ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕು ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿದ ಅವರು, ಯಾವುದೇ ಸಭೆ, ಸಮಾರಂಭ, ಆಯೋಜಿಸಲು ಪೂರ್ವಾನುಮತಿ ಪಡೆಯುವುದು, ಪ್ರಚಾರ ಕಾರ್ಯಕ್ಕೆ ವಾಹನ ಬಳಕೆ, ಬಾವುಟ, ಬಂಟಿಂಗ್ಸ್, ಇತ್ಯಾದಿಗೆ ಪರವಾನಿಗೆ ಪಡೆಯುವುದು ಸೇರಿದಂತೆ ಎಲ್ಲ ನಿಯಮ ಪಾಲಿಸಬೇಕು. ತಪ್ಪಿದರೆ ದಂಡ ಹಾಕುವುದಲ್ಲದೇ, ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತದೆ ಎಂದರು.
ಮತದಾರರು:ಪ್ರಸಕ್ತ ಚುನಾವಣೆಗೆ ತಾಲೂಕಿನಲ್ಲಿ ೧,೦೫,೩೪೩ ಮಹಿಳೆಯರು, ೧,೦೪,೩೪೮ ಪುರುಷರು ಹಾಗೂ ೧೭ ಮಂಗಳಮುಖಿಯರು ಹಾಗೂ ಗಡಿ ಭದ್ರತಾ ಸೇವೆಯಲ್ಲಿರುವ ೭೩ ಮತದಾರರು ಸೇರಿ ಒಟ್ಟು ೨,೦೯,೭೮೦ ಮತಗಳಿವೆ. ಈ ಚುನಾವಣೆಯಲ್ಲಿ ೨೫೭೯ ಯುವಕರು ಹಾಗೂ ೨೩೮೯ ಯುವತಿಯರು ಒಟ್ಟು ೪೯೬೮ ಯುವ ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ.
ತಾಲೂಕಿನಲ್ಲಿ ಒಟ್ಟು ೨೨೮ ಮತಗಟ್ಟೆಗಳಿದ್ದು, ಇದರಲ್ಲಿ ೫೩ ಸೂಕ್ಷ್ಮ ಹಾಗೂ ೮ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಕ್ಲಿಷ್ಟಕರ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕ ಅಥವಾ ವೀಡಿಯೋಗ್ರಾಫರ್ ಅಥವಾ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ಗಾಳಿ, ಬೆಳಕು, ಫ್ಯಾನ್ ವ್ಯವಸ್ಥೆ ಇರುತ್ತದೆ.
ನಗರದ ರಾಘವೇಂದ್ರ ಮಠದ ಸಮೀಪ, ಹಲಸುಬಾಳು ಗ್ರಾಮದ ಎನ್.ಎಚ್-4 ಹೆದ್ದಾರಿಯಲ್ಲಿ ಹಾಗೂ ಕುರುಬರಹಳ್ಳಿ, ನಂದಿಗುಡಿ ಬಳಿ ಒಟ್ಟು ೫ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅಕ್ರಮ ಮದ್ಯ, ಹಣ, ಗೃಹೋಪಯೋಗಿ ವಸ್ತುಗಳ ಸಾಗಣೆ ಮೇಲೆ ನಿಗಾ ಇಡಲಾಗಿದೆ ಎಂದರು.
ಚುನಾವಣೆ ಸಂಬಂಧಿಸಿದಂತೆ ದಿನದ ೨೪ ಗಂಟೆಯೂ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ೦೮೧೯೨- ೨೧೩೩೦೩ ಸಂಖ್ಯೆಗೆ ಬರುವ ದೂರು ಕರೆಗಳು ರೆಕಾರ್ಡ್ ಆಗಲಿವೆ. ಅಂಚೆ ಮತ ಪತ್ರಗಳು ಹಾಗೂ ಇಡಿಸಿಯಲ್ಲಿ ೮೫ ವರ್ಷ ಮೇಲ್ಪಟ್ಟ ೧೩೨೦ ಹಾಗೂ ಅಂಗವಿಕಲರು ೩೨೫೮ ಒಟ್ಟು ೪೫೭೮ ಮತದಾರರು ಇರುತ್ತಾರೆ.
ಚುನಾವಣಾ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ. ಹಾಗೂ ಹರಿಹರ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿಯಾಗಿ ಭಾವನ ಬಸವರಾಜ್ ಮತ್ತು ತಹಶೀಲ್ದಾರ್ ಕೆ.ಎಂ ಗುರು ಬಸವರಾಜ್ ಚುನಾವಣಾ ಪ್ರಕ್ರಿಯೆಗಳ ಮೇಲೆ ನಿಗಾ ವಹಿಸಿದ್ದಾರೆ.
- - - -೨೪ಎಚ್‌ಆರ್‌ಆರ್೨: