ಹವ್ಯಕ ವಾರ್ಷಿಕ ವಿಶೇಷ ಪ್ರಶಸ್ತಿ ಪಟ್ಟಿ ಪ್ರಕಟ

KannadaprabhaNewsNetwork |  
Published : Mar 27, 2026, 01:45 AM IST
Havyaka

ಸಾರಾಂಶ

ಅಖಿಲ ಹವ್ಯಕ ಮಹಾಸಭೆ ನೀಡುವ 2025-26 ನೇ ಸಾಲಿನ ವಾರ್ಷಿಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮಾ.29 ರಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆಯುವ 83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

  ಬೆಂಗಳೂರು:  ಅಖಿಲ ಹವ್ಯಕ ಮಹಾಸಭೆ ನೀಡುವ 2025-26 ನೇ ಸಾಲಿನ ವಾರ್ಷಿಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮಾ.29 ರಂದು ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆಯುವ 83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಹವ್ಯಕ ವಿಶೇಷ ಪ್ರಶಸ್ತಿ 2025-26:  

ಹವ್ಯಕ ವಿಭೂಷಣ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ( ತಾಳಮದ್ದಳೆ ಅರ್ಥದಾರಿಗಳು, ಸಾಹಿತಿಗಳು), ಎಸ್. ಶಂಭು ಭಟ್ ಕಡತೋಕ (ಶಿಕ್ಷಣ ತಜ್ಞರು, ಸಾಂಸ್ಕೃತಿಕ ರಾಯಭಾರಿ), ಹವ್ಯಕ ಭೂಷಣ: ನೀರ್ನಳ್ಳಿ ಗಣಪತಿ (ಚಿತ್ರ ಕಲಾವಿದರು), ಡಾ. ವೈ. ವಿ. ಕೃಷ್ಣಮೂರ್ತಿ (ಪಶು ತಜ್ಞರು,ದೇಶಿ ಗೋವು ಸಂವರ್ಧಕರು), ಉಮೇಶ ಬಂದಗದ್ದೆ (ಉದ್ಯಮಿಗಳು, ಶಿಕ್ಷಣ ಪೋಷಕರು), ಹವ್ಯಕ ಶ್ರೀ: ಪೂರ್ಣಿಮಾ ಕೆ. ಭಟ್ (ಕಸೂತಿ ಉದ್ಯಮ), ವೇ.ಮೂ.ಸುಚೇತನ ಭಟ್ (ಯಜುರ್ವೇದ ಘನಪಾಠಿಗಳು), ಆನಂದ ಹೆಗಡೆ ಶೀಗೇಹಳ್ಳಿ, (ಸಮಾಜ ಸೇವೆ), ಪ್ರತ್ಯೂಷ ಕುಮಾರ್ (ಯುವ ಕ್ರಿಕೆಟ್ ಪ್ರತಿಭೆ).

ಹವ್ಯಕ ಸೇವಾಶ್ರೀ:

 ಡಾ.ಬಿ.ವಿ. ನರಹರಿ ರಾವ್ (ಹಿರಿಯ ಸಂಚಾಲಕರು), ಬೋನಂತಾಯ ಶಿವಶಂಕರ ಭಟ್ (ಹಿರಿಯ ನಿರ್ದೇಶಕರು), ಕೃಷ್ಣಮೂರ್ತಿ ಹೆಗಡೆ ತ್ಯಾಗಲಿ (ಸಂಚಾಲಕ - ಹವ್ಯಕ ವಧೂ-ವರ ವೇದಿಕೆ) ಆಯ್ಕೆಯಾಗಿದ್ದಾರೆ.

ಸಮಾಜದ ಅರ್ಹ ಸಾಧಕರನ್ನು ಗುರುತಿಸಿ, ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರು ಪ್ರಶಸ್ತಿಗೆ ಹೆಸರನ್ನು ಸೂಚಿಸಬಹುದಾಗಿದೆ. ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಸಂದರ್ಭ ವಿಶೇಷ ಸಾಧನೆಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ''''''''ಪಲ್ಲವ'''''''' ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹ ನೀಡಲಾಗುವುದು.''''''''ಹವ್ಯಕ'''''''' ವಜ್ರಮಹೋತ್ಸವಕ್ಕೆ ವಿಶೇಷ ಸಂಚಿಕೆ: ಹವ್ಯಕ ಮಹಾಸಭೆಯ ಮುಖವಾಣಿ ''''''''ಹವ್ಯಕ'''''''' ಪತ್ರಿಕೆಯು 1966 ಜೂನ್ ತಿಂಗಳಿನಲ್ಲಿ ಆರಂಭವಾಗಿದ್ದು, ನಿರಂತರವಾಗಿ 60 ವರ್ಷಗಳಿಂದ ಪ್ರಕಾಶಿತವಾಗುತ್ತಿದೆ. ಪ್ರತಿ ತಿಂಗಳು ಸುಮಾರು 30,000 ಕುಟುಂಬಗಳನ್ನು ತಲುಪುತ್ತಿದ್ದು, ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಪತ್ರಿಕೆಯ ವಜ್ರಮಹೋತ್ಸವದ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಹೊರ ತರಲಾಗುತ್ತಿದ್ದು, ಭಾನುವಾರ ಸಂಚಿಕೆಯ ಲೋಕಾರ್ಪಣೆ ಹಾಗೂ ಪತ್ರಿಕೆಯಲ್ಲಿ ಸಂಪಾದಕರು ಹಾಗೂ ಸಂಚಾಲಕರಾಗಿ ಸೇವೆ ಸಲ್ಲಿಸಿದವರಿಗೆ ಇದೇ ಸಂದರ್ಭದಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೂರು ಮಕ್ಕಳನ್ನು ಹೆತ್ತವರಿಗೆ ಸನ್ಮಾನ: ರಾಘವೇಶ್ವರ ಶ್ರೀ
ತೈಲ ಸುಂಕ ವಿನಾಯ್ತಿ ಚುನಾವಣಾ ಗಿಮಿಕ್‌: ಕಾಂಗ್ರೆಸ್‌