ಮಾಗಡಿ: ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಹೆಬ್ಬಳಲು ನಂಜುಂಡಯ್ಯನವರ ಹೆಸರಿನಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.
ತಾಲೂಕಿನ ಮಾಗಡಿ-ತುಮಕೂರುರಸ್ತೆಯ ಸಂಕೀಘಟ್ಟ ಗ್ರಾಪಂ ವ್ಯಾಪ್ತಿಯ ಹೆಬ್ಬಳಲು ಕ್ರಾಸ್‌ಲ್ಲಿರುವ ಹಳೆಯ ಪ್ರಯಾಣಿಕರ ತಂಗುದಾಣ ನೆಲಸಮ ಮಾಡಿ ಹೊಸ ತಂಗುದಾಣ ನಿರ್ಮಾಣ ಮಾಡಲಾಗುತ್ತದೆ. 3 ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಪ್ರಥಮ ಅಧ್ಯಕ್ಷರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಶ್ರಮಿಸಿದ್ದ ಹೆಬ್ಬಳಲು ನಂಜುಂಡಯ್ಯ ಹೆಸರಿನಲ್ಲಿ ತಾಲೂಕಿನ ಪರವಾಗಿ ಹೆಬ್ಬಳಲು ಕ್ರಾಸ್ ಬಳಿ ತಂಗುದಾಣ ನಿರ್ಮಿಸಲಾಗುತ್ತಿದೆ. ಅಗತ್ಯ ಹೆಚ್ಚುವರಿ ವೆಚ್ಚವನ್ನು ಶಾಸಕರ ಅನುದಾನದಲ್ಲಿ ನೀಡಲಾಗುವುದ. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಮಾಗಡಿ ಪಟ್ಟಣದಲ್ಲಿ ಕನ್ನಡ ಭವನ ಹಾಗೂ ಪತ್ರಕರ್ತರ ಭವನ ನಿರ್ಮಿಸಲು ಭರವಸೆ ನೀಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತಿ.ನಾ.ಪದ್ಮನಾಭ ಮಾತನಾಡಿ, ಕಸಾಪ ಕಟ್ಟಿದ ಎಚ್.ವಿ.ನಂಜುಂಡಯ್ಯನವರ ಹೆಸರು ಉಳಿಸಲು ತಾಲೂಕು ಆಡಳಿತ ಮುಂದಾಗಿರುವುದು ಶ್ಲಾಘನೀಯ. ತಿಪ್ಪಸಂದ್ರದಲ್ಲಿ ಜಿಲ್ಲಾ ಮಟ್ಟದ ಕಸಾಪ ಸಮ್ಮೇಳನ ನಡೆದ ವೇಳೆ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಹೆಬ್ಬಳಲು ಗ್ರಾಮಕ್ಕೆ ಭೇಟಿ ನೀಡಿ ನಂಜುಂಡಯ್ಯನವರ ನೆನಪಿನಲ್ಲಿ ಸ್ಮಾರಕ ನಿರ್ಮಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ತಂಗುದಾಣ ನಿರ್ಮಿಸಿ ಅವರ ಹೆಸರು ಉಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಕೆ. ಧನಂಜಯ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಚಿಗಳೂರು ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಟಿ.ಜಿ. ವೆಂಕಟೇಶ್, ಶಿವರಾಜು, ಜಿಲ್ಲಾ ಕಸಾಪ ನಿರ್ದೇಶಕ ಎಂ.ಎಸ್.ಸಿದ್ದಲಿಂಗೇಶ್ವರ, ಗ್ರಾಪಂ ಸದಸ್ಯ ತಿಮ್ಮಯ್ಯ, ರಮೇಶ್, ದೌಲತ್ತು, ಸಂಕೀಘಟ್ಟ ಚಂದ್ರಶೇಖರ್, ಟಿ.ಕೆ. ಶ್ರೀನಿವಾಸ್, ನೇರಳೆಕೆರೆ ಗಂಗಾಧರ್ ಇತರರು ಭಾಗವಹಿಸಿದ್ದರು. ಪೋಟೋ 8ಮಾಗಡಿ1 :ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ಸಂಕಿಘಟ್ಟ ಗ್ರಾಪಂ ಹೆಬ್ಬಳಲು ಕ್ರಾಸ್ ಬಳಿ ನಂಜುಂಡಯ್ಯನವರ ಹೆಸರಿನಲ್ಲಿ ತಂಗುದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು.