ಮೋಟರ್ ಸೈಕಲ್ ರ್ಯಾಲಿಗೆ ಭಟ್ಕಳದಲ್ಲಿ ಹೃದಯಸ್ಪರ್ಶಿ ಸ್ವಾಗತ

KannadaprabhaNewsNetwork |  
Published : Oct 20, 2026, 01:45 AM IST
ಮೋಟಾರ್‌ಸೈಕಲ್ ರ‍್ಯಾಲಿಗೆ ಭಟ್ಕಳದಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. | Kannada Prabha

ಸಾರಾಂಶ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅ. 31ರಂದು ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಏಕತಾ ಪರೇಡ್‌ನಲ್ಲಿ ಪಾಲ್ಗೊಳ್ಳಲು ಈ ರ‍್ಯಾಲಿ ಸಂಚರಿಸುತ್ತಿದೆ.

ಭಟ್ಕಳ: ರಾಷ್ಟ್ರೀಯ ಏಕತೆ ಹಾಗೂ ಮಾದಕವಸ್ತು ಮುಕ್ತ ಭಾರತದ ಸಂದೇಶ ಸಾರುವ ಉದ್ದೇಶದಿಂದ ತ್ರಿಪುರಾದ ಅಗರ್ತಲಾದಿಂದ ಗುಜರಾತ್‌ನ ಏಕತಾ ನಗರಕ್ಕೆ ತೆರಳುತ್ತಿರುವ ರಾಷ್ಟ್ರೀಯ ಪೊಲೀಸ್ ಮೋಟಾರ್‌ ಸೈಕಲ್ ರ‍್ಯಾಲಿಗೆ ಭಟ್ಕಳದಲ್ಲಿ ಹೃದಯಸ್ಪರ್ಷಿ ಸ್ವಾಗತ ನೀಡಲಾಯಿತು.

ಭಟ್ಕಳ ಉಪವಿಭಾಗದ ಪೊಲೀಸ್ ಇಲಾಖೆಯ ವತಿಯಿಂದ ಸರ್ಪನಕಟ್ಟೆ ಪೊಲೀಸ್ ಚೆಕ್‌ಪೋಸ್ಟ್ ಬಳಿ ರ‍್ಯಾಲಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ವಿ. ಗಿರೀಶ್, ಸಿಪಿಐ ದಿವಾಕರ ಪಿ.ಎಂ. ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ ಉಪಸ್ಥಿತರಿದ್ದು, ರಾಷ್ಟ್ರೀಯ ಉದ್ದೇಶದೊಂದಿಗೆ ಸಾಗುತ್ತಿರುವ ಪೊಲೀಸ್ ತಂಡಕ್ಕೆ ಶುಭ ಹಾರೈಸಿದರು.

ಭಟ್ಕಳಕ್ಕೆ ಆಗಮಿಸಿದ ಬೈಕ್ ರ್ಯಾಲಿಗೆ ಸ್ಥಳೀಯ ಪೋಲಿಸರು ಈ ಬೈಕ್ ರ್ಯಾಲಿ ಜತೆ ಪಾಲ್ಗೊಂಡು ಮೂಡಭಟ್ಕಳ ಬೈಪಾಸ್ ಮೂಲಕ ಪಟ್ಟಣದ ನಗರ ಭಾಗ ಪ್ರವೇಶಿಸಿತು. ಬಳಿಕ ಶಂಸುದ್ದೀನ್ ಸರ್ಕಲ್ ಮೂಲಕ ಮುರ್ಡೇಶ್ವರ ಮಾರ್ಗವಾಗಿ ಗೋಕರ್ಣದತ್ತ ಪ್ರಯಾಣ ಮುಂದುವರಿಸಿತು.

ರಾಷ್ಟ್ರೀಯ ಮಟ್ಟದ ಜಾಗೃತಿ ಅಭಿಯಾನದ ಭಾಗವಾಗಿ ಭಟ್ಕಳದಲ್ಲಿ ರ‍್ಯಾಲಿಗೆ ಸ್ಥಳೀಯ ಪೊಲೀಸ್ ಇಲಾಖೆಯ ವತಿಯಿಂದ ನೀಡಿದ ಸ್ವಾಗತ ಕಾರ್ಯಕ್ರಮ ಗಮನ ಸೆಳೆಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅ. 31ರಂದು ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಏಕತಾ ಪರೇಡ್‌ನಲ್ಲಿ ಪಾಲ್ಗೊಳ್ಳಲು ಈ ರ‍್ಯಾಲಿ ಸಂಚರಿಸುತ್ತಿದೆ. ಅ. 8ರಂದು ತ್ರಿಪುರಾದ ಅಗರ್ತಲಾದ ಎ.ಡಿ. ನಗರ ಪೊಲೀಸ್ ಲೈನ್ಸ್‌ನ ಮನೋರಮಾ ದೇಬಬರ್ಮಾ ಸ್ಮಾರಕ ಕ್ರೀಡಾಂಗಣದಲ್ಲಿ ರ‍್ಯಾಲಿಗೆ ಚಾಲನೆ ನೀಡಲಾಗಿತ್ತು.

ಸುಮಾರು 2,800 ಕಿಮೀ ದೂರ ಕ್ರಮಿಸಲಿರುವ ಈ ರ‍್ಯಾಲಿಯು ಹಲವು ರಾಜ್ಯಗಳ ಮೂಲಕ ಸಾಗುತ್ತಿದ್ದು, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಪೊಲೀಸ್ ಸಂಘಟನೆಗಳ ತಂಡಗಳು ಭಾಗವಹಿಸುತ್ತಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಂತಿಯುತ ಮತದಾನ ನಡೆಸಲು ಕ್ರಮ ವಹಿಸಿ: ಡಿಸಿ ಶ್ರೀಧರ್
ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್