ಕನ್ನಡಪ್ರಭ ವಾರ್ತೆ ಮೂಲ್ಕಿ
ಸಮಾಜ ಸೇವಕ ದಿ. ಸುಖಾನಂದ ಶೆಟ್ಟಿ ಅವರಂತಹ ಹಿಂದೂ ನಾಯಕರ ನೆನಪು ಅಜರಾಮರ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದ್ದಾರೆ.ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದ ಸಮೀಪದಲ್ಲಿ ಶ್ರೀ ರಾಮ ಫ್ರೆಂಡ್ಸ್ ಅಂಗರಗುಡ್ಡೆ ಆಶ್ರಯದಲ್ಲಿ ಸಹಾಯಹಸ್ತ ದ ಸಹಯೋಗದೊಂದಿಗೆ ದಿ. ಸುಖಾನಂದ ಶೆಟ್ಟಿ ಸ್ಮರಣಾರ್ಥ ಜರಗಿದ ಸುಮಾರು ೧೦೦ ಜನರಿಗೆ ಅಂಚೆ ಇಲಾಖೆಯ ರು. ೧೦ ಲಕ್ಷದ ಅಪಘಾತ ವಿಮೆ ನೋಂದಣಿ , ಶ್ರೀನಿವಾಸ ಆಸ್ಪತ್ರೆ ಮುಕ್ಕ ಸಹಯೋಗದಲ್ಲಿ ಆರೋಗ್ಯ ಶಿಬಿರ , ಹಗ್ಗ ಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟ ( ಹೊನಲು ಬೆಳಕಿನ ಪಂದ್ಯಾಟ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಾಪು ಶಾಸಕ ಗುರ್ಮೆ ಉಪಸ್ಥಿತಿಯಲ್ಲಿ ಹಲವಾರು ಮಂದಿಗೆ ಅಂಚೆ ಇಲಾಖೆಯ ೧೦ ಲಕ್ಷ ರು. ವೆಚ್ಚದ ಉಚಿತ ಅಪಘಾತ ವಿಮೆ ಪಾಲಿಸಿ ಹಸ್ತಾಂತರ ಮಾಡಲಾಯಿತು.ಈಶ್ವರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಮೂಲ್ಕಿ ಮೂಡಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಮಂಜಣ್ಣ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ಮನೋಜ್ ಕೋಡಿಕೆರೆ, ಕಿನ್ನಿಗೊಳಿಯ ಯುಗಪುರುಷದ ಭುವನಾಭಿರಾಮ ಉಡುಪ, ದ. ಕ ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ನಂದನ್ ಮಲ್ಯ , ದ.ಕ. ಬಿಜೆಪಿಯ ಕಸ್ತೂರಿ ಪಂಜ, ಬಿಜೆಪಿ ನಾಯಕ ಲಕ್ಷಣ್ ಕೋಟ್ಯಾನ್ , ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು , ವಿನೋದ್ ಬೆಳ್ಳಾಯರು, ಮಾಜಿ ತಾ. ಪಂ. ಸದಸ್ಯ ದಿವಾಕರ ಕರ್ಕೇರಾ , ಮೂಲ್ಜ್ಕಿ ನಗರ ಪಂಚಾಯತ್ ಸದಸ್ಯ ಶೈಲೇಶ್ ಅಂಚನ್, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಶೆಟ್ಟಿಗಾರ್, ಹಳೆಯಂಗಡಿ ಗ್ರಾ. ಪಂ. ಅಧ್ಯಕ್ಷೆ ಪೂರ್ಣಿಮಾ , ರಾಮ ಭಜನಾ ಮಂದಿರ ಅಧ್ಯಕ್ಷ ಸಂಪತ್ ಕುಮಾರ್ ಉಪಿಸ್ಥಿತರಿದ್ದರು.
ಸಂಘಟಕ ಜೀವನ್ ಶೆಟ್ಟಿ ಸ್ವಾಗತಿಸಿದರು. ಸುದೀರ್ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ನಿರೂಪಿಸಿದರು.