ಹಗರಿಬೊಮ್ಮನಹಳ್ಳಿ: ದೇಹದಾರ್ಢ್ಯ ಸ್ಪರ್ಧಿಗಳು ಯುವ ಜನತೆಗೆ ಮಾದರಿಯಾಗಿದ್ದಾರೆ. ಆರೋಗ್ಯವಂತ ಯುವ ಜನತೆ ದೇಶದ ನೈಜ ಸಂಪತ್ತು ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಭೀಮನಾಯ್ಕ ತಿಳಿಸಿದರು.
ಪಟ್ಟಣದಲ್ಲಿ ರಾಕ್ ಪಿಟ್ನೆಸ್ ಸಂಸ್ಥೆಯಿಂದ ನಡೆದ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಸ್ಪರ್ಧೆಯನ್ನು ಆಯೋಜಿಸಿರುವ ಯುವ ಮುಖಂಡ ಇಂತಿಯಾಜ್ ಮಾದರಿ ಕಾರ್ಯ ಮಾಡಿದ್ದಾರೆ. ಶಿಕ್ಷಣ ಮತ್ತು ಕ್ರೀಡೆಯಲ್ಲಿ ಯುವಜನರ ಉತ್ತಮ ಸಾಧನೆಗೆ ಅಗತ್ಯ ನೆರವು ಒದಗಿಸಲಾಗುವುದು ಎಂದರು.ಆಯೋಜಕ ಬಿ.ಇಂತಿಯಾಜ್ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕ್ಕೆ ಆಧ್ಯತೆ ನೀಡಬೇಕು. ಆರೋಗ್ಯವಂತ ಯುವ ಮನಸ್ಸುಗಳು ದೇಶದ ಸಂಪತ್ತು. ಜಿಲ್ಲೆಯಲ್ಲಿನ ಹೆಚ್ಚಿನ ಪ್ರಮಾಣದ ದೇಹದಾರ್ಢ್ಯಪಟುಗಳು ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿರುವುದು ಪ್ರೇರಣೆಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಸದಸ್ಯ ಪವಾಡಿ ಹನುಮಂತಪ್ಪ ಮಾತನಾಡಿದರು. ಸಹಕಾರಿ ಸಂಘದ ಅಧ್ಯಕ್ಷ ದಾದಮ್ಮನವರ ಬಸವರಾಜ ಮುಖಂಡರಾದ ಡಿಶ್ ಮಂಜುನಾಥ, ಕಾಂಗ್ರೆಸ್ ಯುವ ಮಖಂಡ ಪೆಂಟರ್ ಬಾಬು, ಈ.ಭರತ್, ಜಿ.ಹನುಮಂತಪ್ಪ, ಸೆರೆಗಾರ ಹುಚ್ಚಪ್ಪ, ಗುರುಬಸವರಾಜ ಸೊನ್ನದ್, ತುರಾಯಿನಾಯ್ಕ, ಶಾಬುದ್ದೀನ್, ರಾಕ್ ಪಿಟ್ನೆಸ್‌ನ ಯುನಿಸ್‌ಖಾನ್, ಅಜರುದ್ದೀನ್, ಸಲೀಂ, ಗಂಗಾಧರ ಇದ್ದರು. ಬಿ.ಇಂತಿಯಾಜ್, ಹುಲ್ಮನಿ ಪೀರುಸಾಹೇಬ್, ಈ.ಭರತ್ ನಿರ್ವಹಿಸಿದರು.ವಿಜೇತರು:
ಸ್ಪರ್ಧೆಯಲ್ಲಿ ಮಿ.ರಾಕ್‌ಪಿಟ್ನೆಸ್ ಆಗಿ ದಾವಣಗೆರೆಯ ಜಯಪ್ರಕಾಶ್ ವಿಜೇತರಾಗಿ, ₹20 ಸಾವಿರ ಬಹುಮಾನ, ಆಕರ್ಷಕ ಟ್ರೋಫಿ ಗಳಿಸಿದರು. ಮಿ.ಮೋಸ್ಟ್ ಮಸ್ಕುಲರ್ ಆಗಿ ಹುಲಿಗಿಯ ರವಿಚಂದ್ರನ್ ವಿಜೇತರಾಗಿ ₹15 ಸಾವಿರ ಬಹುಮಾನ ಟ್ರೋಫಿ, ಮಿ.ಬೆಸ್ಟ್ ಪೋಸರ್ ಆಗಿ ದಾವಣಗೆರೆಯ ಭರತ್ ₹10 ಸಾವಿರ ಬಹುಮಾನ ಟ್ರೋಫಿ ಪಡೆದರು. ವಿಜಯನಗರ, ದಾವಣಗೆರೆ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳ ಒಟ್ಟು 18ಕ್ಕೂ ಹೆಚ್ಚು ದೇಹದಾರ್ಢ್ಯಪಟುಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.