ಹನುಮಸಾಗರ: ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯವಾಗಿದೆ ಎಂದು ಸಮುದಾಯ ಆರೋಗ್ಯಾಧಿಕಾರಿ ಮಂಜುಳಾ ಇಲಾಳ ಹೇಳಿದರು.
ಮಹಿಳಯರು ಸಮತೋಲಿನ ಆಹಾರ ಸೇವನೆ ಮಾಡಬೇಕು.ತಾಜಾ ಹಣ್ಣು, ತರಕಾರಿ ಸೇವಿಸಬೇಕು. ಬಾಣಂತಿಯರು ಹುಟ್ಟಿದ ಮಗುವಿಗೆ ಬೇರೆ ಹಾಲನ್ನು ಕುಡಿಸದೇ ಎದೆ ಹಾಲನ್ನು ಉಣಿಸಬೇಕು. ಹೆಣ್ಣು ಮಕ್ಕಳಿಗೆ ಶಾಲೆ ಕಲಿಸಬೇಕು. ಬಾಲ್ಯ ವಿವಾಹ ಸರ್ಕಾರ ನಿಷೇಧಿಸಿದ್ದು, ಬಾಲ್ಯ ವಿವಾಹ ಮಾಡಬಾರದು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ ಶಾಸ್ತ್ರೀ, ಅಂಗನವಾಡಿ ಕಾರ್ಯಕರ್ತೆಯರಾದ ಗಂಗಮ್ಮ ರಾಟಿ, ಅನಿತಾ ಗೌಡರ, ಅಂಜನಾದೇವಿ ಹಿರೇಗೌಡರ, ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ ಹಿರೇಮಠ, ವಿಜಯಲಕ್ಷ್ಮೀ ಮೇಟಿ, ಸುಜಾತ ರಾಟಿ, ಯಲ್ಲಕ್ಕ ಪೊಲೀಸಪಾಟೀಲ್, ಗರ್ಭೀಣಿಯರು ಇತರರು ಇದ್ದರು.