ರೈತ ಸಂಘದ ಬಗ್ಗೆ ಮಾತಾಡೋಕ್ಕೆ ಎಚ್ಡಿಕೆಗೆ ನೈತಿಕತೆ ಇಲ್ಲ: ಎ.ಎಲ್.ಕೆಂಪೂಗೌಡ

KannadaprabhaNewsNetwork |  
Published : Aug 27, 2026, 02:00 AM IST
26ಕೆಎಂಎನ್ ಡಿ11 | Kannada Prabha

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳೋದನ್ನು ಕರಗತ ಮಾಡಿಕೊಂಡಿದ್ದಾರೆ. 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ಅನುದಾನ ಕೊಟ್ಟರು. ಆ ಅನುದಾನವನ್ನು ಯಾವ ಗುಂಡಿಯಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಹುಡುಕಾಟ ಮಾಡುತ್ತಿದ್ದೇವೆ ಇಲ್ಲಿಯವರೆಗೂ ಅದು ಸಿಕ್ಕಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತಸಂಘ, ಹಸಿರು ಟವಲ್ ಬಗ್ಗೆ ಮಾತನಾಡುವ ನೈತಿಕತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗಿಲ್ಲ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಕ್ರೋಶ ಹೊರಹಾಕಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರು ಹಾಗೂ ರೈತಸಂಘದ ಹಸಿರು ಟವಲ್ ಬಗ್ಗೆ ಮಾತನಾಡಿದ್ದಾರೆ. ಹೋರಾಟ ಅಂತ ಬಂದಾಗ ಇವರು ಮತ್ತು ಕುಟುಂಬ ಸೂಟ್ ಕೇಸ್ ನಲ್ಲಿ ಹಸಿರು ಟವಲ್ ಇಟ್ಟುಕೊಂಡು ಬಂದು ಹೆಗಲ ಮೇಲೆ ಹಾಕೊಂಡು ಹೋರಾಟ ಮಾಡ್ತಾರೆ ಎಂದು ಕಿಡಿಕಾರಿದರು.

ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳೋದನ್ನು ಕರಗತ ಮಾಡಿಕೊಂಡಿದ್ದಾರೆ. 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ಅನುದಾನ ಕೊಟ್ಟರು. ಆ ಅನುದಾನವನ್ನು ಯಾವ ಗುಂಡಿಯಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಹುಡುಕಾಟ ಮಾಡುತ್ತಿದ್ದೇವೆ ಇಲ್ಲಿಯವರೆಗೂ ಅದು ಸಿಕ್ಕಿಲ್ಲ ಎಂದು ಟೀಕಿಸಿದರು.

ಕಾವೇರಿ ವಿಚಾರದಲ್ಲಿ ಒಮ್ಮೆಯೋ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. ಇವರು ಮುಖ್ಯಮಂತ್ರಿಯಾಗಿದ್ದಾಗ ಕಬ್ಬಿನ ಬೆಲೆ ಏರಿಕೆ ಮಾಡುವಂತೆ ರೈತರು ಮನವಿಕೊಟ್ಟರೆ 1200 ರು. ಇದ್ದ ಕಬ್ಬಿನ ಬೆಲೆಯನ್ನು 800ಕ್ಕೆ ಇಳಿಕೆ ಮಾಡಿದರು. ರೈತರ ಬಗ್ಗೆ ಕಾಳಜಿ ಇಲ್ಲವಾದರೂ ಇವರನ್ನು ಮಣ್ಣಿನ ಮಕ್ಕಳು ಎಂದು ಕರೆಯುತ್ತಾರೆ ಎಂದು ಟೀಕಿಸಿದರು.

ಬಳಘಟ್ಟ ಏತನೀರಾವರಿ ಯೋಜನೆಯೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕಾಲದಲ್ಲಿಯೇ ಆಗಿದರೋದು. ಇದಕ್ಕೆ 190 ಕೋಟಿ ಅನುದಾನದಲ್ಲಿ ಯೋಜನೆ ಆಗಿದೆ. ಆದರೆ, 300 ಕೋಟಿ ಎಂಬುದಾಗಿ ಮಾಜಿ ಶಾಸಕರು ಸುಳ್ಳು ಹೇಳುತ್ತಿದ್ದಾರೆ. ಅಲ್ಲದೇ, ಯೋಜನೆ ಮೂಲಕ ನೀರೆತ್ತುವ ಕಾರ್ಯ ಸ್ಥಗಿತಗೊಂಡಿಲ್ಲ. ಆದರೂ ಮಾಜಿ ಸಚಿವರು ಒಂದು ವರ್ಷದಿಂದ ನೀರು ತುಂಬಿಸುವ ಯೋಜನೆ ಸ್ಥಗಿತಗೊಂಡಿದೆ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ. ಇವರು ಸಚಿವರಾದಾಗ ರಾಜಕೀಯದಲ್ಲಿ ಸೋಲು-ಗೆಲುವು ಟೀಕೆಗಳು ಸಾಮಾನ್ಯ. ಆದರೆ, ಆರೋಗ್ಯಕರ ಟೀಕೆ ಮಾಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತಸಂಘ ತಾಲೂಕು ಮಂಜುನಾಥ್, ಉಪಾಧ್ಯಕ್ಷ ರಘು, ಹರವು ಪ್ರಕಾಶ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ದೊಡ್ಡಿಘಟ್ಟ ಸುರೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸಾರ್ವಜನಿಕ ಚರ್ಚೆಗೆ ಸಿದ್ಧ
ಸಹಕಾರ ಸಂಘಕ್ಕೆ ಸದಸ್ಯರ ಬೆಂಬಲ ಅಗತ್ಯ: ಸಚಿವ ಚಲುವರಾಯಸ್ವಾಮಿ