- ಬಿರುಗಾಳಿ, ಮಳೆಗೆ ಗೊನೆ ಸಹಿತ ನೆಲಕ್ಕೊರಗಿ ಲಕ್ಷಾಂತರ ರು. ನಷ್ಟ- - - ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನಲ್ಲಿ ಸೋಮವಾರ ರಾತ್ರಿ ವಿವಿಧೆಡೆ ಸುರಿದ ಗುಡುಗು ಸಹಿತ ಬಿರುಗಾಳಿ ಮಳೆಗೆ ಫಸಲಿಗೆ ಬಂದಿರುವ ಬಾಳೆ ಬೆಳೆ ಧರೆಗುರುಳಿವೆ.ತೋರಣಗಟ್ಟೆ, ಜಮ್ಮಾಪುರ, ಕಲ್ಲೇದೇವರಪುರ, ಆಕನೂರು, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ, ನಿಬಗೂರು, ಬಿದರಕೆರೆ, ಲಿಂಗಣ್ಣನಹಳ್ಳಿ ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇದರಿಂದಾಗಿ ಬಾಳೆ ಗಿಡಗಳು ಗೊನೆಸಹಿತ ನೆಲಕ್ಕೆ ಮುರಿದುಬಿದ್ದಿವೆ. ಲಕ್ಷಾಂತರ ರು. ಬೆಳೆ ನಷ್ಟ ಸಂಭವಿಸಿದೆ.
ಕಳೆದ ವರ್ಷ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಈಗ ಮಳೆ ಬಂದಿದ್ದು ಒಂದು ಕಡೆ ಸಂತೋಷವಾದರೆ, ಬಾಳೆ ಬೆಳೆದ ರೈತರಿಗೆ ನಷ್ಟ ತಂದಿದ್ದು ದುಃಖದ ಸಂಗತಿಯಾಗಿದೆ. ೨೦ ಹೆಕ್ಟೇರ್‌ಗೂ ಹೆಚ್ಚು ಬಾಳೆ ಮಳೆಯಿಂದಾಗಿ ಹಾಳಾಗಿದೆ.ತೋರಣಗಟ್ಟೆ ಗ್ರಾಮದ ಹುಲಿಕುಂಟಪ್ಪ, ಕಟ್ಟಿಗೆಹಳ್ಳಿ ಗ್ರಾಮದ ಕೆ.ಎಸ್. ಬಸವರಾಜ್, ಕೆ.ಬಿ.ಕರಿಬಸವನಗೌಡ, ಸಿದ್ದಮ್ಮ, ಚೇತನ್‌ಕುಮಾರ್, ಕೆ.ಎನ್. ರವಿಕುಮಾರ್ ಮತ್ತಿತರ ಅನೇಮಕ ರೈತರ ಬಾಳೆ ಗಿಡಗಳು ಭಾರಿ ಬಿರುಗಾಳಿಗೆ ನೆಲಕ್ಕೆ ಅಪ್ಪಳಿಸಿವೆ.
ಬೆಳೆ ನಷ್ಟ ಪರಿಹಾರಕ್ಕೆ ಮನವಿ:ಕಳೆದ ವರ್ಷ ಮಳೆ ಬಾರದಿದ್ದರೂ ಅಂತರ್ಜಲ ಮಟ್ಟ ಕುಸಿತದಿಂದ ಬೆಳೆಗಳಿಗೆ ನೀರು ಇಲ್ಲವಾಗಿದೆ. ಬೆಳೆಗಳ ಉಳಿಸಿಕೊಳ್ಳಲು ಲಕ್ಷಾಂತರ ರು. ಖರ್ಚು ಮಾಡಿ ನೀರು ಖರೀದಿಸಿ, ಬಾಳೆ ಬೆಳೆದಿದ್ದು ಮಳೆಗೆ ನೆಲಕಚ್ಚಿದೆ. ಒಂದೆಡೆ ಸಂತೋಷವಾದರೆ ಮತ್ತೊಂದೆಡೆ ಬೆಳೆ ನಷ್ಟದಿಂದ ದುಃಖವಾಗುತ್ತಿದೆ. ತೋಟಗಾರಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಶೀಘ್ರವೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತರಾದ ಬಸವರಾಜ್, ಸಿದ್ದಮ್ಮ, ಕರಿಬಸವನಗೌಡ ಸೇರಿದಂತೆ ಅನೇಕ ರೈತರು ಆಗ್ರಹಿಸಿದ್ದಾರೆ.
- - -ಬಾಕ್ಸ್ ಭಾರಿ ಮಳೆಯಿಂದ ನಷ್ಟವಾಗಿರುವ ಬಗ್ಗೆ ರೈತರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು ಗಮನಕ್ಕೆ ಬಂದಿದೆ. ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ರೈತರಿಗೆ ಪರಿಹಾರ ಕಲ್ಪಿಸಲಾಗುವುದು
- ಡಿ.ಪ್ರಭುಶಂಕರ್, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ- - -
-23ಜೆಎಲ್ಆರ್ಚಿತ್ರ1:ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ಮಳೆಯಿಂದಾಗಿ ಸಿದ್ದಮ್ಮ ಮತ್ತು ಬಸವರಾಜಪ್ಪರ ತೋಟಗಳ ಬಾಳೆ ಬೆಳೆ ಹಾಳಾಗಿರುವುದು.