಾಂಬ್ಳೆ ಎಂಬವರಿಗೆ ಬೇಡಿಕೆ
- ಮೂರ್ನಾಲ್ಕು ವರ್ಷಗಳ ₹1,39,400 ಬಾಕಿ ಉಳಿಸಿಕೊಂಡಿದ್ದ ಜಾಗದ ಮಾಲೀಕ ರಾಜು ಕಾಂಬ್ಳೆ- ಹರಿಹರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀದೇವಿ ಪೆಟ್ರೋಲ್ ಬಂಕ್ ನಿವೇಶನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ನಿವಾಸಿ ರಾಜು ಲಕ್ಷ್ಮಣ ಕಾಂಬ್ಳೆ ಎಂಬವರು ಹರಿಹರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀದೇವಿ ಪೆಟ್ರೋಲ್ ಬಂಕ್ ನಿವೇಶನ ಹೊಂದಿದ್ದಾರೆ. ಮೂರ್ನಾಲ್ಕು ವರ್ಷಗಳ ಕಂದಾಯ ಪಾವತಿ ಬಾಕಿ ಉಳಿಸಿಕೊಂಡಿದ್ದರು. ಹರಿಹರ ನಗರಸಭೆ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ನಾಗೇಶ ಹಾಗೂ ಕಂದಾಯ ಅಧಿಕಾರಿ ಯು.ರಮೇಶ ಸದರಿ ನಿವೇಶನಕ್ಕೆ ಪ್ರಸಕ್ತ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ಕಂದಾಯದ ಮೊತ್ತ ₹1,39,400 ಪಾವತಿಸುವಂತೆ ಜಾಗದ ಮಾಲೀಕ ರಾಜು ಲಕ್ಷ್ಮಣ ಕಾಂಬ್ಳೆಗೆ ಹೇಳಿದ್ದರು.
ಸಂ:11/2024 ಕಲಂ:7(ಎ) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡರು. ಬಂಕ್ ಜಾಗದ ಮಾಲೀಕ ರಾಜು ಕಾಂಬ್ಳೆಯಿಂದ ಹರಿಹರ ನಗರಸಭೆಯ ಎ-1 ಆರೋಪಿತ ಅಧಿಕಾರಿ ನಾಗೇಶ ₹20 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಕೈಗೆ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ. ಅನಂತರ 2ನೇ ಆರೋಪಿ ಅಧಿಕಾರಿ ಯು.ರಮೇಶನನ್ನೂ ಲೋಕಾಯುಕ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
- - - -25ಕೆಡಿವಿಜಿ3: ನಾಗೇಶ