ಆರೋಗ್ಯವಂತ ಮಕ್ಕಳ ಪ್ರದರ್ಶನ ಹಾಗೂ ಸ್ಪರ್ಧೆಗೆ ಚಾಲನೆ

KannadaprabhaNewsNetwork | Published : Dec 29, 2024 1:19 AM

ಸಾರಾಂಶ

ಇತ್ತೀಚೆಗೆ ಕಲುಷಿತ ಆಹಾರಕ್ಕೆ ಮಾರುಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದರಿಂದ ಹುಟ್ಟುವ ಮಕ್ಕಳ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಆದ್ದರಿಂದ ಮಹಿಳೆಯರು ಆರೋಗ್ಯವಾಗಿರಬೇಕು. ಪೌಷ್ಟಿಕ ಆಹಾರದ ಕಡೆಗೆ ಗಮನಹರಿಸಿ ಮಕ್ಕಳಿಗೆ ತಾಯಿ ಎದೆ ಹಾಲಿಗೆ ಮೊದಲ ಆದ್ಯತೆ ನೀಡಿ ಮಕ್ಕಳ ಪೋಷಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ನೇಹ ಮಹಿಳಾ ಮಂಡಳಿಯಿಂದ ತಾಲೂಕಿನ ಸಂತೆಕಸಲಗೆರೆಯ ಭೂಮಿ ಸಿದ್ದೇಶ್ವರ ಸಮುದಾಯ ಭವನದಲ್ಲಿ ಆರೋಗ್ಯವಂತ ಮಕ್ಕಳ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು.

ಮಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಕಲುಷಿತ ಆಹಾರಕ್ಕೆ ಮಾರುಹೋಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದರಿಂದ ಹುಟ್ಟುವ ಮಕ್ಕಳ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಆದ್ದರಿಂದ ಮಹಿಳೆಯರು ಆರೋಗ್ಯವಾಗಿರಬೇಕು. ಪೌಷ್ಟಿಕ ಆಹಾರದ ಕಡೆಗೆ ಗಮನಹರಿಸಿ ಮಕ್ಕಳಿಗೆ ತಾಯಿ ಎದೆ ಹಾಲಿಗೆ ಮೊದಲ ಆದ್ಯತೆ ನೀಡಿ ಮಕ್ಕಳ ಪೋಷಣೆ ಮಾಡಬೇಕು ಎಂದರು.

ಈ ವೇಳೆ ಆರೋಗ್ಯವಂತ ಮಕ್ಕಳಿಗೆ ಕ್ರಮಬದ್ಧವಾಗಿ 3 ತಿಂಗಳಿಂದ - ಒಂದು ವರ್ಷ, 1 ವರ್ಷದಿಂದ - 2 ವರ್ಷ, 2 ವರ್ಷದಿಂದ - 3 ವರ್ಷದ ಮಕ್ಕಳಿಗೆ ಸ್ಪರ್ಧೆ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನವಾಗಿ ಬೆಳ್ಳಿ ಬಟ್ಟಲು ನೀಡಿದರು.

ಕಾರ್ಯಕ್ರಮದಲ್ಲಿ ಸ್ನೇಹ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ಗಾಯತ್ರಿಗೌಡ, ಕಾರ್ಯದರ್ಶಿ ಉಮಭಾರತಿ, ಖಜಾಂಚಿ ರಮ್ಯಾರಾಣಿ, ಹಾಗೂ ಸದಸ್ಯರು, ಮಿಮ್ಸ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಸಾಮಾಜಿಕ ಲೆಕ್ಕ ಪರಿಶೋಧನ ಪ್ರಕ್ರಿಯೆ ಕುರಿತು ಪರಿಶೀಲನೆ

ಮಂಡ್ಯ: ರಾಜ್ಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ನಿರ್ದೇಶಕ ಶ್ರೀಧರ್ ತಾಲೂಕಿನ ಹೊಳಲು ಗ್ರಾಮಪಂಚಾಯಿತಿಗೆ ಸೋಮವಾರ ಭೇಟಿ ನೀಡಿ ಸಾಮಾಜಿಕ ಲೆಕ್ಕ ಪರಿಶೋಧನ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು.

ಮಹಾತ್ಮಗಾಂಧಿ ನರೇಗ ಯೋಜನೆ ಮತ್ತು 15 ನೇ ಹಣಕಾಸು ಯೋಜನೆಯಯಡಿ ಸರ್ಕಾರದಿಂದ ಬರುವ ಅನುದಾನವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಲುಪಬೇಕು. ಸಭೆಯಲ್ಲಿ ವಸೂಲಾತಿ ಆಕ್ಷೇಪಣೆ ತಿರುವಳಿ ಕಡ್ಡಾಯವಾಗಿ ಆಗಬೇಕು ಎಂದು ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾ ಕಾರ್ಯ ಕ್ರಮ ವ್ಯವಸ್ಥಾಪಕ ಎಸ್.ಸುರೇಶ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ರೂಪ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ ಮೂರ್ತಿ, ಶ್ಯಾಮಲಾ, ಮಾಯಿಗೌಡ, ವಿನೋದ್, ರಕ್ಷಿತಾ, ದರ್ಶಿನಿ, ಪಿಡಿಒ ಸಂತೋಷ್ ಕುಮಾರ್, ಅಧ್ಯಕ್ಷೆ ಅರ್ಪಿತ, ಸದಸ್ಯರು ಮತ್ತು ಸಿಬಂದಿಗಳು, ಸಾರ್ವಜನಿಕರು ಹಾಜರಿದ್ದರು.

Share this article