ಹೊಸಪೇಟೆ: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವುದರಿಂದ ಆರೋಗ್ಯ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಮಾಜ ಸೇವಕಿ ರಶ್ಮಿ ರಾಜಶೇಖರ ಹೇಳಿದರು.
ಡಿವೈಎಸ್ಪಿ ಡಾ.ಮಂಜುನಾಥ್ ತಳವಾರ ಮಾತನಾಡಿ, ವಾಲಿಬಾಲ್ ಆಟವನ್ನು ಕ್ರೀಡಾ ಮನೋಭಾವದಿಂದ ಆಡಬೇಕು. ವಾಲಿಬಾಲ್ ಟೂರ್ನಮೆಂಟ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮುಟ್ಟುವರೆಗೂ ಸೃಜನಾತ್ಮಕವಾಗಿ ಪ್ರದರ್ಶನ ನೀಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಬಸವರಾಜ್ ಎಮ್ಮಿಗನೂರು ಮಾತನಾಡಿ, ಕ್ರೀಡೆಯಿಂದ ಮಾನಸಿಕ, ದೈಹಿಕವಾಗಿ ಅಭಿವೃದ್ಧಿ ಹೊಂದಬಹುದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಎಂದರು.ಮಹಿಳಾ ಸ್ಪರ್ಧೆ ಫಲಿತಾಂಶ:
ನಗರದ ವಿಜಯನಗರ ಮಹಾವಿದ್ಯಾಲಯ ಮಹಿಳಾ ವಾಲಿಬಾಲ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರೆ, ನಗರದ ಮಾತಾ ಪದವಿ ಮಹಾವಿದ್ಯಾಲಯ ಎರಡನೇ ಮತ್ತು ಬಳ್ಳಾರಿಯ ವೀರೇಶ್ವ ಮಹಾವಿದ್ಯಾಲಯ ಮೂರನೇ ಸ್ಥಾನ ಗಳಿಸಿತು. ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಪುರುಷರ 19 ತಂಡಗಳು ಮತ್ತು ಮಹಿಳೆಯರ 7 ತಂಡಗಳು ಭಾಗವಹಿಸಿದ್ದವು.ವಿಎಸ್‌ಕೆ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ. ಶಶಿಧರ್ ಕೆಲ್ಲೂರ್, ಕಮಲಾಪುರ ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಸಿಂಗ್ , ಮುಖಂಡರಾದ ಓಬಯ್ಯ, ವೀರಭದ್ರ ಮತ್ತಿತರರಿದ್ದರು.
ಹೊಸಪೇಟೆಯ ಕಮಲಾಪುರದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ರಶ್ಮಿ ರಾಜಶೇಖರ, ಡಿವೈಎಸ್ಪಿ ಡಾ. ಮಂಜುನಾಥ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.