ಅಭಿವೃದ್ಧಿ ಕಾರ್ಯಕ್ಕೆ ನೆರವಾಗಿ

KannadaprabhaNewsNetwork | Published : Jan 30, 2024 2:00 AM

ಸಾರಾಂಶ

ಅಭಿವೃದ್ಧಿ ಕಾರ್ಯಕ್ಕೆ ನೆರವಾಗಿ: ಶಾಸಕ ರಾಜುಗೌಡ

ದೇವರಹಿಪ್ಪರಗಿ:

ಸರ್ವಜನರ ಸಹಕಾರದಿಂದ ಒಳ್ಳೆಯ ಕಾರ್ಯವಾಗಲು ಸಾಧ್ಯ. ಜನರು ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿಕೊಂಡು ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ಪಟ್ಟಣದ ಹೊಸೂರ ದನದ ಬಜಾರ್ ಹತ್ತಿರ ಶುಕ್ರವಾರ ಪಪಂ ವತಿಯಿಂದ ಎನ್‌ಎಂಪಿಸಿಎಸ್ ಯೋಜನೆ ಅಡಿಯಲ್ಲಿ ವಾ.ನಂ-14 ಮತ್ತು 05ರಲ್ಲಿ ಸುಮಾರು ₹30 ಲಕ್ಷ, ವೆಚ್ಚದ ಸಮುದಾಯ ಶೌಚಾಲಯಗಳ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಕೂಡ ಮೂಲ ಸೌಕರ್ಯಗಳನ್ನು ಪಡೆಯುವಲ್ಲಿ ಪ್ರಯತ್ನಿಸುವ ಜತೆ ಶೌಚಾಲಯಗಳ ನಿರ್ಮಾಣದಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ಹೇಳಿದರು.

ಅಧಿಕಾರಿಗಳು ಜನರಲ್ಲಿ ಶೌಚಾಲಯಗಳ ಕುರಿತು ಜಾಗೃತಿ ಮೂಡಿಸಬೇಕು. ಬಯಲು ಶೌಚದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶೇ.80 ರಷ್ಟು ರೋಗಗಳು ಬಹಿರ್ದೆಸೆಯಿಂದ ಬರುತ್ತವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಚ್ಛ ಭಾರತ ಯೋಜನೆಯ ಸದುಪಯೋಗಪಡಿಸಿಕೊಂಡು ಪಟ್ಟಣದ ಜನರು ಉತ್ತಮ ಆರೋಗ್ಯ ದೃಷ್ಟಿಯಿಂದ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಬೇಕು ಎಂದು ಹೇಳಿದರು.

ಪಪಂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಪ.ಪಂ ಆಡಳಿತ ಅಧಿಕಾರಿಗಳಾದ ಪ್ರಕಾಶ ಸಿಂದಗಿ, ತಾಪಂ ಇಒ ಭಾರತಿ ಚೆಲುವಯ್ಯ, ಪಪಂ ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ, ಶಾಂತಯ್ಯ ಜಡಿಮಠ, ಸಿಂಧೂರ ಡಾಲೇರ, ಪ್ರಕಾಶ ಮಲ್ಹಾರಿ, ಅಬ್ದುಲ್ ಚೌದರಿ, ನಬಿರಸೂಲ ಮಣೂರ, ಬಸವರಾಜ ದೇವಣಗಾಂವ, ಮುಖಂಡರುಗಳಾದ ಮುನೀರ್ ಅಹ್ಮದ್ ಮಳಖೇಡ, ಶರಣು ಧರಿ, ಜಬ್ಬಾರ್ ಮೊಮೀನ, ಕಾಸು ವಡವಡಗಿ, ಸುನೀಲ ಮಾಗಿ,ಹಣಮಂತ ತಾಂಬೆ,ಪ.ಪಂ ಕಿರಿಯ ಅಭಿಯಂತರರಾದ ಗುರುರಾಜ ಬಿರಾದಾರ, ಕಿರಿಯ ಆರೋಗ್ಯ ನಿರೀಕ್ಷಕರಾದ ಫಿರೋಜ್ ಮುಲ್ಲಾ, ಸೋಮಶೇಖರ ಭೋವಿ, ಗುತ್ತಿಗೆದಾರ ಭೀರುಗೊಂಡ ಸೇರಿದಂತೆ ಪಟ್ಟಣದ ಪ್ರಮುಖರು ಗಣ್ಯರು ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Share this article