ಸ್ವಚ್ಛ ಕೋಲಾರ ಕನಸು ನನಸಾಗಿಸಲು ಸಹಕರಿಸಿ

KannadaprabhaNewsNetwork |  
Published : Jul 27, 2025, 01:48 AM IST
೨೪ಕೆಎಲ್‌ಆರ್-೪ಶ್ರೀನಿವಾಸಪುರ ಕನಕ ಸಮುದಾಯಭವನದಲ್ಲಿ ಲೋಕಾಯುಕ್ತದಿಂದ ತಾಲ್ಲೂಕಿಗೆ ಸಂಬಂಧಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ಚಾಲನೆ ನೀಡಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಗ್ರಾಪಂ ಅಧಿಕಾರಿಗಳು ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಣ ಮಾಡುವುದನ್ನು ಬಿಡಬೇಕು. ಪ್ರಪಂಚದಲ್ಲಿ ಭ್ರಷ್ಟಾಚಾರದಲ್ಲಿ ಭಾರತ ೯೬ನೇ ಸ್ಥಾನದಲ್ಲಿದ್ದರೆ, ದೇಶದಲ್ಲಿ ನಮ್ಮ ರಾಜ್ಯ ೫ನೇ ಸ್ಥಾನ ಪಡೆದಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರದ ಅಧೀನದಲ್ಲಿ ಇಲ್ಲ. ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರವನ್ನು ಮೊದಲು ಸ್ವಚ್ಛ ಜಿಲ್ಲೆಯನ್ನಾಗಿಸಿ ಬಳಿಕ ರಾಜ್ಯಾದ್ಯಂತ ಇದನ್ನು ಮುಂದುವರಿಸಲು ಕ್ರಮಕೈಗೊಳ್ಳಲಾಗುವುದು. ತಮ್ಮ ಈ ಆಶಯಗಳಿಗೆ ಕೈಜೋಡಿಸಿ ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ವೀರಪ್ಪ ಕೋರಿದರು.ಶ್ರೀನಿವಾಸಪುರ ಪಟ್ಟಣ ಹೊರವಲಯದ ಕನಕ ಸಮುದಾಯಭವನದಲ್ಲಿ ಲೋಕಾಯುಕ್ತದಿಂದ ತಾಲೂಕಿಗೆ ಸಂಬಂಧಿಸಿದ ದೂರು ವಿಚಾರಣೆ ಹಾಗೂ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಚ್ಛತೆ ಕಾಪಾಡಲು ಶ್ರಮಿಸಿ

ಗ್ರಾಪಂ ಅಧಿಕಾರಿಗಳು ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಣ ಮಾಡುವುದನ್ನು ಬಿಡಬೇಕು. ಪ್ರಪಂಚದಲ್ಲಿ ಭ್ರಷ್ಟಾಚಾರದಲ್ಲಿ ಭಾರತ ೯೬ನೇ ಸ್ಥಾನದಲ್ಲಿದ್ದರೆ, ದೇಶದಲ್ಲಿ ನಮ್ಮ ರಾಜ್ಯ ೫ನೇ ಸ್ಥಾನ ಪಡೆದಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರದ ಅಧೀನದಲ್ಲಿ ಇಲ್ಲ. ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಉತ್ತಮವಾಗಿ ನಡೆಯುವಂತೆ ನೋಡಿಕೊಳ್ಳುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶ ಎಂದರು.

ಕಳೆದ ಎರಡು ತಿಂಗಳ ಹಿಂದೆ ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೂರುಗಳಲ್ಲಿ ವಿವಿದ ಇಲಾಖೆಗಳ ೧೦೧ ದೂರುಗಳು ವಿಲೇವಾರಿ ಆಗಿದ್ದು, ಉಳಿದಂತೆ ಬಾಕಿ ಇರುವ ದೂರುಗಳನ್ನು ಅತಿ ಶೀಘ್ರವಾಗಿ ಪರಿಹಾರ ಮಾಡಿಸುವಂತೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರರಿಗೆ ಸೂಚಿಸಿದರು.ಜನತೆಯ ಸಮಸ್ಯೆ ಪರಿಹರಿಸಿ

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ಸಾರ್ವಜನಿಕರಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಆಲಿಸಿ, ಆಗಿಂದಾಗ್ಗೆ ಪರಿಹಾರ ಮಾಡುವ ಪ್ರಕ್ರಿಯೆ ಅಭ್ಯಾಸ ಬೆಳಸಿಕೊಳ್ಳಬೇಕು. ಅಧಿಕಾರಿಗಳು ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಿದ್ದು, ಜನರ ಸಮಸ್ಯೆಗಳನ್ನು ಆಲಿಸುವಂತಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದರಲ್ಲಿ ಅಸಡ್ಡೆ ತೋರಿಸಬಾರದು ಎಂದು ಎಚ್ಚರಿಸಿದರು. ದಲ್ಲಾಳಿಗಳನ್ನು ಬದಿಗೊಟ್ಟು, ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಳ್ಳವುದು ರೂಡಿಸಿಕೊಳ್ಳಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳುವ ಅವಕಾಶವಿದೆ. ಅದನ್ನು ಬಿಟ್ಟು ಮಧ್ಯವರ್ತಿಗಳ ಬಳಿ ಹೋದರೆ ಎರಡು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ಕೊಡಬಾರದು ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು. ಉಪಲೋಕಾಯುಕ್ತರ ಉದ್ದೇಶಕ್ಕೆ ಸ್ಪಂದಿಸಿ

ಉಪಲೋಕಾಯುಕ್ತರು ರಾಜ್ಯದಲ್ಲಿ ನಮ್ಮ ಜಿಲ್ಲೆಯು ಎಲ್ಲಾ ರೀತಿಯಲ್ಲಿ ಉತ್ತಮವಾಗಿಸುವ ಉದ್ದೇಶ ಹೊಂದಿದ್ದು, ಅದಕ್ಕೆ ಸಾರ್ವಜನಿಕರು, ಅಧಿಕಾರಿಗಳು ಕೈಜೋಡಿಸಬೇಕು ಎಂದರು. ಈ ವೇಳೆ ಪಶುಇಲಾಖೆ ಜಂಟಿ ನಿರ್ದೇಶಕ ಎಸ್.ಎಂ.ಶ್ರೀನಿವಾಸ್, ಎಸಿ ಡಾ.ಮೈತ್ರಿ, ಮದುಗಿರಿ ತಹಸೀಲ್ದಾರ್ ಶರೀನ್‌ತಾಜ್, ಲೋಕಾಯುಕ್ತ ನ್ಯಾಯಮೂರ್ತಿ ಆರವಿಂದ್ ಎನ್.ವಿ, ಎಸ್‌ಪಿ ಆಟೋನಿಜಾನ್, ಡಿವೈಎಸ್‌ಪಿ ಎಸ್.ಸುದೀರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಸರ್ವೇಶ್, ಚಿಂತಾಮಣಿ ಇಒ ಎಸ್.ಆನಂದ್, ಲೋಕಾಯುಕ್ತ ಪಿಐಗಳಾದ ಆಂಜನಪ್ಪ, ರೇಣುಕ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಇದ್ದರು.

PREV

Recommended Stories

ಕೂಡಲೇ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿ : ತೇಜಸ್ವಿ ಆಗ್ರಹ
ಐದು ಸಾವಿರ ಕೋಟಿ ರು. ವೆಚ್ಚದ 5ನೇ ಹಂತದ ಕಾವೇರಿ ಯೋಜನೆಗೆ ಕೇವಲ 70 ಸಾವಿರ ಸಂಪರ್ಕ!