ಶಾಸ್ತ್ರೋಕ್ತವಾಗಿ ಬಾಗಿಲು ತೆಗೆದ ಹಾಸನಾಂಬೆ ದೇಗುಲ

KannadaprabhaNewsNetwork |  
Published : Oct 10, 2025, 01:00 AM IST
9ಎಚ್ಎಸ್ಎನ್8ಎ : ಗರ್ಭಗುಡಿಯ ಬಾಗಿಲು ತೆರೆದ ವೇಳೆ ದೇವಿಗೆ ಅಲಂಕಾರ ಮಾಡುವ ಮುಂದೆ ಕಂಡುಬಂದ ದೃಶ್ಯ. | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಧಿವಿಧಾನದೊಂದಿಗೆ ಗುರುವಾರ ಮಧ್ಯಾಹ್ನ 12.15ಕ್ಕೆ ನಗರದ ಅಧಿದೇವತೆ ಶ್ರೀ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಈ ವರ್ಷ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ತೀರ್ಮಾನ ಮಾಡಲಾಗಿದ್ದು, ಬರುವಂತಹ ಶ್ರೀಸಾಮಾನ್ಯ ಭಕ್ತಾದಿಗಳಿಗೆ ದರ್ಶನದ ಅವಕಾಶ ಸಿಗಬೇಕು. ಸುಗಮ ದರ್ಶನ ಸಿಗಬೇಕು. ಅತಿಗಣ್ಯರ ದರ್ಶನ ಸಮಯ ಬೆಳಿಗ್ಗೆ ೧೦:೩೦ರಿಂದ ೧೨:೩೦ಕ್ಕೆ ನಿಗದಿ ಮಾಡಲಾಗಿದ್ದು, ಜಿಲ್ಲಾಡಳಿತ ವಾಹನದಿಂದ ಕರೆತಂದು ವಿಶೇಷ ದರ್ಶನ ಮಾಡಿಸಲಾಗುವುದು. ಎಲ್ಲರ ಸಹಕಾರ ಮುಖ್ಯ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಧಿವಿಧಾನದೊಂದಿಗೆ ಗುರುವಾರ ಮಧ್ಯಾಹ್ನ 12.15ಕ್ಕೆ ನಗರದ ಅಧಿದೇವತೆ ಶ್ರೀ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ, ಶ್ರೀ ಆದಿಚುಂಚನಗಿರಿ ಮಹಾಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾಮಠದ ಕಿರಿಯ ಮಠಾಧೀಶರಾದ ಶ್ರೀ ಶಿವಸಿದ್ದೇಶ್ವರ ಮಹಾ ಸ್ವಾಮೀಜಿ, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಪಿ. ಸ್ವರೂಪ್, ಡಿಸಿ ಲತಾಕುಮಾರಿ, ಎಸ್ಪಿ ಮಹಮ್ಮದ್ ಸುಜೀತಾ ಎಸಿ ಮಾರುತಿ, ನಗರಸಭೆ ಅಧ್ಯಕ್ಷ ಗಿರೀಶ್ ಚನ್ನವೀರಪ್ಪ, ಜಿಪಂ ಸಿಒ ಬಿ.ಆರ್. ಪೂರ್ಣಿಮಾ, ತಹಸೀಲ್ದಾರ್ ಗೀತಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆಚ್.ಎಚ್. ವೇಣುಕುಮಾರ್ ಸೇರಿದಂತೆ ಹಲವಾರು ಗಣ್ಯರ ಮತ್ತು ಅಧಿಕಾರಿಗಳ ಎದುರು ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆದು ಭಕ್ತರಿಗೆ ವಿಶ್ವರೂಪ ದರ್ಶನವನ್ನು ಕರುಣಿಸಲಾಯಿತು.ಮೊದಲ ದಿನ ತಳವಾರ ವಂಶದ ನರಸಿಂಹರಾಜ ಅರಸು ಮನೆತನದವರಾದ ನರಸಿಂಹರಾಜ ಅರಸುರವರು ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲಿಗೆ ಪೂಜೆ ಸಲ್ಲಿಸಿದ ಮೇಲೆ ಬಾಳೆ ಕಂದು ಕಡಿಯುವ ಮೂಲಕ ಹಾಸನಾಂಬೆ ಬಾಗಿಲು ತೆಗೆಯಲಾಯಿತು. ಮೊದಲ ದಿವಸದಂದು ಸಾರ್ವಜನಿಕರಿಗೆ ದೇವಾಲಯದ ಒಳ ಪ್ರವೇಶ ಇರಲಿಲ್ಲ. ಆದರೂ ಭಕ್ತರು ಮೊದಲ ದಿನದಲ್ಲಿ ದೇವಿ ದರ್ಶನ ಮಾಡಲು ಮುಗಿ ಬಿದ್ದಿದ್ದರು.

ತುಮಕೂರಿನ ಸಿದ್ದಗಂಗಾಮಠದ ಕಿರಿಯ ಮಠಾಧೀಶರು ಶ್ರೀ ಶಿವ ಸಿದ್ದೇಶ್ವರ ಮಹಾ ಸ್ವಾಮೀಜಿ ಮಾತನಾಡಿ, ಇದೊಂದು ಐತಿಹಾಸಿಕವಾದಂತಹ ವಿಶೇಷವಾದ ದೇವಸ್ಥಾನವಾಗಿದೆ. ವರ್ಷದಲ್ಲಿ ಕೆಲ ದಿನಗಳು ಮಾತ್ರ ಬಾಗಿಲು ತೆಗೆಯಲಾಗುತ್ತದೆ. ಇಲ್ಲಿ ಎಲ್ಲಾ ಅಧಿಕಾರಿಗಳು ತಂಬ ಅಚ್ಚುಕಟ್ಟಾಗಿ ದೇವಾಲಯದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮನಸ್ಸಿಗೆ ನೆಮ್ಮದಿಗಾಗಿ ದೇವಸ್ಥಾನ ಪ್ರಮುಖವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ತನ್ನದೆಯಾದ ಮಹತ್ವವಿದೆ. ಹಾಸನದ ಹೆಸರೇ ಹಾಸನಾಂಬೆ ತಾಯಿ ಇದ್ದು, ಇದೊಂದು ಶಕ್ತಿ ದೇವತೆಯಾಗಿದೆ ಎಂದರು. ಎಲ್ಲಾರಿಗೂ ತಾಯಿ ಆಶೀರ್ವಾದ ಸಿಗಲೆಂದು ಹಾರೈಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ಅಕ್ಟೋಬರ್ ೯ರ ಗುರುವಾರ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ತೆಗೆದು ಅಕ್ಟೋಬರ್ ೨೩ರಂದು ಪೂಜಾ ಕೈಂಕರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಸಮಾರೋಪವಾಗುವುದು. ಇದಾದ ನಂತರ ಮುಂದಿನ ವರ್ಷ ಮತ್ತೆ ಬಾಗಿಲು ತೆರೆಯಲಾಗುತ್ತದೆ. ಅ. ೧೦ರಿಂದ ಸಾರ್ವಜನಿಕರಿಗೆ ದೇವಿ ದರ್ಶನ ಪ್ರಾರಂಭಿಸಿ ಅಕ್ಟೋಬರ್ ೨೨ರ ವರೆಗೂ ಅವಕಾಶ ಕಲ್ಪಿಸಲಾಗುವುದು. ಇಲ್ಲಿಗೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ದೇವಿಯ ಗುಡಿ ಬಾಗಿಲು ಹಾಕುವವರೆಗೂ ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಲಿದೆ. ಈ ಬಾರಿ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ವಸ್ತು ಪ್ರದರ್ಶನ, ಡಾಗ್ ಶೋ, ಪಾಕ ಸ್ಪರ್ಧೆ, ಹೆಲಿ ಟೂರಿಸಂ ಹಾಗೂ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಹಾಸನದ ಸುತ್ತಮುತ್ತ ಪ್ರದೇಶಗಳಿಗೆ ಪ್ರವಾಸಿಗರ ಅನುಕೂಲಕ್ಕಾಗಿ ೧೨ ಪ್ರವಾಸಿ ಪ್ಯಾಕೇಜ್‌ಗಳೂ ಸಿದ್ಧಗೊಂಡಿವೆ. ಎಲ್ಲರೂ ನಿಯಮ ಪಾಲಿಸಿ ಹಾಸನಾಂಬ ದೇವಿಯ ದರ್ಶನ ಪಡೆಯುವಂತೆ ವಿನಂತಿಸಿದರು.

೫ ಲಕ್ಷ ರು. ಗಳದ್ದು ಟಿಕೆಟ್ ಖರೀದಿ:

ಈ ವರ್ಷ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ತೀರ್ಮಾನ ಮಾಡಲಾಗಿದ್ದು, ಬರುವಂತಹ ಶ್ರೀಸಾಮಾನ್ಯ ಭಕ್ತಾದಿಗಳಿಗೆ ದರ್ಶನದ ಅವಕಾಶ ಸಿಗಬೇಕು. ಸುಗಮ ದರ್ಶನ ಸಿಗಬೇಕು. ಅತಿಗಣ್ಯರ ದರ್ಶನ ಸಮಯ ಬೆಳಿಗ್ಗೆ ೧೦:೩೦ರಿಂದ ೧೨:೩೦ಕ್ಕೆ ನಿಗದಿ ಮಾಡಲಾಗಿದ್ದು, ಜಿಲ್ಲಾಡಳಿತ ವಾಹನದಿಂದ ಕರೆತಂದು ವಿಶೇಷ ದರ್ಶನ ಮಾಡಿಸಲಾಗುವುದು. ಎಲ್ಲರ ಸಹಕಾರ ಮುಖ್ಯ. ನೀವು ಹಾಸನ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಾಗಿ ನಮ್ಮ ಕ್ಷೇತ್ರದಲ್ಲೆ ನಮ್ಮ ಮತದಾರರು ನಮಗೆ ಪಾಲಿಸಿಲ್ಲ ಎಂದು ನನ್ನನ್ನು ಪ್ರಶ್ನೆ ಮಾಡಿದ್ದು, ನಾನು ೫ ಲಕ್ಷ ರು. ಗಳದ್ದು ಟಿಕೆಟ್ ಖರೀದಿ ಮಾಡಿ ನೀಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರನ್ನು ಮರೆಯಬಾರದು ಎಂದು ಹೇಳಿದರು. ಇದೇ ವೇಳೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ವಿರಾಜಪೇಟೆ ಅರೇಮೇರಿ ಕಳಂಚೇರಿ ಮಠ ಶ್ರೀ ಶಾಂತ ಮಲ್ಲಿಕಾರ್ಜನ ಸ್ವಾಮೀಜಿ, ಕೊಡ್ಲಿಪೇಟೆ ಶ್ರೀ ಕ್ಷೇತ್ರ ಕಿರಿಕೋಡ್ಲಿಮಠದ ಮಠಾದಮಧೀಶರು ಶ್ರೀ ಸದಾಶಿವ ಸ್ವಾಮೀಜಿ, ಹೊಳೆನರಸೀಪುರ ಶ್ರೀ ಕಲ್ಯಾಣ ಸ್ವಾಮೀಜಿ, ತೇಜೂರು ಮಠ ವಿಜಯಪುರ ಸ್ವಾಮಿಜಿ, ಶಾಸಕ ಸಿ.ಎನ್. ಬಾಲಕೃಷ್ಣ, ಸಿಮೆಂಟ್ ಮಂಜು, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಐಜಿಪಿ ಬೋರಲಿಂಗಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಗ್ಯಾರಂಟಿ ಯೋಜನೆಗಳ ಬನವಾಸೆ ರಂಗಸ್ವಾಮಿ, ಗೊರೂರು ರಂಜಿತ್, ಅಖಿಲ ವೀರಶೈವ ಲಿಂಗಾಯಿತ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಉಪಸ್ಥಿತರಿದ್ದರು.* ಬಾಕ್ಸ್‌: ಬಾಗಿಲು ತೆಗೆದ ವೇಳೆ ದೀಪ ಉರಿಯುತ್ತಿತ್ತು

ಶ್ರೀ ಆದಿಚುಂಚನಗಿರಿ ಮಹಾಮಠದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲಾಗಿದ್ದು, ದೇವರಲ್ಲಿ ಶಕ್ತಿ ಇದ್ದು, ವೀಕ್ಷಣೆ ಮಾಡಿದಾಗ ಬಾಗಿಲು ತೆಗೆದ ವೇಳೆ ದೀಪ ಉರಿಯುತ್ತಿತ್ತು. ಸರ್ವರಿಗೂ ದೇವಿ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಕಳೆದ ವರ್ಷಕ್ಕಿಂತ ಈ ವರ್ಷ ಅಚ್ಚುಕಟ್ಟಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಒಳಗೊಂಡಂತೆ ಎಲ್ಲರೂ ಕೂಡ ಶ್ರಮವಹಿಸಿದ್ದಾರೆ ಎಂದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ