ಇಂದಿನಿಂದ ಹನುಮಂತನಗರ ಆತ್ಮಲಿಂಗೇಶ್ವರ ದೇಗುಲದಲ್ಲಿ ಭಾರೀ ದನಗಳ ಜಾತ್ರೆ

KannadaprabhaNewsNetwork |  
Published : Feb 24, 2025, 12:34 AM IST
23ಕೆಎಂಎನ್ ಡಿ21 | Kannada Prabha

ಸಾರಾಂಶ

ಮಹಾ ಶಿವರಾತ್ರಿ ಅಂಗವಾಗಿ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಫೆ.24ರಿಂದ ಆರಂಭವಾಗಲಿರುವ ಭಾರೀ ದನಗಳ ಜಾತ್ರೆ ಮತ್ತು ವೈಭವದ ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಮುಗಿದಿವೆ. ದನಗಳ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಫೆ.24ರ ಬೆಳಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾ ಮಂಗಳಾರತಿ, ಸಂಜೆ ಪಂಚಗವ್ಯ, ಪುಣ್ಯಾಹವಾಚನ ಗಣಪತಿ ಹೋಮ, ರಾತ್ರಿ 8 ಗಂಟೆ ಮಹಾ ಮಂಗಳರಾತಿ ನಡೆಯಲಿದೆ.

ಬಿ.ಎಸ್. ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಹಾ ಶಿವರಾತ್ರಿ ಅಂಗವಾಗಿ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಫೆ.24ರಿಂದ ಆರಂಭವಾಗಲಿರುವ ಭಾರೀ ದನಗಳ ಜಾತ್ರೆ ಮತ್ತು ವೈಭವದ ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಮುಗಿದಿವೆ.

ದನಗಳ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಮಹಾ ಶಿವರಾತ್ರಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಫೆ.24ರ ಬೆಳಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾ ಮಂಗಳಾರತಿ, ಸಂಜೆ ಪಂಚಗವ್ಯ, ಪುಣ್ಯಾಹವಾಚನ ಗಣಪತಿ ಹೋಮ, ರಾತ್ರಿ 8 ಗಂಟೆ ಮಹಾ ಮಂಗಳರಾತಿ ನಡೆಯಲಿದೆ.

ಫೆ.25ರಂದು ಬೆಳಗ್ಗೆ ಗಣಪತಿ ಪೂಜೆ, ಶ್ರೀಆತ್ಮಲಿಂಗೇಶ್ವರ ಏಕವಾರ ರುದ್ರಾಭಿಷೇಕ, ಮಧ್ಯಾಹ್ನ ಮತ್ತು ರಾತ್ರಿ ಮಹಾ ಮಂಗಳಾರತಿ, ಫೆ.26ರಂದು ಜಾತ್ರೆ ಹಿನ್ನೆಲೆಯಲ್ಲಿ ಗಣಪತಿ ಪೂಜೆ, ಶ್ರೀಆತ್ಮಲಿಂಗೇಶ್ವರಸ್ವಾಮಿಗೆ ಪಂಚಾಮೃತಾಭಿಷೇಕ ಮತ್ತು ಪೂಜಾ ಅಲಂಕಾರಗಳು, ಬೆಳಗ್ಗೆ ರುದ್ರಹೋಮ, ಮಹಾ ಮಂಗಳಾರತಿ ನಂತರ ಸಂಜೆಯಿಂದ ಬೆಳಗಿನ ಜಾವದವರೆಗೆ ಪೂಜಾ ಕಾರ್ಯಕ್ರಮಗಳ ಜರುಗಲಿವೆ.

ಅದೇ ದಿನ ಕೆ.ಎಂ.ದೊಡ್ಡಿ ಪ್ರಜಾಪಿತ ಬಹ್ಮಕುಮಾರಿ ಆಶ್ರಮದ ಗೌರಿ ಅಕ್ಕ ಅವರಿಂದ ಪ್ರವಚನ, ಟಿ.ನರಸೀಪುರದ ಚನ್ನಾಜಮ್ಮ ತಂಡದಿಂದ ಸೋಬಾನೆ ಪದಗಳು, ಬೆಂಗಳೂರಿನ ಶ್ರೀದುರ್ಗಾ ಆರ್ಟ್ಸ್ ಅಕಾಡೆಮಿ ವತಿಯಿಂದ ಭರತನಾಟ್ಯ, ಮೈಸೂರಿನ ಸಂಜೀವಿನಿ ಭಜನಾ ಮಂಡಳಿಯಿಂದ ಭಜನೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ದೊಣ್ಣೆವರಸೆ, ದೊಡ್ಡರಸಿನಕೆರೆ ಶ್ರೀ ಕಾಲಭೈರವೇಶ್ವರ ಜನಪದ ಯುವಕ ಕಲಾ ತಂಡ, ಕರಡಕೆರೆ ಮಾರುತಿ ಯುವಕರ ಸಂಘ, ತಳಗವಾದಿ ಶ್ರೀ ಚೌಡೇಶ್ವರಿ ಕಲಾ ಸಂಘದಿಂದ ಕೋಲಾಟ ಮತ್ತು ಮುಟ್ಟನಹಳ್ಳಿ, ಕರಡಕೆರೆ, ಗೌಡಯ್ಯನದೊಡ್ಡಿ, ಅಖಂಡ ಭಜನೆ ಜರುಗಲಿದೆ.

ಮಾ.27ರಂದು ಬೆಳಗ್ಗೆ ಮಹಾ ಮಂಗಳಾರತಿ ಓಂ ಸೇವಾ ಟ್ರಸ್ಟ್‌ನಿಂದ ಪ್ರಸಾದ ವಿನಿಯೋಗ, ಮಧ್ಯಾಹ್ನ ಮಹಾ ಮಂಗಳಾರತಿ, ವಿಶೇಷ ಪೂಜಾ ಕೈಂಕಾರ್ಯಗಳು ಜರುಗಲಿವೆ. ಫೆ.28 ರಂದು ಬೆಳಗ್ಗೆ ವಿಶೇಷ ಪೂಜಾ, ಮಧ್ಯಾಹ್ನ ಮಹಾಮಂಗಳಾರತಿ ನಂತರ ರಥೋತ್ಸವ ನಡೆಯಲಿದೆ.

ಇದೇ ವೇಳೆ ಕೆ.ಶೆಟ್ಟಹಳ್ಳಿ ಶ್ರೀ ಭೈರವೇಶ್ವರ ಸ್ವಾಮಿ ಮತ್ತು ಮಾರಮ್ಮ, ಬಿದರಹಳ್ಳಿ ಶ್ರೀ ಕಬ್ಬಾಳಮ್ಮ, ಮಾದರಹಳ್ಳಿ ಶ್ರೀ ಕಾಳಮ್ಮ, ಶ್ರೀ ದೇವಮ್ಮ ಹಾಗೂ ದೇಶಿ ಲಿಂಗಪ್ಪ ವಾಹನ, ಚಿಕ್ಕರಸಿನಕೆರೆ ಶ್ರೀ ಕಾಲಬೈರವೇಶ್ವರ ಸ್ವಾಮು ಪೂಜೆ ಮತ್ತು ಬಿರುದುಗಳು, ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಕರಡಕೆರೆ ಶ್ರೀ ಆಂಜನೇಯ ಸ್ವಾಮಿಯ ಬಿರುದುಗಳು ಮತ್ತು ವೀರಗಾಸೆ ಕುಣಿತ, ಡೊಳ್ಳು ಕುಣಿತ ಪ್ರದರ್ಶನ ನಡೆಯಲಿದೆ. ಅದೇ ದಿನ ಸಂಜೆ 4.30 ಕ್ಕೆ ಎಪಿಎಂಸಿ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು.

ಮಾ.1ರಂದು ತೆಪ್ಪೋತ್ಸವ:

ದೇವಾಲಯ ಆವರಣದಲ್ಲಿ ಪಾವನಗಂಗಾದಲ್ಲಿ ಮಾ.1 ಸಂಜೆ ತೆಪ್ಪೋತ್ಸವ, ನಂತರ ದೇವಾಲಯ ಪ್ರಾಂಗಣದಲ್ಲಿ ಶಯನೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಭರತನಾಟ್ಯ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ದೇಗುಲದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದ್ದಾರೆ.ನನ್ನ ತಾತ ಜಿ.ಮಾದೇಗೌಡರು ದೈವ ಭಕ್ತರು. ಅವರ ಕನಸಿನಲ್ಲಿ ಕಾಣಿಸಿದ್ದೆ ಆತ್ಮಲಿಂಗೇಶ್ವರನನ್ನು ಗುಡ್ಡದಲ್ಲಿ ಪ್ರತಿಷ್ಠಾಪಿಸಿ ಒಂದು ಉತ್ತಮ ಧಾರ್ಮಿಕ ಕ್ಷೇತ್ರ ಮಾಡಿದ್ದಾರೆ. ಭಕ್ತರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಿದೆ. ಎಲ್ಲರಿಗೂ ಮೂಲ ಸೌಕರ್ಯ ಒದಗಿಸಲಾಗಿದೆ

- ಆಶಯ್ ಮಧು, ಶ್ರೀ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್