ಹರಿಹರ-ಶಿವಮೊಗ್ಗ ರಸ್ತೆ ತುಂಬೆಲ್ಲಾ ಗುಂಡಿಗಳ ದರ್ಬಾರು!

KannadaprabhaNewsNetwork |  
Published : May 19, 2024, 01:53 AM IST
ಹೊನ್ನಾಳಿಫೋಟೋ 18ಎಚ್.ಎಲ್.ಐ2. ಹರಿಹರ - ಶಿವಮೊಗ್ಗ ರಾಜ್ಯ ಹೆದ್ದಾರಿ  ರಸ್ತೆ  ಹೊನ್ನಾಳಿ ಸಮೀಪದ ಮಾಸಡಿ, ಅನೇಕ ಗ್ರಾಮಗಳ ಪಕ್ಕದಲ್ಲಿ ಹಾದು ಹೋಗಿದ್ದು ಈ ರಸ್ತೆಯಲ್ಲಿ ಅನೇಕ ಗುಂಡಿಗಳಿಂದಾಗಿ ರಸ್ತೆ ಸಂಚಾರ  ತೀವ್ರ ತೊಂದರೆಯಾಗುತ್ತಿದೆ           | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿಯ ಹರಿಹರ-ಶಿವಮೊಗ್ಗ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದೆ. ರಸ್ತೆ ವಿಪರೀತ ಹಾಳಾಗಿದ್ದರೂ ದುರಸ್ತಿಪಡಿಸದೇ, ಜಿಲ್ಲಾಡಳಿತ ಮತ್ತು ಜನಪ್ರತಿನಿದಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

- ಹೊನ್ನಾಳಿ ತಾಲೂಕು ಮಾಸಡಿ ಮಾರ್ಗವಾಗಿ ಸಾಗುವ ಚಾಲಕರಿಗೆ ತಪ್ಪದ ಕಿರಿಕಿರಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಮಾಸಡಿ ಗ್ರಾಮದ ಬಳಿಯ ಹರಿಹರ-ಶಿವಮೊಗ್ಗ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದೆ. ರಸ್ತೆ ವಿಪರೀತ ಹಾಳಾಗಿದ್ದರೂ ದುರಸ್ತಿಪಡಿಸದೇ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಜಿಲ್ಲಾ ಹಂತದ ಅಧಿಕಾರಿಗಳು, ಜನಪ್ರತಿನಿಧಿಗಳು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ, ಅವ್ಯವಸ್ಥೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಮಾಸಡಿ ಬಳಿವಿರುವ ಹರಿಹರ ಮತ್ತು ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಒಂದು ಅಡಿಯಷ್ಟು ಆಳದ ಗುಂಡಿಗಳು ಸೃಷ್ಟಿಯಾಗಿವೆ. ಇಂಥ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ನೂರಾರು ವಾಹನಗಳಿಗೆ ಕಿರಿಕಿರಿ ಮಾತ್ರ ತಪ್ಪುತ್ತಿಲ್ಲ.

ಹೊನ್ನಾಳಿಯಿಂದ ಹರಿಹರಕ್ಕೆ ಹೋಗುವ ಬಲಭಾಗದ ರಸ್ತೆ ಹರಿಹರದಿಂದ ಹೊನ್ನಾಳಿಗೆ ಬರುವಾಗ ಎಡಭಾಗದ ರಸ್ತೆ ಉದ್ದಕ್ಕೂ ಗುಂಡಿಗಳು ಅಸಂಖ್ಯವಾಗಿವೆ. ಈ ಹೊಂಡ-ಗುಂಡಿಗಳಿಂದಾಗಿ ಆಗಾಗ ವಾಹನ ಚಾಲಕರು, ಪಾದಾಚಾರಿಗಳು ಒಂದಿಲ್ಲೊಂದಿ ಸಮಸ್ಯೆ ಎದುರಿಸುತ್ತಿದ್ದಾರೆ. ಗುಂಡಿಗಳ ತಪ್ಪಿಸ ವ ಭರದಲ್ಲಿ ವಾಹನ ಚಾಲಕರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಆಪಘಾತಕ್ಕೀಡಾದ ಉದಾಹರಣೆಗಳು ಸಾಕಷ್ಟಿವೆ.

ಇನ್ನು ರಾತ್ರಿವೇಳೆ, ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸುಖಕರ ಪ್ರಯಾಣ ಅಸಾಧ್ಯವೇ ಸರಿ. ದ್ವಿಚಕ್ರ ವಾಹನಗಳ ಸವಾರರು ಗುಂಡಿ ಕಾಣದೇ, ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಗುಂಡಿಗೆ ಇಳಿಯುವ ವಾಹನಗಳ ಚಕ್ರಗಳ ಟೈರ್‌-ಟ್ಯೂಬ್‌ಗಳು ಪಂಚರ್ ಸಮಸ್ಯೆ ಎದುರಿಸುವ ಘಟನೆಗಳೂ ನಡೆಯುತ್ತಿವೆ.

ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಹಿನ್ನೆಲೆ ಸಂಬಂಧಿಸಿದ ಇಲಾಖೆಗಳ ಮೇಲಾಧಿಕಾರಿಗಳು, ಜನಪ್ರತಿನಿಧಗಿಳು ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಸುವ ಕಾಮಗಾರಿಗೆ ಮುಂದಾಗುವ ಅನಿವಾರ್ಯತೆ ಹೆಚ್ಚಿದೆ. ಗ್ರಾಮಸ್ಥರು, ಪ್ರಯಾಣಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತವೂ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಲಿ ಎಂಬುದು ಮಾಸಡಿ ಮತ್ತಿತರ ಗ್ರಾಮಗಳ ಗ್ರಾಮಸ್ಥರ ಒತ್ತಾಯವಾಗಿದೆ.

- - - -18ಎಚ್.ಎಲ್.ಐ2:

ಹೊನ್ನಾಳಿ ಸಮೀಪದ ಮಾಸಡಿ ಬಳಿ ಹರಿಹರ- ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ ಅವ್ಯವಸ್ಥೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''