ಕನ್ನಡಪ್ರಭ ವಾರ್ತೆ ಮುಧೋಳ
ರೈತರು ತೊಡುವ ಹಸಿರು ಶಾಲು ರಮೇಶ ಗಡನ್ನವರ ಅವರ ಹೋರಾಟ ಹಾಗೂ ರೈತರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನಗರದ ಎ.ಪಿ.ಎಂ.ಸಿ ಮುಂಭಾಗದಲ್ಲಿರುವ ತಾಲೂಕು ಪಂಚಾಯತಿ ಜಾಗದಲ್ಲಿ ರಮೇಶ ಗಡದನ್ನವರ ಪುತ್ಥಳಿ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿ, ರಮೇಶ ಗಡದನ್ನವರ ಹೋರಾಟ ಮುಂದಿನ ಪೀಳಿಗೆಗೆ ಮಾದರಿಯಾಗಲಿ, ಅವರ ಪುತ್ಥಳಿ ನಿರ್ಮಿಸಲಿಕ್ಕೆ ಈ ಹಿಂದೆ ವಿಧಾನ ಪರಿಷತ್ ಸದಸ್ಯನಾಗಿ ಸಕ್ಕರೆ ಸಚಿವರಾಗಿದ್ದಾಲೇ ರೈತ ನಾಯಕನ ಹೆಸರು ಅಜರಾಮರವಾಗಿ ಸೂರ್ಯ-ಚಂದ್ರ ಇರುವರೆಗೆ ಗಡದನ್ನವರ ಹೋರಾಟದ ಜೀವನ ಎಲ್ಲರಿಗೂ ಪ್ರೇರಣೆಯಾಗಿರಲಿ ಎಂದು ತೀರ್ಮಾನಿಸಿದೆ. ಗಡದನ್ನವರ ಪುತ್ಥಳಿ ನಿರ್ಮಾಣಕ್ಕೆ ತಗಲುವ ಖರ್ಚು-ವೆಚ್ಚಕ್ಕೆ ತಾವು ಸ್ವಂತ ಹಣ ನೀಡಿವುದಾಗಿ ವಾಗ್ದಾನ ಮಾಡಿದ್ದೆ. ಇಂದು ಈ ಪುತ್ಥಳಿ ನಿರ್ಮಾಣ ಅಂತಿಮ ಹಂತದಲ್ಲಿದೆ. ರಮೇಶ ಗಡದನ್ನವರ ಇಂದು ನಮ್ಮೊಂದಿಗಿಲ್ಲದಿದ್ದರೂ ರೈತರ ಹೋರಾಟಕ್ಕೆ ಅವರು ಚೇತನ ಪ್ರೇರಕ ಶಕ್ತಿಯಾಗಿದ್ದಾರೆ. ರಾಜ್ಯದ ರೈತ ಚಳವಳಿಗೆ ರಮೇಶ ಗಡದನ್ನವರ ಕೊಡುಗೆಗಳ ಮಹತ್ವ ಸಾರುತ್ತಿವೆ ಎಂದು ಬಣ್ಣಿಸಿದರು.
ರಮೇಶ ಗಡದನ್ನವರ ಅವರು ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರದಲ್ಲೂ ರೈತ ಹೋರಾಟಗಾರರಾಗಿದ್ದರು. ಅವರ ಹೋರಾಟದ ಮಾತುಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಮತ್ತು ಅವರ ಹೆಸರು ರೈತರ ಹೋರಾಟಗಳ ಶಕ್ತಿಗೆ ಸಮಾನಾರ್ಥಕವಾಗಿದೆ. ವಿವಿಧ ಜಿಲ್ಲೆಗಳಿಂದ ರೈತ ಮುಖಂಡರು ಜಮಾಯಿಸಿ ಅವರ ತತ್ವಾದರ್ಶ, ಮಾರ್ಗದರ್ಶನ, ನೆನಪುಗಳನ್ನು ಅವರ ಒಡನಾಡಿಯಾಗಿದ್ದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಕಾಶ ವಸ್ತ್ರದರವರು ಮೆಲುಕು ಹಾಕಿದರು.ರೈತ ಹೋರಾಟಗಾರ ಹಣಮಂತ ನಬಾಬ ಮಾತನಾಡಿ, ರಮೇಶ ಗಡದ್ದನ್ನವರ ಪ್ರಭಾವವು ಅವರ ಜೀವಿತಾವಧಿಯನ್ನು ಮೀರಿ ವಿಸ್ತರಿಸಿದೆ. ನಡೆಯುತ್ತಿರುವ ರೈತರ ಹೋರಾಟದ ಹಿಂದಿನ ಶಕ್ತಿಯಾಗಿ ಉಳಿದಿದೆ. ಅವರ ಹೋರಾಟದ ಪರಂಪರೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿದೆ. ಅವರ ಕೊಡುಗೆಗಳನ್ನು ಸ್ಮರಿಸಲು, ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಅದರ ಎಲ್ಲ ಕರ್ಚು-ವೆಚ್ಚವನ್ನು ಸಚಿವ ಆರ್.ಬಿ.ತಿಮ್ಮಾಪೂರರವರು ವೈಯಕ್ತಿಕವಾಗಿ ಭಾರಣ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಮೂರ್ತಿಯನ್ನು ಸಚಿವರು ಖುದ್ದಾಗಿ ನೋಡಲು ಸಹ ನಮ್ಮೊಂದಿಗೆ ಬಂದಿದ್ದರು. ರೈತರ ಮೇಲೆ ಕಾಳಜಿ ಮತ್ತು ಹೋರಾಟಗಾರರ ಮೇಲೆ ನಂಬಿಕೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ಡಾ.ವಿ.ಎನ್.ನಾಯಕ, ಐ.ಎಚ್.ಅಂಬಿ, ಬಸವಂತ ಕಾಂಬಳೆ, ನಾಗೇಶ ಗೊಲಶೆಟ್ಟಿ, ಸುನಂದಾ ತೇಲಿ, ಮೈಬುಸಾಬ್ ಭಾಗವಾನ, ಶಿರೋಳದ ಶಂಕರಾರೂಢ ಸ್ವಾಮೀಜಿ, ರತ್ನಕುಮಾರ ಅಡಾಲಟ್ಟಿ, ದುಂಡಪ್ಪ ಯರಗಟ್ಟಿ, ಕಲ್ಮೇಶ ಹನಗುಜಿ, ಸುಭಾಷ್ ಶಿರಗೂರ, ಚೆನ್ನಪ್ಪ ಪೂಜಾರಿ, ಈರಪ್ಪ ಹಂಚಿನಾಳ, ವೆಂಕಣ್ಣ ಮಳಲಿ, ಎ.ಜಿ.ಪಾಟೀಲ, ದುಂಡಪ್ಪ ಲಿಂಗರೆಡ್ಡಿ, ನಾಗೇಶ ಪೂಜಾರಿ ಸೇರಿದಂತೆ ಹಲವಾರು ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು.