ಆತ್ಮಹತ್ಯೆ ಭೀಕರತೆಗೆ ಬೇರ್ಪಟ್ಟ ರುಂಡ

KannadaprabhaNewsNetwork |  
Published : Feb 09, 2026, 03:00 AM IST
ಬೆಳಗಾವಿ | Kannada Prabha

ಸಾರಾಂಶ

ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತೀವ್ರತೆಗೆ ರುಂಡವೇ ದೇಹದಿಂದ ಬೇರ್ಪಟ್ಟ ಭೀಕರ ಘಟನೆ ಇಲ್ಲಿನ ಅಂಬಾಗಿಲು ವಾರ್ಡಿನ ಕಕ್ಕುಂಜೆ ಎಂಬಲ್ಲಿ ನಡೆದಿದೆ. ಪುರುಷೋತ್ತಮ ನಾಯಕ್ (52) ಮೃತರು.

ಉಡುಪಿ: ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತೀವ್ರತೆಗೆ ರುಂಡವೇ ದೇಹದಿಂದ ಬೇರ್ಪಟ್ಟ ಭೀಕರ ಘಟನೆ ಇಲ್ಲಿನ ಅಂಬಾಗಿಲು ವಾರ್ಡಿನ ಕಕ್ಕುಂಜೆ ಎಂಬಲ್ಲಿ ನಡೆದಿದೆ. ಪುರುಷೋತ್ತಮ ನಾಯಕ್ (52) ಮೃತರು.

ಅವರು ಶನಿವಾರ ತಡರಾತ್ರಿ ಮನೆಯ ಬಾವಿಯಿಂದ ನೀರು ಸೇದುವ ನೈಲಾನ್ ಹಗ್ಗದಿಂದ ನೇಣು ಬಿಗಿದು ಬಾವಿಯೊಳಗೆ ಹಾರಿದ್ದರು. ದಂಡೆಯ ಮೇಲಿನಿಂದ ಬಾವಿಯೊಳಗೆ ಹಾರಿದಾಗ ಹಗ್ಗ ಕುತ್ತಿಗೆಗೆ ಬಿಗಿದು, ಕುತ್ತಿಗೆಯೇ ತುಂಡಾಗಿ ರುಂಡ ಮುಂಡ ಬೇರ್ಪಟ್ಟು ಎರಡೂ ಬಾವಿಯೊಳಗೆ ಬಿದ್ದವು. ಇದರಿಂದ ಬಾವಿ ನೀರು ರಕ್ತದಿಂದ ಕಡುಕೆಂಪಾಗಿ ಭೀಕರವಾಗಿತ್ತು. ಇಲ್ಲಿನ ನಿವಾಸಿ ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರ ಪುರುಷೋತ್ತಮ ನಾಯಕ್, ಮಣಿಪಾಲದ ವ್ಯಾಲಿವ್ಯೂ ಹೊಟೇಲಿನಲ್ಲಿ ಅಸಿಸ್ಟೆಂಟ್ ಸೂಪರ್ವಿಶನ್ ಎಲೆಕ್ಟ್ರಿಶಿಯನ್ ಆಗಿದ್ದು, ನಿವೃತ್ತಿ ಹಂತದಲ್ಲಿದ್ದರು. ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ‌ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿದ್ದ ಅವರು, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಆರ್ಥಿಕ ಸಮಸ್ಯೆಯಲ್ಲಿದ್ದರು ಎಂದು ಸ್ಥಳೀಯರ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’