ರಾಜ್ಯದಲ್ಲೂ ಭಾರಿ ಮಳೆ, ಗುಡ್ಡ ಕುಸಿತ ಧಾರಾಕಾರ ಮಳೆಗೆ ನದಿಗಳಲ್ಲಿ ಪ್ರವಾಹ । 10ಕ್ಕೂ ಹೆಚ್ಚು ಕಡೆ ಭೂಕುಸಿತ

KannadaprabhaNewsNetwork |  
Published : Jul 31, 2024, 02:04 AM IST
ಶಿರಾಡಿ ಘಾಟಿಯಲ್ಲಿ ಭೂಕುಸಿತ | Kannada Prabha

ಸಾರಾಂಶ

ರಾಜ್ಯದಲ್ಲೂ ಭಾರಿ ಮಳೆ, ಗುಡ್ಡ ಕುಸಿತ ಧಾರಾಕಾರ ಮಳೆಗೆ ನದಿಗಳಲ್ಲಿ ಪ್ರವಾಹ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್‌, ಟಿಪ್ಪರ್‌, 2 ಕಾರು ಸೇರಿ 6 ವಾಹನಗಳ ಮೇಲೆ ಮಂಗಳವಾರ ಗುಡ್ಡ ಕುಸಿದಿದೆ. ಇದರಿಂದಾಗಿ ವಾಹನಗಳು ಮಣ್ಣಿನಲ್ಲಿ ಸಿಲುಕಿದ್ದು, ಅದರೊಳಗಿದ್ದ ಜನರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಗುಡ್ಡ ಕುಸಿತದಿಂದ ಹತ್ತಾರು ಕಿ.ಮೀ.ವರೆಗೂ ವಾಹನಗಳು ನಿಂತಲ್ಲೇ ನಿಂತಿವೆ.--

ಬೆಂಗಳೂರು: ರಾಜ್ಯದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ನದಿಗಳು ಉಕ್ಕೇರಿ ಹರಿಯುತ್ತಿವೆ. ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ನಿರಂತರ ಮಳೆಯಿಂದಾಗಿ ಶಿರಾಡಿ, ಚಾರ್ಮಾಡಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ,. ಉತ್ತರ ಕನ್ನಡ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಸಂಭವಿಸಿದೆ.

--

ಕೇರಳದಿಂದ ಕಬಿನಿ ಡ್ಯಾಂಗೆ ಭಾರಿ ನೀರು

ಭೂಕುಸಿತ ಸಂಭವಿಸಿರುವ ವಯನಾಡು ಜಿಲ್ಲೆ ಕಬಿನಿ ನದಿಯ ಜಲಾನಯನ ಪ್ರದೇಶ. ಅಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಬಿನಿ ಡ್ಯಾಂಗೆ ಅಪಾರ ನೀರು ಬರುತ್ತಿದೆ. ಕೊಡಗಿನಲ್ಲಿ ಮಳೆ ಮುಂದುವರಿದಿರುವುದರಿಂದ ಕೆಆರ್‌ಎಸ್‌ಗೆ 1.10 ಲಕ್ಷ ಒಳಹರಿವಿದೆ.

---

ಶೃಂಗೇರಿ ಭೋಜನ ಶಾಲೆ ಜಲಾವೃತಭಾರಿ ಮಳೆಯಿಂದ ತುಂಗಾ ನದಿಯ ಮಟ್ಟ ಹೆಚ್ಚಾಗಿದ್ದು, ಪುಣ್ಯ ಕ್ಷೇತ್ರ ಶೃಂಗೇರಿ ದೇಗುಲದ ಭೋಜನ ಶಾಲೆ, ಗಾಂಧಿ ಮೈದಾನ, ಯಾತ್ರಿ ನಿವಾಸ, ಸಂಧ್ಯಾವಂದನೆ ಮಂಟಪಗಳು ಮುಳುಗಡೆಯಾಗಿವೆ. --ಗೋಕಾಕ್‌ನಲ್ಲಿ 800 ಮನೆಗೆ ನೀರು

ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಗೋಕಾಕ್‌ನಲ್ಲಿ 800 ಮನೆಗಳು ಮುಳುಗಡೆಯಾಗಿವೆ.

--

ಕಟ್ಟೆಚ್ಚರ ವಹಿಸಿ: ಸಿಎಂ ಸೂಚನೆ

ಬೆಂಗಳೂರು: ಕೇರಳದ ವಯನಾಡು ಭೂಕುಸಿತ ಬೆನ್ನಲ್ಲೇ, ರಾಜ್ಯದಲ್ಲೂ ಕಟ್ಟೆಚ್ಚರಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಪ್ರವಾಹ, ಭೂಕುಸಿತ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳು ಸನ್ನದ್ಧರಾಗಿರಬೇಕು ಎಂದಿದ್ದಾರೆ.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ