- ನಿಷೇಧಾಜ್ಞೆ ಜಾರಿ- ಚಾಮುಂಡಿಬೆಟ್ಟದಲ್ಲಿ ಪುಷ್ಪಾರ್ಚನೆಗೆ ಸಿಗದ ಅವಕಾಶ
ಮೈಸೂರಿನ ಪುರಭವನ ಆವರಣದಲ್ಲಿ ಮಹಿಷಾ ದಸರಾ ಆಚರಣಾ ಸಮಿತಿಯು ಭಾನುವಾರ ಆಯೋಜಿಸಿದ್ದ ಮಹಿಷಾ ಮಂಡಲೋತ್ಸವವನ್ನು ಬುದ್ಧ, ಅಂಬೇಡ್ಕರ್, ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೋಧಿದತ್ತ ಬಂತೇಜಿ, ಪುರುಷೋತ್ತಮ್, ಪ್ರೊ.ಕೆ.ಎಸ್. ಭಗವಾನ್, ಪ್ರೊ. ನಂಜರಾಜೇ ಅರಸ್, ಡಾ. ಕೃಷ್ಣಮೂರ್ತಿ ಚಮರಂ, ಸಿದ್ಧಸ್ವಾಮಿ ಇದ್ದರು.
----ಕನ್ನಡಪ್ರಭ ವಾರ್ತೆ ಮೈಸೂರುಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು ಎಂಬ ಮಹಿಷ ಮಂಡಲೋತ್ಸವ ಆಚರಣಾ ಸಮಿತಿಯ ಉದ್ದೇಶ ಈಡೇರಲಿಲ್ಲ. ಪುರಭವನ ಆವರಣ ಹೊರತುಪಡಿಸಿ ಚಾಮುಂಡಿಬೆಟ್ಟವೂ ಸೇರಿದಂತೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಇದಕ್ಕೆ ಕಾರಣ. ಹೀಗಾಗಿ ಮಹಿಷಾ ಮಂಡಲೋತ್ಸವವು ಕಳೆದ ಬಾರಿಯಂತೆ ಈ ಬಾರಿಯೂ ಪುರಭವನ ಆವರಣಕ್ಕೆ ಸೀಮಿತವಾಗಿ ನಡೆಯಿತು.
ನಗರದ ಪುರಭವನದ ಆವರಣದಲ್ಲಿ ಮಹಿಷಾ ದಸರಾ ಆಚರಣಾ ಸಮಿತಿಯು ಭಾನುವಾರ ಆಯೋಜಿಸಿದ್ದ ಮಹಿಷಾ ಮಂಡಲೋತ್ಸವ (ಮಹಿಷಾ ದಸರಾ) ದಲ್ಲಿ ಮಾತನಾಡಿದ ಅವರು, ಅ.12 ರಂದು ಅಶೋಕ ಚಕ್ರವರ್ತಿಯ ಜನ್ಮ ದಿನವಿದ್ದು, ದಸರಾ ಜಂಬೂಸವಾರಿಯ ದಿನದಂದು ಅಶೋಕಪುರಂನಿಂದ ಪುರಭವನದವರೆಗೆ ಅಶೋಕ ಭಾವಚಿತ್ರ ಮೆರವಣಿಗೆ ಮೂಲಕ ತರುತ್ತೇವೆ. ಜಿಲ್ಲಾಡಳಿತ ಅವಕಾಶ ಕೊಡಬೇಕು. ಇಲ್ಲದಿದ್ದರೆ ದಸರಾ ಜಂಬೂಸವಾರಿ ಉದ್ಘಾಟನೆಗೆ ಅಡ್ಡಿಪಡಿಸಲಾಗುವುದು. ಇದಕ್ಕೆ ದಲಿತ ಸಂಘಟನೆಗಳು ಬೆಂಬಲ ಕೊಡಬೇಕು ಎಂದರು.
ಚರಿತ್ರೆ ಮರೆತಿದ್ದಕ್ಕೆ ನಾವು ಬೇಡುವ ಸ್ಥಿತಿಯಲ್ಲಿ ಇದ್ದೇವೆ
ಜಿಲ್ಲಾಡಳಿತ ಮಹಿಷಾ ದಸರಾಗೆ ಅಡ್ಡಿಪಡಿಸಿದೆ. ಇದು ಮಹಿಷನ ಸಮಸ್ಯೆಯಲ್ಲ, ಬದಲಾಗಿ ಇದು ರಾಜಕೀಯ ಪಕ್ಷಗಳ ಮತದ ಸಮಸ್ಯೆಯಾಗಿದೆ. ಹಿಂದುತ್ವ ಹಾಗೂ ಜಾತ್ಯತೀತ ಎಂಬುದು ಓಟ್ ಬ್ಯಾಂಕ್ ಆಗಿದೆ. ಈ ಕಾರಣಕ್ಕೆ ಮಹಿಷಾ ದಸರಾಗೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಹಿಷನ ದೇವಸ್ಥಾನ ಇದೆ. ಮಹಿಷನ ಬಗ್ಗೆ ಮರೆ ಮಾಚಿರುವ ಇತಿಹಾಸ ಹೊರ ತರುವ ಕಾರ್ಯ ಆಗಬೇಕು. ಜನರನ್ನು ರಕ್ಷಣೆ ಮಾಡುತ್ತಿದ್ದವರನ್ನೇ ರಾಕ್ಷಕರು ಎಂದು ಬಿಂಬಿಸಲಾಗಿದೆ. ಒಂದು ವರ್ಗ ರಾಕ್ಷಕರ ಕುರಿತು ಕೆಟ್ಟದಾಗಿ ಬಿಂಬಿಸಿರುವುದನ್ನು ನಾವು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.
ಮೂಲಭೂತ ಹಕ್ಕಿನ ಮೊಟಕು
ಬುದ್ಧ ವಿಹಾರದ ಬೋಧಿದತ್ತ ಬಂತೇಜಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್, ಪ್ರೊ. ನಂಜರಾಜೇ ಅರಸ್, ಡಾ. ಕೃಷ್ಣಮೂರ್ತಿ ಚಮರಂ, ಡಾ. ಸಿದ್ಧಸ್ವಾಮಿ, ಚಿನ್ನಸ್ವಾಮಿ ಮೊದಲಾದವರು ಇದ್ದರು.
-----ಕೋಟ್...
ಮನುಸ್ಮೃತಿಯಲ್ಲಿ ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು ಎಂಬ ಅರ್ಥವಿದೆ. ಇಂತಹ ಧರ್ಮವನ್ನು ನೀವು ಒಪ್ಪಿಕೊಳ್ಳುತ್ತೀರಾ? ದೇವಸ್ಥಾನ ಕಟ್ಟಿದವರು ಶೂದ್ರರು. ಆದರೆ, ದೇವಸ್ಥಾನ ಕಟ್ಟಿದ ನಂತರ ಅವರನ್ನು ಹೊರಗೆ ನಿಲ್ಲಿಸುತ್ತಾರೆ. ಇಂತಹ ಹಿಂದೂ ಧರ್ಮದ ಆಚರಣೆಗಳನ್ನು ನೀವು ಮಾಡಬೇಕಾ? ನಿಮಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗಬೇಡಿ. ಹಿಂದೂ ಧರ್ಮದ ಆಚರಣೆಗೆ ಎಡಗಾಲ ಎಕ್ಕಡದಿಂದ ಹೊಡೆದು ತಿರಸ್ಕರಿಸಿ.- ಪ್ರೊ.ಕೆ.ಎಸ್. ಭಗವಾನ್, ಚಿಂತಕ
-----ಬಾಕ್ಸ್...
ದಿಢೀರ್ ಪ್ರತಿಭಟನೆ- ಪೊಲೀಸರೊಂದಿಗೆ ವಾಗ್ವಾದಚಾಮುಂಡಿಬೆಟ್ಟಕ್ಕೆ ಹೋಗಿ ಮಹಿಷಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಬೇಕು ಎಂದು ಮಹಿಷಾ ದಸರಾ ಆಚರಣಾ ಸಮಿತಿಯವರು ಪುರಭವನ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಪೊಲೀಸರ ಜೊತೆ ವಾಗ್ವಾದಕ್ಕಿಳಿದ ಘಟನೆ ನಡೆಯಿತು.
ಚಾಮುಂಡಿಬೆಟ್ಟಕ್ಕೆ ಹೋಗಲು ಅವಕಾಶ ನೀಡುವಂತೆ ಒತ್ತಾಯಿಸಿದ ಅವರು, ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಚಾಮುಂಡಿಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು 5 ಜನರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಹೀಗಾಗಿ, ಸಮಿತಿಯವರು ಆಕ್ರೋಶಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪುರಭವನ ಆವರಣದಲ್ಲಿರುಪ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಹಿಷಾ ದಸರಾ ಆಚರಣ ಸಮಿತಿಯವರು, ವೇದಿಕೆಯಲ್ಲಿ ಬುದ್ಧ, ಅಂಬೇಡ್ಕರ್, ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.