ಕನ್ನಡಪ್ರಭ ವಾರ್ತೆ ಪಾಂಡವಪುರ
ಬೇಬಿಬೆಟ್ಟದ ಆವರಣದಲ್ಲಿ ಶ್ರೀಮಹದೇಶ್ವರಸ್ವಾಮಿ ಪೂಜೆ ಸಲ್ಲಿಸಿ ಬಳಿಕ ಜಾತ್ರಾ ಆವರಣದಲ್ಲಿ ವಿವಿಧ ಇಲಾಖೆಗಳಿಂದ ಹಾಕಲಾಗಿರುವ ವಸ್ತು ಪ್ರದರ್ಶನದ ಮಳಿಗೆಗಳಿಗೆ ಚಾಲನೆ ನೀಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.
ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಆರೋಗ್ಯ, ಸೆಸ್ಕ್, ಮಹಿಳಾ ಮತ್ತು ಮಕ್ಕಳಕಲ್ಯಾಣ ಅಭಿವೃದ್ದಿ, ಮೀನುಗಾರಿಕೆ, ಶಿಕ್ಷಣ ಇಲಾಖೆಗಳು ತಮ್ಮಇಲಾಖೆಯಲ್ಲಿ ದೊರೆಯುವ ಸವಲತ್ತುಗಳನ್ನು ಬಗ್ಗೆ ಪ್ರದರ್ಶಿಸಲಾಯಿತು. ಜಾತ್ರೆಗೆ ಆಗಮಿಸಿದ ರೈತರು ಆಗಮಿಸಿ ಮಾಹಿತಿ ಪಡೆದುಕೊಂಡರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಜಾತ್ರಾ ಮಹೋತ್ಸವಗಳಿ ಜಾತಿ-ಮತ,ಪಂಥವನ್ನು ಬಿಟ್ಟು ಎಲ್ಲರು ಒಟ್ಟಾಗಿ ಸೇರಿ ಆಚರಣೆ ಮಾಡುವ ಮೂಲಕ ನಾವೆಲ್ಲರು ಸಮಾನರು ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್‌ಗಳ ಹಾವಳಿ ಆಡಂಬರಿಂದ ತಮ್ಮ ಜೀವನವನ್ನು ಆಳುಮಾಡುಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳನ್ನು ಸಹ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳುವ ಮೂಲಕ ಮಕ್ಕಳು ಮಾನಸಿಕ, ಧಾರ್ಮಿಕವಾಗಿ ಸದೃಢರಾಗಲಿದ್ದಾರೆ ಎಂದರು.
ಕೃಷಿಯಲ್ಲಿ ಪ್ರಮುಖವಾಗಿ ಬೆಳೆ ಪದ್ಧತಿ, ನೀರು ಬಳಿಕೆ ಪದ್ಧತಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇನ್ನೂ ಮಾ.2 ರಂದು ನಡೆಯುವ ಸರಳ ಸಾಮೂಹಿಕ ವಿವಾಹಕ್ಕೆ 22 ಮಂದಿ ಜೋಡಿಗಳು ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವಸ್ವಾಮೀಜಿ ಮಾತನಾಡಿ, ಮೇಲುಕೋಟೆ ಮತ್ತು ಬೇಬಿಬೆಟ್ಟ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧ ಇದೆ. ಮೇಲುಕೋಟೆಯನ್ನು ಯದುಗಿರಿ ಎಂಬುದಾಗಿ ಕರೆದರೆ ಬೇಬಿಬೆಟ್ಟವನ್ನು ಸಿದ್ದಗಿರಿ ಎಂಬುದಾಗಿ ಉಲ್ಲೇಖಿಸುತ್ತಾರೆ ಎಂದರು.
ಸಮಾರಂಭದಲ್ಲಿ ತಾಪಂ ಇಒ ಲೋಕೇಶ್ ಮೂರ್ತಿ, ಸುನೀತ ಪುಟ್ಟಣ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್, ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಕೆ.ಎಸ್.ದಯಾನಂದ, ಬಿಇಓ ರವಿಕುಮಾರ್, ಪಿ.ನಾಗರಾಜು, ರಾಘವ, ಅಂಕಯ್ಯ, ಗ್ರಾಪಂ ಅಧ್ಯಕ್ಷರಾದ ಪುಟ್ಟನಿಂಗಮ್ಮ, ಕೆ.ಕೆ.ಪ್ರಕಾಶ್, ನಂಜೇಗೌಡ, ಬಲರಾಮಶೆಟ್ಟಿ, ರಮೇಶ್, ಆರ್.ನಿರ್ಮಲ, ಮುಖಂಡರಾದ ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್, ಬಿ.ಜೆ.ಸ್ವಾಮಿ, ಬಿ.ಕೆ.ರೇವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.