ರಾಣಿಬೆನ್ನೂರು ತಾಲೂಕಿನಲ್ಲಿ ಚುರುಕಾದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

KannadaprabhaNewsNetwork | Published : May 22, 2025 11:51 PM
ಕಳೆದ ಮೂರ‍್ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ತಾಲೂಕಿನ ಗ್ರಾಮೀಣ ಭಾಗದ ರೈತರು ಅಗ್ರೋ ಕೇಂದ್ರಗಳ ಮುಂದೆ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ.
Follow Us

ಬಸವರಾಜ ಸರೂರ

ರಾಣಿಬೆನ್ನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಮೂರ‍್ನಾಲ್ಕು ದಿನಗಳಿಂದ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರ ಮೊಗದಲ್ಲಿ ಹರುಷ ಮೂಡಿಸಿದೆ. ಕೃಷಿ ಇಲಾಖೆ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ತಾಲೂಕಿನಲ್ಲಿ ಒಟ್ಟು 76130 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 41560 ಹೆಕ್ಟೇರ್ ಮಳೆ ಆಶ್ರಿತವಿದ್ದು, 34570 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಮುಂಗಾರು ಹಂಗಾಮಿನಲ್ಲಿ ಸುಮಾರು 54901 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 7780 ಹೆಕ್ಟೇರ್ ಭತ್ತ, 42,900 ಹೆಕ್ಟೇರ್ ಗೋವಿನಜೋಳ, 615 ಹೆಕ್ಟೇರ್ ತೊಗರಿ, 1350 ಹೆಕ್ಟೇರ್ ಶೇಂಗಾ, 575 ಹೆಕ್ಟೇರ್ ಹತ್ತಿ, 570 ಹೆಕ್ಟೇರ್ ಸೋಯಾಬಿನ್, 150 ಹೆಕ್ಟೇರ್ ಹೆಸರು ಮತ್ತು 1206 ಹೆಕ್ಟೇರ್ ಇತರೆ ಬೆಳೆ ಬೆಳೆಯುವ ಗುರಿ ಇದೆ.

ಮಳೆ ಪ್ರಮಾಣ: 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜನವರಿಯಿಂದ ಮೇ- ತಿಂಗಳವರೆಗೆ 135.60 ಮಿಮೀ ವಾಡಿಕೆ ಮಳೆ ಇದ್ದು, ಇಲ್ಲಿಯವರೆಗೆ 120 3 ಮಿಮೀ ಮಳೆ ಆಗಿದೆ. ರೈತರ ಭೂಮಿ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು, ರಾಜ್ಯದಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ತಿಂಗಳ ಮೊದಲನೆ ವಾರ ವಾಡಿಕೆಯಂತೆ ಮುಂಗಾರು ಆರಂಭವಾಗಲಿದೆ.ದಾಸ್ತಾನು ಪ್ರಕ್ರಿಯೆ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ 7780 ಹೆಕ್ಟೇರ್ ಭತ್ತ, 42900 ಹೆಕ್ಟೇರ್ ಗೋವಿನಜೋಳ, 615 ಹೆಕ್ಟೇರ್ ತೊಗರಿ, 1350 ಹೆಕ್ಟೇರ್ ಶೇಂಗಾ, 575 ಹೆಕ್ಟೇರ್ ಹತ್ತಿ, 570 ಹೆಕ್ಟೇರ್ ಸೋಯಾಬಿನ್, 150 ಹೆಕ್ಟೇರ್ ಹೆಸರು ಮತ್ತು 1206 ಹೆಕ್ಟೇರ್ ಇತರೆ ಬೆಳೆಗಳು ಸೇರಿದಂತೆ ಒಟ್ಟಾರೆ 54901 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಬಿತ್ತನೆ ಗುರಿಗೆ ತಕ್ಕಂತೆ ಬಿತ್ತನೆ ಬೀಜಗಳು ದಾಸ್ತಾನಿದ್ದು, ರೈತರ ಬೇಡಿಕೆಗನುಗುಣವಾಗಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.ರಸಗೊಬ್ಬರಕ್ಕೆ ಸಂಬಂಧಿಸಿದಂತೆ 10260 ಟನ್ ಯೂರಿಯಾ, 3548 ಟನ್ ಡಿಎಪಿ 516 ಟನ್ ಎಂಒಪಿ 9631 ಟನ್ ಕಾಂಪ್ಲೆಕ್ಸ್ ಮತ್ತು 270ಟನ್ ಎಸ್ಎಸ್‌ಪಿ ಬೇಡಿಕೆ ಇದ್ದು, ಹಂತ- ಹಂತವಾಗಿ ಬಿತ್ತನೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.ಮುಗಿಬಿದ್ದ ರೈತರು: ಕಳೆದ ಮೂರ‍್ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ತಾಲೂಕಿನ ಗ್ರಾಮೀಣ ಭಾಗದ ರೈತರು ಅಗ್ರೋ ಕೇಂದ್ರಗಳ ಮುಂದೆ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ.

ಕೃಷಿ ಪರಿಕರ: ರೈತರು ತಾವೇ ಖುದ್ದು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಮಗೆ ಬೇಕಾದ ಕೃಷಿ ಪರಿಕರಗಳನ್ನು ಖರೀದಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶಾಂತಮಣಿ ಜಿ. ತಿಳಿಸಿದರು.ಬೇಡ ಜಂಗಮ ಸಮಾಜದ ಕಡೆಗಣನೆ ಸರಿಯಲ್ಲ

ಶಿಗ್ಗಾಂವಿ: ರಾಜಕಾರಣಿಗಳು ಬೇಡಜಂಗಮ ಸಮಾಜವನ್ನು ಕಡೆಗಣಿಸುತ್ತಿದ್ದಾರೆ ಎಂದು ಬೇಡ ಜಂಗಮಾಭಿವೃದ್ಧಿ ಸಂಘದ ತಾಲೂಕು ಗೌರವಾಧ್ಯಕ್ಷ ಹಾಗೂ ಕೆಸಿಸಿ ಬ್ಯಾಂಕ್‌ನ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಆರೋಪಿಸಿದರು.ಇಲ್ಲಿನ ರೇಣುಕಾಚಾರ್ಯ ದೇವಸ್ಥಾನದಲ್ಲಿ ಬೇಡಜಂಗಮ ಸಮಾಜದ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶದಲ್ಲಿ ಬೇಡ ಜಂಗಮ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದಾರೆ. ಇದು ಸರಿಯಲ್ಲ ಎಂದರು.ನಮ್ಮ ಸಂವಿಧಾನ ಹಕ್ಕನ್ನು ಕಿತ್ತುಕೊಳ್ಳುವಂತೆ ಖರ್ಗೆಯವರು ೨ ವರ್ಷದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿರುವುದು ಖಂಡನೀಯ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಶಶಿಧರ್ ಸುರಗಿಮಠ ವಹಿಸಿ ಮಾತನಾಡಿದರು. ಕಾರ್ಯದರ್ಶಿಗಳಾದ ಸೋಮಶೇಖರಯ್ಯ ಗೌರೀಮಠ,ಶಿ ವಪ್ರಕಾಶ ಹಿರೇಮಠ, ಉಳವಯ್ಯ ಬಮ್ಮಿಗಟ್ಟಮಠ, ರಾಜಶೇಖರಯ್ಯ ಹಿರೇಮಠ ಮಾತನಾಡಿದರು.

ನಾಗಯ್ಯ ಹಿರೇಮಠ, ಬಸವೇಂದ್ರಯ್ಯ ಹಿರೇಮಠ, ಫಕ್ಕೀರಯ್ಯ ಕುಂಬಾರಗೇರಿಮಠ, ಮಲ್ಲಿಕಾರ್ಜುನ ಗೌಡ ಪಾಟೀಲ, ಶಿವಾನಂದ ಜಡೀಮಠ, ಶಿವಾನಂದ ಹಿರೇಮಠ, ಮೃತ್ಯುಂಜಯ ಬೆಳ್ಳಗಟ್ಟಿಮಠ, ಸದಾಶಿವ ಹಿರೇಮಠ, ಮಲ್ಲಯ್ಯ ಹಿರೇಮಠ ಇತರರು ಇದ್ದರು.