ಯುವತಿಯರಲ್ಲಿ ಆರೋಗ್ಯ ಕಾಳಜಿ ಅಗತ್ಯ: ಡಾ.ಇಂದಿರಾ

KannadaprabhaNewsNetwork |  
Published : May 28, 2024, 01:08 AM IST
ದೊಡ್ಡಬಳ್ಳಾಪುರದ ಶ್ರೀದೇವರಾಜ ಅರಸ್ ಕಾಲೇಜಿನಲ್ಲಿ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಡಾ.ಆರ್.ಇಂದಿರಾ ಚಾಲನೆ ನೀಡಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿನ ಹಲವು ಪ್ರಕರಣಗಳನ್ನು ಗಮನಿಸಿದಾಗ, ಯುವಜನರು ಖಿನ್ನತೆಯಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಸ್ಪೂರ್ತಿದಾಯಕ ಬದುಕು ರೂಢಿಸಿಕೊಳ್ಳಲು ನಿಯಮಿತ ಆಹಾರ, ನಿಯಮಿತ ಆರೋಗ್ಯ, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮತೋಲನವು ಜೀವನೋತ್ಸಾಹ ವೃದ್ಧಿಗೆ ಪೂರಕವಾಗಿದ್ದು, ಯುವತಿಯರಲ್ಲಿ ಆರೋಗ್ಯ ಕಾಳಜಿ ಅಗತ್ಯ ಎಂದು ಸ್ತ್ರೀರೋಗ ತಜ್ಞೆ ಡಾ.ಆರ್.ಇಂದಿರಾ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ-ಐಕ್ಯೂಎಸಿ ಸಹಯೋಗದಲ್ಲಿ ಸ್ಪೂರ್ತಿ ಮಹಿಳಾ ವೇದಿಕೆಯಿಂದ ನಡೆದ ಮಹಿಳಾ ದಿನಾಚರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿನ ಹಲವು ಪ್ರಕರಣಗಳನ್ನು ಗಮನಿಸಿದಾಗ, ಯುವಜನರು ಖಿನ್ನತೆಯಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಸ್ಪೂರ್ತಿದಾಯಕ ಬದುಕು ರೂಢಿಸಿಕೊಳ್ಳಲು ನಿಯಮಿತ ಆಹಾರ, ನಿಯಮಿತ ಆರೋಗ್ಯ, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದು ತಿಳಿಸಿದರು.

ವಯೋಸಹಜವಾಗಿ ನಡೆಯುವ ದೈಹಿಕ ಬದಲಾವಣೆಗಳ ಬಗ್ಗೆ ಅಗತ್ಯ ಜಾಗೃತಿ ಮುಖ್ಯ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಸ್ಪಷ್ಟತೆಯೂ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ಡಾ.ಆರ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಕೆ.ಆರ್.ರವಿಕಿರಣ್, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಮಹಿಳಾ ವೇದಿಕೆ ಸಂಯೋಜಕಿ ಉಷಾಶ್ರೀ, ಸಹ ಸಂಯೋಜಕಿ ಮಧುಶ್ರೀ, ವಿವಿಧ ವಿಭಾಗಗಳ ಪ್ರಮುಖರಾದ ಪಿ.ಚೈತ್ರ, ಎಚ್.ಕೆ.ಪ್ರೇಮ, ಎಸ್.ನಂದನ, ಸ್ವಾತಿ, ರಮ್ಯಶ್ರೀ, ಶ್ವೇತ, ಭಾನುಶ್ರೀ, ಸಂಧ್ಯಾ, ಕೀರ್ತನ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಿಗೆ ರ್‍ಯಾಂಪ್‌ವಾಕ್‌ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ