1 ಲಕ್ಷ ಮತಗಳ ಅಂತರದಿಂದ ಗೆಲ್ಲುವೆ

KannadaprabhaNewsNetwork | Published : May 8, 2024 1:02 AM

ಸಾರಾಂಶ

ಕನ್ನಡಪ್ರಭ ವಾರ್ತೆ ಯಮಕನಮರಡಿ: ಚಿಕ್ಕೋಡಿ ಮತಕ್ಷೇತ್ರ ವ್ಯಾಪ್ತಿಯ ಹಳೆ ವಂಟಮೂರಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-95 ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಸರತಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಚಿಕ್ಕೋಡಿ ಮತಕ್ಷೇತ್ರ ವ್ಯಾಪ್ತಿಯ ಹಳೆ ವಂಟಮೂರಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ-95 ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಸರತಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕೋಡಿ ಲೋಕಸಭೆಯ 8 ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. 8 ಕ್ಷೇತ್ರಗಳಲ್ಲಿ ಮತದಾನ ಇರುವುದರಿಂದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಣೆ ಮಾಡುವುದಾಗಿ ತಿಳಿಸಿದರು.

ಪಕ್ಷೇತರ ಅಭ್ಯರ್ಥಿಯಿಂದ ಕಾಂಗ್ರೆಸ್‌ಗೆ ಮತಗಳು ವಿಭಜನೆಯಾಗುವ ಸಾಧ್ಯತೆ ಪ್ರತಿಕ್ರಿಯಿಸಿ, ಪಕ್ಷೇತರ ಅಭ್ಯರ್ಥಿಯಿಂದ ನನಗೆ ಯಾವ ಹಾನಿಯೂ ಇಲ್ಲ. ಚಿಕ್ಕೋಡಿ ಮತಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನ ನನ್ನನ್ನೂ ಮನೆ ಮಗಳಂತೆ ನೋಡಿಕೊಂಡು ನನ್ನ ಗೆಲುವುಗಾಗಿ ಶ್ರಮಿಸಿ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.

ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಸಚಿವರು, ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಶಾಸಕರು, ರಾಜ್ಯದ ನಾಯಕರು, ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವ ಮೂಲಕ ನನ್ನ ಪರವಾಗಿ ಮತಯಾಚಿಸಿದ್ದಾರೆ, ಕಾರ್ಯಕರ್ತರು ಸೇರಿದಂತೆ 8 ಕ್ಷೇತ್ರದ ಜನ ನನಗೆ ನೀಡಿರುವ ಬೆಂಬಲ ಪ್ರೀತಿ, ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಿರಣಸಿಂಗ ರಜಪೂತ, ಈರಣ್ಣ ಬಿಸಿರೊಟ್ಟಿ, ರವಿಂದ್ರ ಜಿಂಡ್ರಾಳಿ, ಮಹಾಂತೇಶ ಮಗದುಮ್ಮ, ಶೌಕತ್‌ ಖಾಜಿ, ಅಸ್ಲಂ ಪಕಾಲಿ, ರಾಜೇಸಾಬ ಫಣಿಬಂದ, ಅಭಿಜಿತ ಪಾಟೀಲ, ಸಿದ್ದಪ್ಪ ಶಿಳ್ಳಿ, ಉಮೇಶ ಅವಲಕ್ಕಿ, ಗಿರೀಶ ಮಿಶ್ರಕೋಟಿ ಮುಂತಾದವರು ಉಪಸ್ಥಿತರಿದ್ದರು.

------------------------------------ಕೋಟ್...

ನಾನು ಪ್ರಚಾರಕ್ಕೆ ತೆರಳಿದಾಗ ನನ್ನನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಮತದಾರರು ಬಿರು ಬಿಸಿಲಿನಲ್ಲೂ ಸರತಿ ಸಾಲುಗಳಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ.

-ಪ್ರಿಯಾಂಕಾ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ.

Share this article