ರೋಗ ಬರುವ ಮುನ್ನವೇ ಜಾಗ್ರತೆ ವಹಿಸಿದಲ್ಲಿ ಆರೋಗ್ಯ ರಕ್ಷಣೆ ಸಾಧ್ಯ

KannadaprabhaNewsNetwork | Published : Apr 27, 2025 1:31 AM

ಸಾರಾಂಶ

ತಾಲೂಕಿನ ಹನಗವಾಡಿ ಗ್ರಾಮದ ಉಪ ಆರೋಗ್ಯ ಕೇಂದ್ರ ನೇತೃತ್ವದಲ್ಲಿ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಎಂಬ ಘೋಷಣೆಯೊಂದಿಗೆ ವಿಶ್ವ ಮಲೇರಿಯಾ ದಿನ ಆಚರಿಸಲಾಯಿತು.

- ವಿಶ್ವ ಮಲೇರಿಯಾ ದಿನ ಕಾರ್ಯಕ್ರಮದಲ್ಲಿ ಅಜ್ಮತ್‌ ಸಲಹೆ

- - -

ಹರಿಹರ: ತಾಲೂಕಿನ ಹನಗವಾಡಿ ಗ್ರಾಮದ ಉಪ ಆರೋಗ್ಯ ಕೇಂದ್ರ ನೇತೃತ್ವದಲ್ಲಿ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಎಂಬ ಘೋಷಣೆಯೊಂದಿಗೆ ವಿಶ್ವ ಮಲೇರಿಯಾ ದಿನ ಆಚರಿಸಲಾಯಿತು.

ಆರೋಗ್ಯ ನಿರೀಕ್ಷಣಾಧಿಕಾರಿ ಅಜ್ಮತ್ ಮಾತನಾಡಿ, ಈಗಾಗಲೇ ದಾವಣಗೆರೆಯನ್ನು ಮಲೇರಿಯಾಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಮಲೇರಿಯಾ ಅನಾಫಿಲಿಸ್ ಸೊಳ್ಳೆಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು, ರೋಗ ಬರದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಈ ಸೊಳ್ಳೆಗಳು ತತ್ತಿಗಳನ್ನು ಇಡುವ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳು ಹೆಚ್ಚಿದಷ್ಟು ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದರು.

ಮನೆಯ ಅಕ್ಕಪಕ್ಕದ ಚರಂಡಿಗಳು, ಗುಂಡಿಗಳು, ಖಾಲಿ ಚಿಪ್ಪು, ತಾರಸಿ ಮುಂತಾದ ಕಡೆಗಳಲ್ಲಿ ಮಳೆನೀರು ನಿಲ್ಲದಂತೆ ಎಚ್ಚರವಹಿಸುವುದು ಅಗತ್ಯ. ಮನೆಯ ಸ್ವಚ್ಛತೆಯೊಂದಿಗೆ ಸೊಳ್ಳೆ ನಿಯಂತ್ರಕ ಔಷಧಿ ಬಳಸಿ, ಮನೆಗಳಲ್ಲಿ ಬಳಸುವ ನೀರನ್ನು ನಿರಂತರವಾಗಿ ಮುಚ್ಚಿಡಿ. ಜ್ವರದ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು, ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ರೋಗಗಳು ಹತೋಟಿಯಲ್ಲಿ ಇಡಬಹುದು ಎಂದರು.

ಮಲೇರಿಯಾ ರೋಗ ತಡೆಗಟ್ಟುವಿಕೆ, ಸೊಳ್ಳೆ ನಿಯಂತ್ರಣ ಬಗ್ಗೆ ಆರೋಗ್ಯ ಶಿಕ್ಷಣ ಸೂತ್ರವನ್ನು ಗ್ರಾಮಸ್ಥರಿಗೆ ಮನದಟ್ಟು ಮಾಡಲಾಯಿತು.ಗ್ರಾಪಂ ಸದಸ್ಯರಾದ ಪ್ರವೀಣ್ ಆರ್.ಬಿ., ಪಿಡಿಒ ಪ್ರಭಾಕರ್, ಎಸ್.ಡಿ.ಎ ಶಿವಪ್ಪ, ಮುಖಂಡರಾದ ಶೇಖರಪ್ಪ, ಬಿ.ಕುಮಾರ್, ಆರ್.ಬಸವರಾಜ್, ಜಿ.ನಾಗರಾಜ್, ಎಂ.ನಾಗರಾಜ್, ಸಂದೀಪ್, ಜಿ.ಮಂಜುನಾಥ್, ಮಂಗಳಾ, ಭಾಗ್ಯ, ಲಕ್ಷ್ಮೀ, ಇಂದ್ರಮ್ಮ, ಸಾರ್ವಜನಿಕರು ಭಾಗವಹಿಸಿದ್ದರು.

- - -

-25ಎಚ್‍ಆರ್‍ಆರ್02:

ಹನಗವಾಡಿ ಉಪ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಎಂಬ ಘೋಷಣೆಯೊಂದಿಗೆ ವಿಶ್ವ ಮಲೇರಿಯಾ ದಿನ ಆಚರಿಸಲಾಯಿತು.

Share this article