ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಲೇರಿಯಾ ಒಬ್ಬರಿಂದೊಬ್ಬರಿಗೆ ಹರಡದಂತೆ ಮೈತುಂಬ ಬಟ್ಟೆ ಹಾಕುವುದು, ಮಲಗುವಾಗ, ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ನಿರೋಧಕ ಕ್ರೀಮ್, ಕಾಯಿಲ್‌ಗಳನ್ನು ಬಳಸುವುದು, ಮುಖ್ಯವಾಗಿ ಸೊಳ್ಳೆಗಳ ಉತ್ಪತ್ತಿ ಆಗದಂತೆ ನೋಡಿಕೊಳ್ಳದಂತೆ ಸ್ವಚ್ಚತೆಗೆ ಹೆಚ್ಚಿನ ಗಮನಹರಿಸಬೇಕು ಎಂದರು.ನಿರ್ಲಕ್ಷ್ಯ ಮಾಡಬೇಡಿ:
ಜಿಲ್ಲೆಯಲ್ಲಿ ಆಶ್ರಿತ ರೋಗಗಳ ನಿಯಂತ್ರಣಕ್ಕಾಗಿ ಒಂದು ತಂಡವಾಗಿ ಕೆಲಸ ಮಾಡಲಾಗುತ್ತಿದೆ, ಜಾಗೃತಿ ಕಾರ್ಯಕ್ರಮಗಳು, ಅರಿವು ಮೂಡಿಸಲು ಮನೆ ಮನೆಗೆ ಭೇಟಿ, ತಪಾಸಣೆ ಮಾಡಲಾಗುತ್ತಿದ್ದು, ಜ್ವರ, ಕೆಮ್ಮು, ನೆಗಡಿ ಬಂದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರಲ್ಲಿ ತೋರಿಸಿಕೊಳ್ಳಿ ಎಂದರು.ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ರಾಜೇಶ್ ಕುಮಾರ್ ಮಾತನಾಡಿ, ದೇಶದಲ್ಲಿ ಮಲೇರಿಯಾ ರೋಗವನ್ನು ೨೦೨೫ ರೊಳಗಾಗಿ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶವನ್ನು ಹೊಂದಲಾಗಿದ್ದು ಅದಕ್ಕಾಗಿ ಪ್ರತಿಯೊಬ್ಬ ಸಾರ್ವಜನಿಕರು ಸ್ವಪ್ರೇರಿತರಾಗಿ ಕೈಜೋಡಿಸಬೇಕು ಎಂದರು. ಮಲೇರಿಯಾ ಪ್ಲಾಸ್ಮೋಡಿಯಮ್ ಎಂಬ ಪರಾವಲಂಬಿಗಳ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ ಸೋಂಕಿತ ಹೆಚ್ಚು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಜನರು ಮಲೇರಿಯಾ ರೋಗಕ್ಕೆ ತುತ್ತಾಗುತ್ತಾರೆ ಎಂದರು.ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ದೇಶದಲ್ಲಿ ಸಾಕಷ್ಟು ಸುಧಾರಣೆಗಳ ಹೊರತಾಗಿಯೂ ಮಲೇರಿಯಾ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಮಲೇರಿಯಾ ಕೇವಲ ನಮ್ಮ ಭಾರತ ದೇಶದ ಸಮಸ್ಯೆಯಷ್ಟೇ ಅಲ್ಲ. ಇದು ಇಡೀ ವಿಶ್ವದಾದ್ಯಂತ ಅತ್ಯಂತ ಮಾರಕ ಕಾಯಿಲೆ ಎಂಬ ಕುಖ್ಯಾತಿ ಪಡೆದಿದೆ. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್ ನಿಂದ ತಾನೂ ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹರಡುತ್ತದೆ ಎಂದರು. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಒದಗಿಸಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು ಎಂದರು,ಮಲೇರಿಯಾ ಜ್ವರ ಹೆಚ್ಚಾದಂತೆ ವ್ಯಕ್ತಿಗೆ ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತಿವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುತ್ತದೆ. ಕಾರ್ಯಕ್ರಮದಲ್ಲಿ ಸಹಾಯಕ ವಾರ್ತಾಧಿಕಾರಿ ಸುರೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ ಇದ್ದರು.