ಬೆಳ್ತಂಗಡಿ ತಾಲೂಕಲ್ಲಿ ಗಾಳಿ ಅಬ್ಬರ: ಮಾಲಾಡಿ ಶಾಂತಿಧಾಮ ಆಶ್ರಮ ಮೇಲ್ಛಾವಣಿ ಸಂಪೂರ್ಣ ಹಾನಿ

KannadaprabhaNewsNetwork |  
Published : Jul 28, 2024, 02:09 AM IST
11 | Kannada Prabha

ಸಾರಾಂಶ

ಗಾಳಿಯ ಅಬ್ಬರಕ್ಕೆ ಮಾಲಾಡಿಯ ಶಾಂತಿಧಾಮ ಆಶ್ರಮದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಅದೃಷ್ಟವಶಾತ್ ಆಶ್ರಮದಲ್ಲಿ ಇದ್ದವರು ಅಪಾಯದಿಂದ ಪಾರಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದೆ. ಶುಕ್ರವಾರ ಸಂಜೆಯ ವೇಳೆ ಮಾಲಡಿ ಸೋಣಂದೂರಿನಲ್ಲಿ ಗಾಳಿಗೆ ವ್ಯಾಪಕ ಹಾನಿಯುಂಟಾಗಿದೆ.

ಗಾಳಿಯ ಅಬ್ಬರಕ್ಕೆ ಮಾಲಾಡಿಯ ಶಾಂತಿಧಾಮ ಆಶ್ರಮದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಅದೃಷ್ಟವಶಾತ್ ಆಶ್ರಮದಲ್ಲಿ ಇದ್ದವರು ಅಪಾಯದಿಂದ ಪಾರಗಿದ್ದಾರೆ.

ಮಾಲಾಡಿ, ಸೋಣಂದೂರಿನಲ್ಲಿ ಭಾರೀ ಗಾಳಿಗೆ ಸುಮಾರು 11 ಮನೆಗಳಿಗೆ ತೀವ್ರತರದ ಹಾನಿಗಳಾಗಿದೆ. ಭಾರೀಗಾತ್ರದ ಮರಗಳು ನೆಲಕ್ಕೆ ಉರುಳಿವೆ. ಈ ಪರಿಸರದಲ್ಲಿ ಕೃಷಿಗೆ ವ್ಯಾಪಕ ಹಾನಿಯಾಗಿದ್ದು ಅಡಕೆ ಮರಗಳು ಮುರಿದು ಬಿದ್ದಿವೆ.ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಹಾನಿಗೀಡಾದ ಪ್ರದೇಶಗಳಲ್ಲಿ ತುರ್ತು ನೆರವು ಕಾರ್ಯಾಚರಣೆ ನಡೆಸಲಾಗಿದ್ದು ಮರಗಳನ್ನು ತೆರವುಗೊಳಿಸಲಾಗಿದೆ.ಹಾನಿಗೆ ಈಡಾದ ಪ್ರದೇಶಗಳಿಗೆ ಗ್ರಾ.ಪಂ ಅಧ್ಯಕ್ಷ ಪುನೀತ್ ಕುಮಾರ್, ಮಾಜಿ ಅಧ್ಯಕ್ಷ ಬೇಬಿ ಸುವರ್ಣ, ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ, ಕಾರ್ಯದರ್ಶಿ ಗುಣಕರ ಹೆಗ್ಡೆ, ಗ್ರಾ.ಪಂ‌. ಸದಸ್ಯ ಉಮೇಶ್ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ