ಒಂದೇ ದಿನ 40 ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ

KannadaprabhaNewsNetwork |  
Published : Nov 18, 2024, 12:05 AM IST
ಚಿತ್ರ :  17ಎಂಡಿಕೆ4 : ಉಡೋತ್ ಮೊಟ್ಟೆಯಲ್ಲಿಕಾವೇರಿ ಸ್ವಾಸ್ಥ್ಯ ಯಾತ್ರೆ - ಆರೋಗ್ಯ ಶಿಬಿರ ನಡೆಯಿತು.    | Kannada Prabha

ಸಾರಾಂಶ

ಉಡೋತ್‌ಮೊಟ್ಟೆ ಸೇರಿದಂತೆ ಒಂದೇ ದಿನ ಏಕಕಾಲದಲ್ಲಿ ಜಿಲ್ಲೆಯ 40 ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. 70ಕ್ಕೂ ಅಧಿಕ ಮಂದಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್ ಕೊಡಗು ಮತ್ತು ಸೇವಾ ಭಾರತಿ ಕೊಡಗು ಸಂಯುಕ್ತ ಆಶ್ರಯದಲ್ಲಿ ಉಡೋತ್ ಮೊಟ್ಟೆ ಸೇರಿದಂತೆ ಒಂದೇ ದಿನ ಏಕಕಾಲದಲ್ಲಿ ಜಿಲ್ಲೆಯ 40 ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಉಡೋತ್ ಮೊಟ್ಟೆ ಶ್ರೀ ಆದಿಶಕ್ತಿ ವಿನಾಯಕ ಸೇವಾ ಸಮಿತಿ ಸಹಕಾರದೊಂದಿಗೆ ನಡೆದ ಶಿಬಿರವನ್ನು ಶ್ರೀ ಆದಿಶಕ್ತಿ ದೇವಸ್ಥಾನ ಧರ್ಮದರ್ಶಿಗಳಾದ ಶ್ರೀ ಎಲ್ಯಣ್ಣ ಸ್ವಾಮಿ ಉದ್ಘಾಟಿಸಿದರು.

ಕಾವೇರಿ ಸ್ವಾಸ್ಥ್ಯ ಯಾತ್ರೆ ಆರೋಗ್ಯ ಶಿಬಿರದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಶ್ರೀ ಆದಿಶಕ್ತಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಚಂದ್ರ ಉಡೋತ್ ಮಾಹಿತಿ ನೀಡಿದರು.

ಕೊಡಗು ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ.ಮೋನಿಶ್, ಡಾ.ಲಾವಣ್ಯ ಉಪಸ್ಥಿತರಿದ್ದರು.

ಶ್ರೀ ಆದಿಶಕ್ತಿ ವಿನಾಯಕ ಸೇವಾ ಸಮಿತಿ ಕಾರ್ಯದರ್ಶಿ ಕೇಶಿನಿ ಸ್ವಾಗತಿಸಿ ವಂದಿಸಿದರು.

ಸಮಿತಿ ಪದಾಧಿಕಾರಿಗಳಾದ ದಿವ್ಯ ಮಂಜುನಾಥ್, ಸುಮಿತ ತಿರುಮಲ, ದಿನೇಶ್, ಗ್ರಾ ಪಂ ಸದಸ್ಯ ಗೋಪಾಲ್ ಹಾಗೂ ಇತರರು ಇದ್ದರು.

ಉಡೋತ್ ಮೊಟ್ಟೆ ಗ್ರಾಮದಲ್ಲಿ ನಡೆದ ಶಿಬಿರದಲ್ಲಿ ಸುಮಾರು 70 ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಔಷಧಿಯನ್ನು ವಿತರಿಸಲಾಯಿತು.

ಕೊಡಗು ಜಿಲ್ಲೆಯ ಮಡಿಕೇರಿ ನಗರದ ರಾಜರಾಜೇಶ್ವರಿ ನಗರ, ನಗರ ಸಭೆ, ಗ್ರಾಮಾಂತರ ತಾಲೂಕಿನ ಕಕ್ಕಬ್ಬೆ, ಮೇಕೇರಿ, ಮರಗೋಡು, ಬೂತನಕಾಡು, ವಾಲ್ನೂರು, ಬಸವನಹಳ್ಳಿ, ಅಂದಗೋವೆ, ಕಂಬಿಬಾಣೆ, ಚೌಡ್ಲು, ಬಜೆಗುಂಡಿ, ಅಯ್ಯಪ್ಪ ಕಾಲೋನಿ, ಮಾದಾಪುರ, ಶಾಂತಳ್ಳಿ, ಕೆಂಚಮ್ಮನಬಾಣೆ, ಕಳತ್ಮಾಡು, ಬೇಟೋಳಿ, ಚೆಂಬೆಬೆಳ್ಳೂರು, ಬಿಳುಗುಂದ, ಬಿಟ್ಟಂಗಾಲ, ಚೆನ್ನಯ್ಯನಕೋಟೆ, ಕಾಕೋಟುಪರಂಬು, ಆರ್ಜಿ ಪೆರುಂಬಾಡಿ, ಕೆದಮಳ್ಳೂರು, ಪೊನ್ನಂಪೇಟೆ, ಹಳ್ಳಿಗಟ್ಟು, ಕೈಕೇರಿ, ಅರ್ವತ್ತೋಕ್ಲು, ಕಾರ್ಮಾಡು ಸೇರಿದಂತೆ 40 ಕ್ಕೂ ಅಧಿಕ ಗ್ರಾಮಗಳಲ್ಲಿ ವೈದ್ಯಕೀಯ ಶಿಬಿರ ನಡೆದವು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ