ಕನ್ನಡಪ್ರಭ ವಾರ್ತೆ ಕಾರ್ಕಳ
ನನ್ನ ರಾಜಕೀಯಕ್ಕೆ ಪ್ರೇರಣೆ ನೀಡಿದ ಮಹತ್ತರ ವ್ಯಕ್ತಿ ಗೋಪಾಲ ಭಂಡಾರಿ. ಅವರು ಲಂಚ, ಭ್ರಷ್ಟಾಚಾರವಿಲ್ಲದ, ಬಡವರ ಕಾಳಜಿಯ ರಾಜಕಾರಣಿ. ಎಲ್ಲ ಜಾತಿ, ಪಂಥಗಳನ್ನು ಗೌರವಿಸಿದ ಬಲು ಅಪರೂಪದ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.ಅವರು ಹೆಬ್ರಿ ನಾರಾಯಣ ಗುರು ಸಭಾಭವನದಲ್ಲಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ವತಿಯಿಂದ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಭಂಡಾರಿಯವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿ, ಭಂಡಾರಿಯವರು ಸರ್ವಧರ್ಮ ಸೌಹಾರ್ದತೆ ಪಾಲಿಸಿದ ರಾಜಕೀಯ ನಾಯಕ. ಅವರ ಮೌಲ್ಯಾಧಾರಿತ ಜೀವನ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಎಂದರು.ಶಾಸಕ ವಿ. ಸುನೀಲ್ ಕುಮಾರ್, ಗೋಪಾಲ ಭಂಡಾರಿ ಅವರ ಸರಳತೆ, ಪಕ್ಷ ನಿಷ್ಠೆ, ವ್ಯಕ್ತಿನಿಷ್ಠೆಯ ಬಗ್ಗೆ ಮಾತನಾಡಿದರು.
ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಉದ್ಯಮಿ ಸತೀಶ್ ಪೈ, ಸಂಜೀವ ಮಡಿವಾಳ ಮಾತನಾಡಿದರು.ಮಾಜಿ ಸಚಿವ ಅಭಯಚಂದ್ರ, ಸಹನಾ ಗ್ರೂಪ್‌ನ ಸುರೇಂದ್ರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್‌ನ ಶುಭದರಾವ್, ಮುದ್ರಾಡಿ ಮಂಜುನಾಥ ಪೂಜಾರಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ತಾರನಾಥ ಬಂಗೇರ, ಮೊಳಹಳ್ಳಿ ದಿನೇಶ್, ಗೋಪಾಲ ಭಂಡಾರಿ ಅವರ ಪತ್ನಿ ಪ್ರಕಾಶಿನಿ ಭಂಡಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್ ಮುನಿಯಾಲು, ದಿನೇಶ್ ಶೆಟ್ಟಿ ಹುತ್ತುರ್ಕೆ, ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಾಹಕಧಿಕಾರಿ ಲೀಲಾವತಿ, ಅಶೊಕ್ ಕೊಡವೂರು, ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗೆಳ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಬಳ್ಳಾಲ್, ವಾದಿರಾಜ ಶೆಟ್ಟಿ, ನಾಗರಾಜಶೆಟ್ಟಿ ಉಪಸ್ಥಿತರಿದ್ದರು.
ನವೀನ್ ಅಡ್ಯಂತಾಯ ಸ್ವಾಗತಿಸಿದರು. ಪ್ರಕಾಶ್ ಪೂಜಾರಿ ಮಾತಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.