ಕನ್ನಡಪ್ರಭ ವಾರ್ತೆ ಶಹಾಬಾದ್
ನಗರದ ಬಾಲ ವಿದ್ಯಾ ಮಂದಿರ ಶಾಲೆಯ ಮೈದಾನದಲ್ಲಿ ಐದು ದಿನಗಳ ಕಾಲ ನಡೆಯುವ ಶಹಾಬಾದ ವಲಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಯೋಗ ಮತ್ತು ಕ್ರೀಡೆಯಿಂದ ಜೀವನದದಲ್ಲಿ ಸದೃಢ ವ್ಯಕ್ತಿಗಾಳಾಗಿ ಬೆಳೆಯಬಹುದು. ಜೀವನದಲ್ಲಿಯ ಉದ್ದೇಶ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಕಾಡ ಅಧ್ಯಕ್ಷರಾದ ಡಾ. ಎಂ.ಎ ರಶೀದ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ತುಂಬಾ ಅಗತ್ಯವಾಗಿದೆ. ದೈಹಿಕ ಮಾನಸಿಕವಾಗಿ ಅವರು ಸದೃಢರಾಗಲು ದೈಹಿಕ ಶಿಕ್ಷಣ ಅತ್ಯವಶ್ಯಕವಾಗಿ ಬೇಕು. ಆದರೆ ಸರ್ಕಾರ 17 ವರ್ಷದಿಂದ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದೆ ಇರುವುದು ನೋವಿನ ಸಂಗತಿ ಎಂದರು. ದೈಹಿಕ ಶಿಕ್ಷಕರು ಇಲ್ಲದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳು ಪಡೆಯುವುದು ಹೀಗೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು 29 ಶಾಲೆಯಿಂದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳ ತಂಡಗಳು ಮತ್ತು ಶಿಕ್ಷಕರು ಆಗಮಿಸಿದ್ದರು, ದೈಹಿಕ ಶಿಕ್ಷಕರಾದ ಬನ್ನಪ್ಪ ಸೈದಾಪುರ ಕಾರ್ಯಕ್ರಮವನ್ನು ನಿರ್ವಹಿಸಿದ್ದರು..ಕ್ರೀಡಾ ಪಟುಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿ, ಕ್ರೀಡಾಕೂಟ ಯಶಸ್ವಿ ಮಾಡಿಕೊಡಬೇಕು. ನಿರ್ಣಾಯಕರು ಹೇಳಿದ ತೀರ್ಪಿಗೆ ಬದ್ಧರಾಗಿ ಎಲ್ಲರೂ ಪ್ರತಿಯೊಬ್ಬರಿಗೆ ಸಹಕರಿಸಬೇಕು.